ಬಂಗಾರಪೇಟೆ: ಪಟ್ಟಣದ ಎಲ್ಲ 27 ವಾರ್ಡ್ಗಳಲ್ಲಿ ಅಧಿಕೃತವಾಗಿ ಬೀದಿ ನಾಯಿಗಳಿಗಾಗಿ ಫೀಡಿಂಗ್ ಪಾಯಿಂಟ್(ಆಹಾರ ನೀಡುವ ಸ್ಥಳ) ಗಳನ್ನು ಗುರುತಿಸಲಾಗಿದೆ. ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತಲೆನೋವಾಗಿದ್ದ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ನಗರಸಭೆ ಈ ಕ್ರಮ ಕೈಗೊಂಡಿದೆ.

ಆಹಾರಕ್ಕಾಗಿ ಹಿಂಡುಹಿಂಡಾಗಿ ಬೀದಿಗಿಳಿಯುತ್ತಿದ್ದ ನಾಯಿಗಳು ಪಾದಚಾರಿಗಳ ಮೇಲೆ ದಾಳಿ ಮಾಡುತ್ತಿದ್ದವು. ಇದನ್ನು ತಪ್ಪಿಸಲು ನಗರಸಭೆಯು ಪ್ರತಿ ವಾರ್ಡ್ನಲ್ಲಿ ಜನವಸತಿ ಮತ್ತು ವಾಹನ ಸಂಚಾರ ವಿರಳವಿರುವ ಪ್ರತಿ ವಾರ್ಡ್ನಲ್ಲಿ ಫೀಡಿಂಗ್ ಪಾಯಿಂಟ್ಗಳನ್ನು ನಿರ್ಮಿಸಿದೆ.

ಫೀಡಿಂಗ್ ಪಾಯಿಂಟ್ಗಳಿಗೆ ಬರುವ ನಾಯಿಗಳನ್ನು ಗುರುತಿಸಿ ಅವುಗಳಿಗೆ ಸುಲಭವಾಗಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ರೇಬಿಸ್ ಲಸಿಕೆ ನೀಡಲು ನಗರಸಭೆಗೆ ಅನುಕೂಲವಾಗಲಿದೆ. ಹೋಟೆಲ್ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಈ ಯೋಜನೆಯಿಂದ ಕಡಿವಾಣ ಬೀಳಲಿದೆ. ಪಟ್ಟಣದ ಸ್ವಚ್ಛತೆ ಕಾಪಾಡಬಹುದು ಎನ್ನುತ್ತಾರೆ ಸ್ಥಳೀಯರು.

ಬೀದಿ ನಾಯಿಗಳನ್ನು ಕೊಲ್ಲುವುದು ಅಥವಾ ಸ್ಥಳಾಂತರಿಸುವುದು ಕಾನೂನುಬಾಹಿರ. ಹೀಗಾಗಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಅವುಗಳ ಸಂಖ್ಯೆ ನಿಯಂತ್ರಿಸಲು ಈ ಕ್ರಮ ಅನಿವಾರ್ಯವಾಗಿತ್ತು. ಬೀದಿ ನಾಯಿಗಳ ಹಾವಳಿ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಪ್ರತಿ ವಾರ್ಡ್ನಲ್ಲಿ ಫೀಡಿಂಗ್ ಪಾಯಿಂಟ್ ಮಾಡುವುದರಿಂದ ನಾಯಿಗಳು ಆಹಾರಕ್ಕಾಗಿ ಅಲೆದಾಡುವುದು ತಪ್ಪಲಿದೆ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಪಾದಚಾರಿಗಳು ರಸ್ತೆಯಲ್ಲಿ ಭಯವಿಲ್ಲದೆ ಓಡಾಡಬಹುದು ಎಂದು ನಗರಸಭೆ ಆಯುಕ್ತ ಸತ್ಯನಾರಾಯಣ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-18-382552487

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.