ದಟ್ಟಣೆ ಅವಧಿಯಲ್ಲಿ ಕೆ.ಆರ್.ಪುರಂ, ವೈಟ್‌ಫೀಲ್ಡ್ ಭಾಗದ ಐಟಿ ಕಂಪನಿಗಳು ಸಂಚರಿಸುವವರಿಗೆ ತೊಂದರೆಯಾಗುತ್ತಿದೆ. ಬಸ್‌ಗಳು ತುಂಬಿದ್ದು, ನಿಂತುಕೊಂಡೇ ಪ್ರಯಾಣಿಸಬೇಕು. ಹಾಗಾಗಿ ಉದಯ್ ಎಕ್ಸ್‌ಪ್ರೆಸ್ ನಿಲುಗಡೆ ಮಾಡಿದರೆ ಮಹಿಳೆಯರಿಗೆ ಅನುಕೂಲವಾಗುತ್ತದೆ.
–ವಿ.ಸುಜಾತಾ, ಸಾಫ್ಟ್‌ವೇರ್ ಉದ್ಯೋಗಿ, ಬಂಗಾರಪೇಟೆ
ಬೆಳಗ್ಗೆ 8.20ರ ನಂತರ ಬೆಂಗಳೂರಿಗೆ ಹೋಗಲು ಬಂಗಾರಪೇಟೆಯಿಂದ ಸೂಕ್ತ ರೈಲುಗಳಿಲ್ಲ. ಸೂಕ್ತ ಸಮಯಕ್ಕೆ ಹಾದು ಹೋಗುವ ಉದಯ್ ಎಕ್ಸ್‌ಪ್ರೆಸ್ ರೈಲು ಕನಿಷ್ಠ 2 ನಿಮಿಷ ನಿಲುಗಡೆ ನೀಡಿದರೆ ಇಡೀ ಕೋಲಾರ ಜಿಲ್ಲೆಯ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
–ವೆಂಕಟಾಚಲಪತಿ, ಬಂಗಾರಪೇಟೆ ಪ್ರಯಾಣಿಕರು
ಬಂಗಾರಪೇಟೆ ರೈಲ್ವೆ ನಿಲ್ದಾಣದಿಂದ ಬೆಂಗಳೂರಿನ ಕೆಆರ್‌ಎಸ್ ನಿಲ್ದಾಣದವರೆಗೆ ಪ್ರತ್ಯೇಕ ರೈಲನ್ನು ನೂತನವಾಗಿ ಪ್ರಾರಂಭಿಸಲು ರೈಲ್ವೆ ಸಚಿವರಿಗೆ ಮನವಿ ಮಾಡುತ್ತೇನೆ.