ಬಂಗಾರಪೇಟೆ: ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ತಹಶೀಲ್ದಾರ್ ಕೆ.ಎನ್. ಸುಜಾತ ಮತ್ತು ಇಲಾಖೆ ಸಹಾಯಕ ನಿರ್ದೇಶಕಿ ಶಿವಕುಮಾರಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು.

ವಿದ್ಯಾರ್ಥಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಸರ್ಕಾರಿ ಸಾಮಗ್ರಿಗಳ ಅಕ್ರಮ ಸಾಗಾಟದ ಆರೋಪದ ಹಿನ್ನೆಲೆ ಅಧಿಕಾರಿಗಳು ದಿಢೀರನೇ ಭೇಟಿ ನೀಡಿದ್ದರು.

ಕೆಲವು ದಿನಗಳ ಹಿಂದೆ ತ್ರಿಚಕ್ರ ವಾಹನವೊಂದರಲ್ಲಿ ವಿದ್ಯಾರ್ಥಿನಿಲಯಕ್ಕೆ ಸೇರಿದ ಹಾಸಿಗೆ ಹಾಗೂ ಫ್ಯಾನ್ಗಳನ್ನು ಯಾರಿಗೂ ತಿಳಿಸದೆ ಬೇರೆಡೆಗೆ ಸಾಗಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಉಂಟಾಗಿತ್ತು. ಹಾಗಾಗಿ ವಿದ್ಯಾರ್ಥಿ ನಿಲಯದ ಅಕ್ರಮಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ ಅಧಿಕಾರಿಗಳು ಭೇಟಿ ನೀಡಿದ್ದರು.

ತಹಶೀಲ್ದಾರ್ ಸುಜಾತ ಅವರು ವಿದ್ಯಾರ್ಥಿನಿಯರ ವಾಸ್ತವ್ಯದ ಕೊಠಡಿ, ಅಡುಗೆ ಮನೆ ಹಾಗೂ ಶೌಚಾಲಯವನ್ನು ವೀಕ್ಷಿಸಿದರು. ನಂತರ ವಿದ್ಯಾರ್ಥಿನಿಯರೊಂದಿಗೆ ಮಾತುಕತೆ ನಡೆಸಿ ಅವರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ ಹಾಗೂ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ಸಹಾಯಕ ನಿರ್ದೇಶಕಿ ಶಿವಕುಮಾರಿ ಮಾತನಾಡಿ, ಸಾಮಗ್ರಿಗಳ ಸಾಗಾಟದ ಬಗ್ಗೆ ವಿದ್ಯಾರ್ಥಿನಿಲಯ ವಾರ್ಡನ್ಗೆ ಕೇಳಲಾದ ನೋಟಿಸ್ಗೆ ನೀಡಿರುವ ಸಮರ್ಥನೆ ತರ್ಕಬದ್ಧವಾಗಿಲ್ಲ. ಯಾವುದೇ ಪೂರ್ವಾನುಮತಿ ಇಲ್ಲದೆ ಸರ್ಕಾರಿ ಸ್ವತ್ತುಗಳನ್ನು ಹೊರಕ್ಕೆ ಕೊಂಡೊಯ್ದಿರುವುದು ಗಂಭೀರ ಲೋಪ. ಹಾಜರಾತಿ ನಿರ್ವಹಣೆಯಲ್ಲಿ ವಾರ್ಡನ್ ಸಂಪೂರ್ಣ ವಿಫಲರಾಗಿದ್ದಾರೆ. ರಾತ್ರಿ ಸಮಯದಲ್ಲಿ ವಿದ್ಯಾರ್ಥಿನಿಯರು ಹಾಸ್ಟೆಲ್ಗೆ ಬಾರದಿದ್ದರೂ, ಅವರ ಚಲನವಲನದ ಬಗ್ಗೆ ಯಾವುದೇ ವಿಚಾರಣೆ ನಡೆಸದೆ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎಂದು ಹಾಸ್ಟೆಲ್ ವಾರ್ಡನ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಹಾಸ್ಟೆಲ್ ವಾರ್ಡನ್ ಕಾರ್ಯವೈಖರಿಯ ವರದಿಯನ್ನು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.