ಬಂಗಾರಪೇಟೆ: ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ತನ್ನ ಮೂರು ವರ್ಷದ ಅವಳಿ ಮಕ್ಕಳೊಂದಿಗೆ ತಾಲ್ಲೂಕಿನ ಬೂದಿಕೋಟೆಯ ವೇಣುಗೋಪಾಲಸ್ವಾಮಿ ದೇವಾಲಯ ಆವರಣದ ನೀರಿನ ಸಂಪ್ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಕ್ಕಳು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಯಳೆಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಗುರ್ಕಿ ಕಾಲೊನಿಯ ಮುರುಳಿ ಮತ್ತು ಉಷಾ (28) ದಂಪತಿ ಮಕ್ಕಳಾದ ಹರ್ಷಿತ್ ಮತ್ತು ಹಿತೇಶ್ ಮೃತರು.

ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಉಷಾ ಮಕ್ಕಳೊಂದಿಗೆ ಬೂದಿಕೋಟೆಯ ದೇವಾಲಯ ಆವರಣಕ್ಕೆ ಬಂದಿದ್ದಾರೆ. ದೇವಾಲಯದಲ್ಲಿದ್ದ ನೀರಿನ ಸಂಪ್ಗೆ ಮಕ್ಕಳನ್ನು ಹಾಕಿ, ನಂತರ ಆಕೆಯೂ ನೀರಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಗೃಹರಕ್ಷಕ ದಳದ ಸಿಬ್ಬಂದಿ ಶ್ರೀನಿವಾಸ್ ತಕ್ಷಣ ಉಷಾ ಅವರನ್ನು ನೀರಿನಿಂದ ಮೇಲಕ್ಕೆತ್ತಿದ್ದು, ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಅಷ್ಟರೊಳಗೆ ಮಕ್ಕಳು ಮೃತಪಟ್ಟಿದ್ದರು.

ಎಂಟು ವರ್ಷಗಳ ಹಿಂದೆ ಮುರಳಿ ಹಾಗೂ ಉಷಾ ವಿವಾಹವಾಗಿದ್ದರು. ಮುರಳಿ ಪ್ರತಿನಿತ್ಯ ಮನೆಗೆ ಕುಡಿದು ಬಂದು ಪತ್ನಿ ಉಷಾ ಜೊತೆ ಜಗಳ ಮಾಡುವುದು. ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆದರೂ ಮುರಳಿ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ ಎಂದು ಮಾಹಿತಿ ತಿಳಿದು ಬಂದಿದೆ.

ಘಟನೆ ಸಂಬಂಧ ಶ್ರೀನಿವಾಸ್ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಡಿವೈಎಸ್ಪಿ ಲಕ್ಷ್ಮಯ್ಯ, ಇನ್ಸ್ಪೆಕ್ಟರ್ ಮಾರ್ಕಂಡೇಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆಜಿಎಫ್ ಆಸ್ಪತ್ರೆಗೆ ರವಾನಿಸಲಾಗಿದೆ. ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಷಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.