ಅಕ್ಷಯ ತೃತೀಯ: ಚಿನ್ನ ಖರೀದಿ ಭರ್ಜರಿ

ಶುಕ್ರವಾರ, ಮೇ 24, 2019
22 °C

ಅಕ್ಷಯ ತೃತೀಯ: ಚಿನ್ನ ಖರೀದಿ ಭರ್ಜರಿ

Published:
Updated:
Prajavani

ಕೋಲಾರ: ಅಕ್ಷಯ ತೃತೀಯ ಪ್ರಯುಕ್ತ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ಮಂಗಳವಾರ ಚಿನ್ನ ಖರೀದಿ ಭರಾಟೆ ಜೋರಾಗಿತ್ತು.

ಅಕ್ಷಯ ತೃತೀಯ ದಿನದಂದು ಬಂಗಾರ ಕೊಂಡರೆ ವರ್ಷವಿಡೀ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಜನ ಚಿನ್ನಾಭರಣ ಮಳಿಗೆಗಳಿಗೆ ಮುಗಿಬಿದ್ದು ಆಭರಣ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಬಾರಿ ಚಿನ್ನದ ಉಂಗುರ, ಸರ, ನಕ್ಲೆಸ್‌, ಬಂಗಾರದ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆ ಇತ್ತು.

ನಗರದ ಸತ್ಯನಾರಾಯಣ, ಸುಶೀಲ್, ರಾಜೇಶ್, ಅನಂತ್, ರಿತಿ, ಬಾಲಕೃಷ್ಣ ಚಿನ್ನಾಭರಣ ಮಳಿಗೆಗಳಿಗೆ ಗ್ರಾಹಕರಿಂದ ತುಂಬಿ ಹೋಗಿದ್ದವು. ಚಿನ್ನಾಭರಣ ಮಳಿಗೆಗಳ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

‘ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಶಾಶ್ವತವಾಗಿ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಜೋರಾಗಿದೆ. ಗ್ರಾಹಕರು ಅವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಆಭರಣ ಖರೀದಿಸುತ್ತಿದ್ದಾರೆ’ ಎಂದು ಅನಂತ್‌ ಚಿನ್ನಾಭರಣ ಮಳಿಗೆ ಮಾಲೀಕ ರಾಜೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸುಶೀಲ್, ಸತ್ಯನಾರಾಯಣ ಹಾಗೂ ಅನಂತ್‌ ಚಿನ್ನಾಭರಣ ಮಳಿಗೆಗಳಿರುವ ದೊಡ್ಡಪೇಟೆ ರಸ್ತೆಗಳಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮಳಿಗೆಗಳ ಬಳಿ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !