ಸೋಮವಾರ, ನವೆಂಬರ್ 18, 2019
29 °C

ಕಳ್ಳರ ಬಂಧನ: ಮಾಲು ವಶ

Published:
Updated:
prajavani

ಕೋಲಾರ: ಕಾರು, ಬೈಕ್‌ಗಳನ್ನು ಕಳವು ಮಾಡಿ ತಲೆ ಮರಿಸಿಕೊಂಡಿದ್ದ ಇಬ್ಬರು ಕಳ್ಳರನ್ನು ನಗರಠಾಣೆ ಪೊಲೀಸರು ಬಂಧಿಸಿ, ₹11 ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.

‘ಜಿಲ್ಲೆಯ ಮಾಲೂರು ತಾಳ್ಲೂಕಿನ ಮಿರಪನಹಳ್ಳಿ ಗ್ರಾಮದ ಮಂಜುನಾಥ್ (26) ಮತ್ತು ತಮಿಳುನಾಡಿನ ಹೊಸೂರು ತಾಲ್ಲೂಕಿನ ಇಚ್ಚಂಗೂರು ಗೇಟ್‌ನ ವಾಸಿ ಯಾಸೀನ್ (20) ಆರೋಪಿಗಳನ್ನು ಬಂಧಿಸಿದ್ದು, ಇವರಿಂದ 3 ಕಾರು, 1 ದ್ವಿಚಕ್ರ ವಾಹನ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಡಿವೈಎಸ್ಪಿ ಚೌಡಪ್ಪ ತಿಳಿಸಿದರು.

‘ಇಬ್ಬರು ಆರೋಪಿಗಳ ವಿರುದ್ಧ ಕೋಲಾರ ನಗರ ಪೊಲೀಸ್ ಠಾಣೆ, ಬೆಂಗಳೂರು ಮೈಕೋ ಲೇಔಟ್ ಪೊಲೀಸ್ ಠಾಣೆ, ಜೆಪಿ ನಗರ ಪೊಲೀಸ್ ಠಾಣೆ, ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ಹಾಗೂ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದರು.

‘ಕೋಲಾರ ನಗರ ಠಾಣೆ ಇನ್‌ಸ್ಪೆಕ್ಟರ್‌ ಎಂ.ಜಿ.ಫಾರೂಕ್‌ ಪಾಷಾ. ಎಸ್‌ಐ ಎಂ.ಆರ್.ಅಣ್ಣಯ್ಯ ಮತ್ತು ಸಿಬ್ಬಂದಿ ತಂಡವು ಆರೋಪಿಯನ್ನು ಬಂಧಿಸಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸಿಪಿಐ ಫಾರೂಖ್‌ಪಾಷ, ಪಿಎಸ್‌ಐ ಅಣ್ಣಯ್ಯ, ಅಪರಾಧ ವಿಭಾಗದ ಸಿಬ್ಬಂದಿ ಹಮೀದ್‌ಖಾನ್, ರಾಘವೇಂದ್ರ, ನರೇಂದ್ರ, ಆರ್.ನಾರಾಯಣಸ್ವಾಮಿ, ಗುರುಪ್ರಸಾದ್, ಚಲಪತಿ, ಮಂಜುನಾಥ, ವೆಂಕಟರಮಣ, ಶ್ರೀನಾಥ್, ಜಾವೀದ್‌ಪಾಷ, ಶ್ರೀನಿವಾಸಲು ಹಾಜರಿದ್ದರು.

ಪ್ರತಿಕ್ರಿಯಿಸಿ (+)