ಬುಧವಾರ, ಮೇ 27, 2020
27 °C
ಕೈ ಹಿಡಿದ ಸಹಾಯವಾಣಿ

ಬಿಹಾರದ ಕಾರ್ಮಿಕರಿಗೆ ಸ್ಥಳೀಯರ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಲಾಕ್‌ಡೌನ್‌ನಿಂದ ಹಸಿವಿನಿಂದಾಗಿ ಕಂಗೆಟ್ಟ ಬಿಹಾರದ ಕಾರ್ಮಿಕರನ್ನು ನಗರದ ಹೊರವಲಯದ ಕಂಗಾಂಡ್ಲಹಳ್ಳಿಯಲ್ಲಿ ಉಳಿದುಕೊಂಡಿದ್ದಾರೆ. ಅವರಿಗೆ ಬುಧವಾರ ಆಹಾರ ಪದಾರ್ಥ ವಿತರಣೆ ಮಾಡಲಾಯಿತು.

ಬಿಹಾರದ ಚಂಪಾರಣ್ಯ ಮೋತಿಹಾರ್ ಜಿಲ್ಲೆಯ ಬಾಂತಕ್‌ ಗ್ರಾಮಕ್ಕೆ ಸೇರಿದ ಬಿಜಯ್‌ ಚೌಧರಿ, ನವಲ್‌ಕುಮಾರ್, ಮಂತೋಷ್‌, ರಾಜ್‌ಕುಮಾರ್‌, ಚಂದನ್‌ಕುಮಾರ್‌, ಮೋನಕುಮಾರ್ , ಮನೀಷ್‌ ಕುಮಾರ್ ಮತ್ತು ಜಿತೇಂದ್ರ ಕುಮಾರ್ ಕೆಲಸ ಹುಡುಕಿಕೊಂಡು ರಾಜ್ಯಕ್ಕೆ ಮಾರ್ಚ್‌ 17ರಂದು ಬಂದಿದ್ದರು. ಅವರನ್ನು ಮೇಸ್ತ್ರಿಯೊಬ್ಬ ಕೋಲಾರದ ಬಳಿ ಕರೆದುಕೊಂಡು ಬಂದು, ಕೆಲಸಕ್ಕೆ ಬಿಟ್ಟಿದ್ದ.

ಲಾಕ್‌ಡೌನ್ ಬಳಿಕ ಇದಷ್ಟು ಹಣದಿಂದ ದಿನಸಿ ಖರೀದಿಸಿ ಕೆಲವು ದಿನ ಹಸಿವು ನೀಗಿಸಿಕೊಂಡಿದ್ದಾರೆ. ಬಳಿಕ ರಾಜ್ಯ ಸರ್ಕಾರ ರೂಪಿಸಿರುವ ಸಹಾಯವಾಣಿಗೆ ಕರೆ ಮಾಡಿ ಅಳಲು ಹೇಳಿಕೊಂಡಿದ್ದಾರೆ.  

ಸಹಾಯವಾಣಿ ಸಿಬ್ಬಂದಿ ಈ ಮಾಹಿತಿಯನ್ನು ರೋಟರಿ ಸಂಸ್ಥೆಗೆ ತಿಳಿಸಿದ್ದಾರೆ. ಸಂಸ್ಥೆಯ ಕೋಲಾರ ಜಿಲ್ಲಾ ಪದಾಧಿಕಾರಿ ಲಕ್ಷ್ಮೀನಾರಾಯಣ, ಕ್ಯಾಸಂಬಳ್ಳಿಯ ದಿವಾಕರ ರೆಡ್ಡಿ ಅವರು ಕಾರ್ಮಿಕರು ಇರುವ ಸ್ಥಳ ಹುಡುಕಿ, ನೆರವಿನ ಹಸ್ತ ಚಾಚಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.