ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಚಾಕೊಲೇಟ್ ರೂಪದಲ್ಲಿ ಗಾಂಜಾ ಮಾರಾಟ– ಒಬ್ಬನ ಬಂಧನ 

Last Updated 9 ಜುಲೈ 2022, 15:32 IST
ಅಕ್ಷರ ಗಾತ್ರ

ಕೋಲಾರ‌: ಚಾಕೊಲೇಟ್ ಹಾಗೂ ಗುಟ್ಕಾ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಶುಭಂ ಎಂಬಾತನನ್ನು ಕೋಲಾರ ಅಬಕಾರಿ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದ ಕುರುಗಲ್‌ ಕ್ರಾಸ್‌ನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯಿಂದ ಕಾರ್ಯಾಚರಣೆ ವೇಳೆ ಅಧಿಕಾರಿಗಳು 17 ಕೆ.ಜಿ ತೂಕದ ಗಾಂಜಾ ಚಾಕೊಲೇಟ್ ಹಾಗೂ ದ್ವಿಚಕ್ರ ವಾಹನ ವಶ‌ಪಡಿಸಿಕೊಂಡಿದ್ದಾರೆ.

‘ಆರೋಪಿಯು ಚಿಲ್ಲರೆ ಅಂಗಡಿ, ಬೀಡಾ, ಡಾಬಾ ಹಾಗೂ ಪೆಟ್ಟಿಗೆ ಅಂಗಡಿಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ‘ಮಹಾಕಾಲ್‌’ ಎಂಬ ಹೆಸರಿರುವ ಪ್ಲಾಸ್ಟಿಕ್‌ ಪೊಟ್ಟಣದಲ್ಲಿ ಚಾಕೊಲೇಟ್‌ ರೀತಿ ಉಂಡೆ ಮಾಡಿ ಗಾಂಜಾ ಮಾರಾಟ ಮಾಡಿದ್ದಾನೆ. ₹ 4.65 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಒಂದು ಚಾಕೊಲೇಟ್‌ ಬೆಲೆ ₹ 30ಕ್ಕೆ ಖರೀದಿಸಿ ಅಂಗಡಿಗೆ ₹ 50 ಕ್ಕೆ ಮಾರಾಟ ಮಾಡುತ್ತಾರೆ. 2,964 ಚಾಕೊಲೇಟ್‌ ಪೊಟ್ಟಣಗಳಿದ್ದವು’ ಎಂದು ಅಬಕಾರಿ ಆಯುಕ್ತ ರಮೇಶ್ ಕುಮಾರ್ ತಿಳಿಸಿದರು.

ಅಬಕಾರಿ ಇನ್‌ಸ್ಪೆಕ್ಟರ್‌ ಎ.ಆರ್‌.ಅರುಣಾ, ಸಬ್‌ಇನ್‌ಸ್ಪೆಕ್ಟರ್‌ ಜಯಣ್ಣ, ಕಾನ್‌ಸ್ಟೆಬಲ್‌ ಅನಿಲ್‌ ಹಾಗೂ ಸಾಬೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT