ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 49.78 ಲಕ್ಷ ಉಳಿತಾಯ ಆಯವ್ಯಯ ಮಂಡನೆ

Last Updated 13 ಏಪ್ರಿಲ್ 2022, 3:46 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಅನಿತಾ ನಾಗರಾಜ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ₹ 49.78 ಲಕ್ಷ ಉಳಿತಾಯ ಬಜೆಟ್‌ ಮಂಡಿಸಲಾಯಿತು.

2022-23ನೇ ಸಾಲಿನ ಬಜೆಟ್‌ಗೆ ಸದಸ್ಯರು ಸೇರಿದಂತೆ ಶಾಸಕರು ಒಪ್ಪಿಗೆ ಸೂಚಿಸಿದರು. ಬಜೆಟ್‌ನ ಒಟ್ಟು ಮೊತ್ತ ₹ 68.95 ಕೋಟಿ. ಪ್ರಾರಂಭಿಕ ಶುಲ್ಕ ₹ 1.70 ಕೋಟಿ. ಒಟ್ಟು ಆದಾಯ ₹ 110.43 ಕೋಟಿ. ಒಟ್ಟು ಖರ್ಚು 111.63 ಕೋಟಿಯಾಗಿದೆ.

ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ಈ ಬಜೆಟ್‌ ಅನ್ನು ಅಧ್ಯಕ್ಷರ ಅಧ್ಯಕ್ಷತೆ ಮತ್ತು ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ಮಂಡಿಸಲಾಗಿದೆ. ಮುಖ್ಯಾಧಿಕಾರಿಯು ಎಲ್ಲಾ ಸದಸ್ಯರ ಸಭೆ ಸೇರಿಸಿ ಆಯಾ ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಹಂತ ಹಂತವಾಗಿ ಬಗೆಹರಿಸಬೇಕು ಎಂದು ಸೂಚಿಸಿದರು.

ಇತಿಹಾಸ ಪ್ರಸಿದ್ಧ ದ್ರೌಪದಾಂಬ ಕರಗ ಮಹೋತ್ಸವವು ಪಟ್ಟಣದಲ್ಲಿ ಏಪ್ರಿಲ್ 16ರಿಂದ 26ರ ವರೆಗೆ ನಡೆಯುತ್ತಿದೆ. ಮುಖ್ಯರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಬೇಕು. ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ಬೀದಿದೀಪ ಸೇರಿದಂತೆ ಮೂಲಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕರಗ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದುದರು.

ಉಪಾಧ್ಯಕ್ಷೆ ಭಾರತಿ ಶಂಕರಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಪಿ.ಎನ್. ಪರಮೇಶ್, ಮುಖ್ಯಾಧಿಕಾರಿ ಸಿ. ಪವನ್ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT