ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಅಭ್ಯರ್ಥಿಗಳ ಉಚ್ಚಾಟನೆ ಮಾಡಿದ ಕಾಂಗ್ರೆಸ್‌

Last Updated 3 ಮೇ 2018, 19:48 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ತರೀಕೆರೆ ಕ್ಷೇತ್ರದ ಹಾಲಿ ಶಾಸಕ ಜಿ.ಎಚ್. ಶ್ರೀನಿವಾಸ ಸೇರಿ 27 ಜನರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಉಚ್ಚಾಟಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಆದೇಶದ ಮೇರೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ತಿಳಿಸಿದ್ದಾರೆ.

ಉಚ್ಚಾಟನೆಯಾದವರು:

ಶ್ರೀಶೈಲ ದಳವಾಯಿ(ಜಮಖಂಡಿ), ನಲ್ಲೂರಹಳ್ಳಿ ನಾಗೇಶ(ಮಹದೇವಪುರ), ಲೋಕೇಶ್ ಗೌಡ(ದಾಸರಹಳ್ಳಿ), ವಿಶಾಲ ಈಶ್ವರ್‌ (ಬಸವನಗುಡಿ), ಮೋಹನ್ ಮೋರೆ(ಬೆಳಗಾವಿ ಗ್ರಾಮೀಣ), ಆನಂದ ಛೋಪ್ರಾ(ಸವದತ್ತಿ), ಲೋಕೇಶ ವಿ. ನಾಯಕ(ಕೂಡ್ಲಿಗಿ), ಪರಮೇಶ್ವರಪ್ಪ (ಹಗರಿಬೊಮ್ಮನಹಳ್ಳಿ), ವೆಂಕಟೇಶ ನಾಯ್ಕ್ (ಸಿರಗುಪ್ಪ), ಚಿನ್ನಸ್ವಾಮಿ (ಚಾಮರಾಜನಗರ), ಸಿದ್ಧಪ್ಪ(ಹನೂರು).

ನವೀನ್ ಕಿರಣ್(ಚಿಕ್ಕಬಳ್ಳಾಪುರ), ಸುರೇಶ ತಲವಾರ್‌(ಕುಡಚಿ), ಮಹಾವೀರ ಮೋಹಿತೆ(ರಾಯಭಾಗ), ರಾಘವೇಂದ್ರ ತೇರದಾಳ(ನವಲಗುಂದ), ಎ.ಎಲ್‌. ಪುಷ್ಪಾ(ಜಗಳೂರು), ಶೇಷೇಗೌಡ(ಅರಕಲಗೂಡು), ರುಕ್ಮಿಣಿ ಸಾವ್ಕಾರ್‌(ರಾಣೆಬೆನ್ನೂರು), ರವಿಕುಮಾರ ಪಾಟೀಲ(ರಾಯಚೂರು ಗ್ರಾಮೀಣ), ಲಾಲಪ್ಪ ನಾಯ್ಕ್(ಮಸ್ಕಿ), ತನುಶ್ರೀ(ಮಾನ್ವಿ), ಜಿ. ಕೃಷ್ಣಪ್ಪ(ಗುಬ್ಬಿ), ನಾರಾಯಣಗೌಡ(ತುರುವೇಕೆರೆ), ನಂಜಮರಿ ಮತ್ತು ನಾರಾಯಣ(ತಿಪಟೂರು), ಕೃಷ್ಣೇಗೌಡ(ಕುಮಟಾ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT