ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ನೆರವಿಗೆ ಹಲವು ಸಾಧನಗಳು

Last Updated 22 ಮೇ 2018, 19:30 IST
ಅಕ್ಷರ ಗಾತ್ರ

ವಯಸ್ಸಿಗಿಂತ ಮುಂಚೆಯೇ ಮರೆಗುಳಿ ಸ್ವಭಾವ ಕಾಡುತ್ತದೆ. ಹಲವು ಹಿರಿಯರಿಗೆ ಇದೊಂದು ದೊಡ್ಡ ಸಮಸ್ಯೆ. ಎಲ್ಲರೂ ಕಚೇರಿಗಳಿಗೆ ಹೊರಟರೆ ಮನೆಯಲ್ಲಿ ಒಬ್ಬರೇ ಇರಬೇಕಾಗುತ್ತದೆ. ಇಳಿವಯಸ್ಸಿನಲ್ಲಿ ಔಷಧಿ ಸೇವಿಸುವುದೂ ಕಷ್ಟವೇ. ಇಂತಹ ಹಲವು ಸಮಸ್ಯೆಗಳಿಗೆ ತಂತ್ರಜ್ಞಾನದ ಸಹಾಯ ಪಡೆಯಬಹುದು.

ಬಿಪಿ ತಿಳಿಸುವ ನೋಕಿಯಾ

ರಕ್ತದೊತ್ತಡವನ್ನು ಆಗಾಗ್ಗೆ ತಿಳಿಸುವ ಸಾಧನ ನೋಕಿಯಾ ಬಿಪಿಎಂ+. ಇತರರ ಸಹಾಯವಿಲ್ಲದೆ, ಸುಲಭವಾಗಿ ಬಳಸಿಕೊಳ್ಳಲು ನೆರವಾಗುವಂತೆ ಇದನ್ನು ತಯಾರಿಸಲಾಗಿದೆ. ಪ್ರಯಾಣದ ಸಂದರ್ಭಗಳಲ್ಲಿ ದೂರದ ಊರುಗಳಲ್ಲಿ ಇದ್ದಾಗ, ಇದನ್ನು ಧರಿಸಿ ರಕ್ತದೊತ್ತಡ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಈ ಸ್ಮಾರ್ಟ್ ಸಾದನ ತಿಳಿಸುವ ರೀಡಿಂಗ್ ಅನ್ನು ಸ್ಮಾರ್ಟ್ ಫೋನ್ ನಲ್ಲಿ ಜೋಪಾನ ಮಾಡಿ ಇಡಬಹುದು. ಐಒಎಸ್ ಮತ್ತು ಅಂಡ್ರಾಯ್ಡ್ ಬಳಕೆದಾರರು ಈ ಸಾಧನದೊಂದಿಗೆ ಜೋಡಣೆಯಾಗಿರುವ ‘ನೋಕಿಯಾ ಹೆಲ್ತ್ ಮ್ಯಾಟರ್’ ತಂತ್ರಾಂಶವನ್ನು ಬಳಸಿಕೊಳ್ಳಬಹುದು. ಇದನ್ನು ಅಳವಡಿಸಿಕೊಂಡು ಬಿಪಿಎಂಪ್ಲಸ್ ಮಾಹಿತಿಯನ್ನು ಫೋನ್‌ಗೆ ಜೋಡಿಸಿ ನಿಗಾವಹಿಸಬಹುದು.

ರೀಡಿಂಗ್ಸ್‌ಗಳನ್ನು ವಿವಿಧ ಬಣ್ಣಗಳಲ್ಲಿ ವಿಭಜಿಸಿ ನೋಡಬಹುದು. ಬ್ಲೂ ಟೂತ್ ಮೂಲಕ ಸಾಧನವನ್ನು ಫೋನ್‌ಗೆ ಜೋಡಿಸಬಹುದು. ಬೆಲೆ ₹17,999

ನಾವು ಚಿಕ್ಕವರಿದ್ದಾಗ ಕಣ್ಣಿನ ರೆಪ್ಪೆ ಕಾಪಾಡುವ ಹಾಗೆ ಜೋಪಾನವಾಗಿ ನೋಡಿಕೊಳ್ಳುವ ನಮ್ಮ ಹಿರಿಯರನ್ನು ನಾವು ಕೂಡ ಮಕ್ಕಳಂತೆ ನೋಡಿಕೊಳ್ಳಬೇಕು. ಅವರ ಮೇಲಾ ನಿಗಾ ಇಡಲು ತಂತ್ರಜ್ಞಾನ ನೆರವು ಬೇಕಾದರೆ ‘ಡಿ-ಲಿಂಕ್ ಡಿಸಿಎಸ್-933ಎಲ್’ ಕ್ಯಾಮೆರಾ ಸಹಾಯ ಪಡೆಯಬಹುದು. ಮನೆಯಲ್ಲಿ ಅಳವಡಿಸಿರುವ ವೈ-ಫೈ ರೌಟರ್ ಜತೆ ಇದನ್ನು ಜೋಡಿಸಬಹುದು.

ನೀವು ಎಲ್ಲೇ ಇದ್ದರೂ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ಮೂಲಕ ಮನೆಯಲ್ಲಿ ನಡೆಯುವ ಚಟುವಟಿಕೆಗಳನ್ನು ಲೈವ್ ಸ್ಟ್ರೀಮಿಂಗ್ ನಲ್ಲಿ ನೋಡಬಹುದು.

ಬೆಳಕು ಮಂದವಾಗಿದ್ದರೂ ಫುಟೇಜ್ ಸ್ಪಷ್ಟವಾಗಿರುತ್ತದೆ. ಬೇಕಿದ್ದರೆ ಇ-ಮೇಲ್ ಗೆ ವಿಡಿಯೊ ಸ್ನ್ಯಾಪ್ ಶಾಟ್ಸ್ ಮತ್ತು ಕ್ಲಿಪ್ ಗಳನ್ನೂ ಪಡೆದುಕೊಳ್ಳಬಹುದು. ಬೆಲೆ ₹2.900

ಜಾರಿ ಬೀಳದಿರಲು

ಮನೆಯ ಅಂದ ಹೆಚ್ಚಿಸಲು ಎಲ್ಲೆಲ್ಲೂ ಟೈಲ್ಸ್ ಅಳವಡಿಸಿರುತ್ತೇವೆ. ಅವು ಒದ್ದೆಯಾದರೆ, ನಡೆಯುವಾಗ ಜಾರಿ ಬೀಳುವ ಅಪಾಯ ಇರುತ್ತದೆ. ಅದರಲ್ಲೂ ರಾತ್ರಿಯಲ್ಲಿ ನಡೆಯು
ವಾಗ ಇನ್ನೂ ಎಚ್ಚರಿಕೆಯಿಂದ ಇರಬೇಕು. ಸ್ಪಷ್ಟವಾದ ಬೆಳಕು ನೀಡುತ್ತಾ, ಸೆನ್ಸರ್ ಗಳ ಮೂಲಕ ಎಚ್ಚರಿಕೆ ನೀಡುವ ‘ಜುವೊ ವಂಡರ್ ಲೈಟ್ ಟಾರ್ಚ್’ ಇಂತಹ ಸಮಯ
ದಲ್ಲಿ ನೆರವಾಗುತ್ತದೆ.

ಎಲ್ಇಡಿ ದೀಪಗಳು ಸೆನ್ಸರ್‌ಗಳ ಸಹಾಯದಿಂದ ಕೆಲಸಮಾಡುತ್ತವೆ. ದಾರಿಯಲ್ಲಿ ನೀರು, ಎಣ್ಣೆ ಬಿದ್ದಿದರೆ ಅಥವಾ ಏನಾದರೂ ವಸ್ತು ಅಡ್ಡ ಇದ್ದರೆ, ಅವು ಸನಿಹಕ್ಕೆ ಬಂದಾಗ ಈ ಸಾಧನದಲ್ಲಿರುವ ಲೈಟ್‌ಗಳು ಬೆಳಗುತ್ತವೆ. ದಾಟಿಕೊಂಡು ಹೋದ ನಂತರ 30 ಸೆಕೆಂಡ್‌ವರೆಗೆ ಮಿನುಗುತ್ತವೆ. ಬ್ಯಾಟರಿ ಸಹಾಯದಿಂದ ಕೆಲಸ ಮಾಡುವ ಇದರ ಬೆಲೆ ₹1,090.

ಸುಲಭವಾಗಿ ಟ್ರ್ಯಾಕ್ ಮಾಡಲು

ಬೆಂಕಿಪೊಟ್ಟಣದ ಗಾತ್ರದ ಈ ಬಾಕ್ಸ್ ನೋಡಲಿಕ್ಕೆ ಪುಟ್ಟ ಪವರ್ ಬ್ಯಾಂಕ್ ರೀತಿ ಕಾಣಿಸುತ್ತದೆ. ಇದರ ಹೆಸರು ಮೊಟೊರೊಲಾ ಪೀ1500. 1500ಎಂಎಎಚ್ ಸಾಮರ್ಥ್ಯ ಇದರ ಬ್ಯಾಟರಿ ಮೂಲಕ ತುರ್ತು ಸಂದರ್ಭಗಳಲ್ಲಿ ಚಾರ್ಜಿಂಗ್ ಮಾಡಿಕೊಳ್ಳಬಹುದು. ಇದರ ವಿಶೇಷ ಏನೆಂದರೆ, ಇದೊಂದು ಟ್ರ್ಯಾಕಿಂಗ್ ಸಾಧನ. ಇದರ ಒಂದು ತುದಿಯಲ್ಲಿರುವ ಕೊಂಡಿಗೆ ಬೀಗದ ಕೈಗಳನ್ನು ಸಿಕ್ಕಿಸಬಹುದು. ಆಗ ಕೀಚೈನ್ ರೀತಿ ಬದಲಾಗುತ್ತದೆ. ಮರೆವು ಸ್ವಭಾವದವರು, ಬೀಗದ ಕೈಗಳನ್ನು ಸುಲಭವಾಗಿ ಹುಡುಕಲು ನೆರವಾಗುತ್ತದೆ. ಮೊಟೊರೊಲಾ ಕನೆಕ್ಟ್ ತಂತ್ರಾಂಶದ ಮೂಲಕ ಸ್ಮಾರ್ಟ್‌ಫೋನ್‌ಗೆ ಜೋಡಿಸಬಹುದು. ಬ್ಲೂಟೂತ್ ನೆಟ್‌ವರ್ಕ್ ಮೂಲಕವೂ ಕೆಲಸ ಮಾಡುತ್ತದೆ. ಒಂದು ವೇಳೆ ಇದನ್ನು ಎಲ್ಲಾದರೂ ಹೊರಗಡೆ ಕಳೆದುಕೊಂಡಿದ್ದರೆ, ಮ್ಯಾಜಿಂಗ್ ಮೂಲಕ ಲೊಕೇಷನ್ ಪತ್ತೆಹಚ್ಚಬಹುದು. ಇದರ ಬೆಲೆ ₹9.990.

ಸಮಯಕ್ಕೆ ಔಷಧಿ

ವೃದ್ಧಾಪ್ಯದಲ್ಲಿ ಔಷಧಿ ಸೇವನೆ ಅನಿವಾರ್ಯ. ಯಾವ ಹೊತ್ತಿಗೆ ಎಷ್ಟು ಮಾತ್ರೆ ಸೇವಿಸಬೇಕು ಎಂದು ಬರೆದಿಟ್ಟುಕೊಂಡರೂ, ಸಮಯಕ್ಕೆ ಸರಿಯಾಗಿ ಮಾತ್ರೆ ಸೇವಿಸುವುದನ್ನು ಹಲವರು ಮರೆಯುತ್ತಿರುತ್ತಾರೆ. ಇಂಥವರಿಗೆ ‘ಮೆಡಿಸೆಫ್ ಪಿಲ್ ರಿಮೈಂಡ್’ ಮತ್ತು ಮೆಡಿಕೇಷನ್ ಟ್ರ್ಯಾಕರ್ ತಂತ್ರಾಶ ನೆರವಾಗುತ್ತವೆ. ಈ ತಂತ್ರಾಂಶವನ್ನು ಅಳವಡಿಸಿಕೊಂಡ ನಂತರ, ಸೇವಿಸುವ ಔಷಧಿ ಪ್ರಮಾಣ, ಸಮಯವನ್ನು ಜೋಡಿಸಿ ಸೂಚನೆ ನೀಡುವಂತೆ ಮಾಡಬಹುದು.

ಮಾತ್ರೆ, ಸಿರಪ್, ಡ್ರಾಪ್ಸ್ ಹೀಗೆ ಯಾವುದಾದರೂ ಸರಿ ಸುಲಭವಾಗಿ ಟೈಪ್ ಮಾಡಿ ಸಮಯವನ್ನು ನಿಗದಿ ಪಡಿಸಬಹುದು. ಎಲ್ಲಾ ವಿವರಗಳನ್ನು ಜೋಡಿಸಿದರೆ, ಔಷಧಿ ಎಷ್ಟು ದಿನಕ್ಕೆ ಖಾಲಿಯಾಗುತ್ತವೆ ಎಂಬುದನ್ನು ಈ ತಂತ್ರಾಂಶ ಮೊದಲೇ ಸೂಚಿಸುತ್ತದೆ. ಇದರ ಮೂಲಕ ವೈದ್ಯಕೀಯ ದಾಖಲೆಗಳು, ವೈದ್ಯರನ್ನು ಸಂಪರ್ಕಿಸುವ ಸಮಯ ಎಲ್ಲವನ್ನೂ ನಿರ್ವಹಿಸಬಹುದು.

ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಪ್ರತ್ಯೇಕವಾಗಿ ದೊರೆಯುತ್ತದೆ. ಈ ತಂತ್ರಾಂಶವನ್ನು ಬಳಸುವುದು ಕಷ್ಟ ಎನಿಸಿದರೆ ‘ಮೆಡಿಸೆಂಟರ್ ಮೆಡಿಕೇಷನ್ ರಿಮೈಂಡರ್’ ಕ್ಲಾಕ್ ಬಳಸಬಹುದು. ಇದರಲ್ಲಿರುವ ‘ಟಾಕ್’ ಗುಂಡಿ ಒತ್ತಿದರೆ ಸಮಯ ಎಷ್ಟು ಎಂಬುದನ್ನು ತೋರಿಸುತ್ತದೆ. ದಿನಕ್ಕೆ ನಾಲ್ಕು ಬಾರಿ, ನಿಮಗೆ ಯಾವುದನ್ನು ನೆನಪಿಸಬೇಕು ಎಂಬುದನ್ನು ವಾಯಿಸ್ ರೆಕಾರ್ಡ್ ಮೂಲಕ ಜೋಡಿಸಿ ಅದನ್ನು ಅಲರಾಂ ರೀತಿ ತಿಳಿಸುವಂತೆ ಮಾಡಬಹುದು. ಸರಿಯಾಗಿ ಆ ಸಮಯಕ್ಕೆ ನೀವು ರೆಕಾರ್ಡ್ ಮಾಡಿರುವ ಧ್ವನಿ ಕೇಳಿಸುತ್ತದೆ. ಇದರ ಬೆಲೆ ₹3.800.

ಕಣ್ಣಿಗೆ ರೆಪ್ಪೆಯಂತೆ ಕಾಪಾಡುತ್ತದೆ

ನಾವು ಚಿಕ್ಕವರಿದ್ದಾಗ ಕಣ್ಣಿನ್ನು ರೆಪ್ಪೆ ಕಾಪಾಡುವ ಹಾಗೆ ಜೋಪಾನವಾಗಿ ನೋಡಿಕೊಳ್ಳುವ ನಮ್ಮ ಹಿರಿಯರನ್ನು ನಾವು ಕೂಡ ಮಕ್ಕಳಂತೆ ನೋಡಿಕೊಳ್ಳಬೇಕು. ಅವರ ಮೇಲಾ ನಿಗಾ ಇಡಲು ತಂತ್ರಜ್ಞಾನ ನೆರವು ಬೇಕಾದರೆ ‘ಡಿ-ಲಿಂಕ್ ಡಿಸಿಎಸ್-933ಎಲ್’ ಕ್ಯಾಮೆರಾ ಸಹಾಯ ಪಡೆಯಬಹುದು. ಮನೆಯಲ್ಲಿ ಅಳವಡಿಸಿರುವ ವೈ-ಫೈ ರೌಟರ್ ಜತೆ ಇದನ್ನು ಜೋಡಿಸಬಹುದು.

ನೀವು ಮನೆಯಲ್ಲಿ ಇಲ್ಲಿದ್ದದರೆ ಈ ಸಾಧನ ಹಿರಿಯರ ಮೇಲೆ ನಿಗಾ ಇಡುತ್ತದೆ. ನೀವು ಎಲ್ಲೇ ಇದ್ದರೂ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ಮೂಲಕ ಮನೆಯಲ್ಲಿ ನಡೆಯುವ ಚಟುವಟಿಕೆಗಳನ್ನು ಲೈವ್ ಸ್ಟ್ರೀಮಿಂಗ್ ನಲ್ಲಿ ನೋಡಬಹುದು. ಬೆಳಕು ಮಂದವಾಗಿದ್ದರೂ ಫುಟೇಜ್ ಸ್ಪಷ್ಟವಾಗಿರುತ್ತದೆ. ಬೇಕಿದ್ದರೆ ಇ-ಮೇಲ್ ಗೆ ವಿಡಿಯೊ ಸ್ನ್ಯಾಪ್ ಶಾಟ್ಸ್ ಮತ್ತು ಕ್ಲಿಪ್ ಗಳನ್ನೂ ಪಡೆದುಕೊಳ್ಳಬಹುದು. ಇದರ ಬೆಲೆ ₹2.900

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT