ಬೇತಮಂಗಲ: ಮೂರು ದಿನಗಳಿಂದ ನಡೆದ ಸುಂದರಪಾಳ್ಯ ಗ್ರಾಮದ ಪಾಲುಪಟ್ಟಮ್ಮ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ತೆರೆ ಕಂಡಿತು.

ಜಾತ್ರೆ ಅಂಗವಾಗಿ ಸೋಮವಾರ ಬೆಳಗ್ಗೆಯಿಂದ ವಿವಿಧ ಪೂಜಾ ಕಾರ್ಯಗಳು ನಡೆದವು. ದೇವಿ ಹಾಗೂ ದೇವಾಲಯವನ್ನು ವಿವಿಧ ಹೂ ಮತ್ತು ದೀಪಗಳಿಂದ ಅಲಂಕರಿಸಲಾಗಿತ್ತು.

ಮಧ್ಯಾಹ್ನ ಪಾಲುಪಟ್ಟಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪುಷ್ಪ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಜೊತೆಗೆ ಮೆರವಣಿಗೆಗೆ ತಮಟೆ, ಗಾಡಿ ಗೊಂಬೆಗಳು ಹಾಗೂ ವಿವಿಧ ಜಾನಪದ ಕಲಾತಂಡಗಳು ಮೆರಗು ನೀಡಿದವು.

ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ರಾತ್ರಿ ನಡೆದ ಕರಗ ಮಹೋತ್ಸವವು ಜಾತ್ರೆಗೆ ಮೆರುಗು ನೀಡಿತು. ಬೇತಮಂಗಲ ಮಂಜುನಾಥ್ ಅವರು ಕರಗ ಹೊತ್ತು ತಮಟೆಯ ಶಬ್ದಕ್ಕೆ ನೃತ್ಯ ಪ್ರದರ್ಶಿಸಿ ಜನರ ಗಮನ ಸೆಳೆದರು. ಜೊತೆಗೆ ಮನೆ ಮನೆಗೆ ತೆರಳಿ ಭಕ್ತರಿಂದ ಪೂಜೆ ಸ್ವೀಕರಿಸಿದರು.

ಮಂಗಳವಾರ ಮಧ್ಯಾಹ್ನ ಕರಗ ಹೊತ್ತ ಪೂಜಾರಿ ಅಗ್ನಿಕುಂಡ ಪ್ರವೇಶಿಸಿ ದೇವಾಲಯ ತಲುಪಿದರು. ನಂತರ ತಲೆಯ ಮೇಲೆ ಒನಕೆ ಹೊತ್ತು ಸಾಗುವ ವಸಂತೋತ್ಸವ ನಡೆಯಿತು.

ವಿವಿಧ ರಾಜಕೀಯ ನಾಯಕರ ಬೆಂಬಲಿಗರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-18-1636703316

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.