ಶಕ್ತಿ ದೇವತೆಗಳ ಜನ್ಮ ದಿನೋತ್ಸವ

7

ಶಕ್ತಿ ದೇವತೆಗಳ ಜನ್ಮ ದಿನೋತ್ಸವ

Published:
Updated:
Deccan Herald

ಕೋಲಾರ: ಚಾಮುಂಡೇಶ್ವರಿ ಹಾಗೂ ನಗರದೇವತೆ ಕೋಲಾರಮ್ಮ ಜಯಂತಿ ಅಂಗವಾಗಿ ಇಲ್ಲಿನ ಶಕ್ತಿ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೂಜೆ ನಡೆಯಿತು.

ಚಾಮುಂಡೇಶ್ವರಿ ಜನ್ಮ ದಿನದಂದು ಒಂಬತ್ತು ಶಕ್ತಿ ದೇವತೆಗಳ ಜನ್ಮ ದಿನೋತ್ಸವ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದೇವತೆ ಕೋಲಾರಮ್ಮ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯ ಆರಂಭವಾಯಿತು.

ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮ, ಅಷ್ಟಾವಧಾನ ಸೇವೆ ನಡೆಯಿತು. ದೇವರ ಮೂರ್ತಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯದ ಒಳಾಂಗಣ ಹಾಗೂ ಹೊರ ಭಾಗವನ್ನು ಅಲಂಕಾರಿಕ ಹೂವುಗಳಿಂದ ಸಿಂಗರಿಸಲಾಗಿತ್ತು. ರಾತ್ರಿ ವಿದ್ಯುತ್ ದೀಪಾಲಂಕಾರವು ಕಣ್ಮನ ಸೆಳೆಯಿತು.

ಅಧಿಕಾರಿಗಳು ಹಾಗೂ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಹಿಳೆಯರು ದೀಪ ಬೆಳಗಿ ದೇವರನ್ನು ಪ್ರಾರ್ಥಿಸಿದರು. ಮಹಿಳೆಯರಿಗೆ ಬಳೆ, ಅರಿಶಿನ ಕುಂಕುಮ ನೀಡಲಾಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಗಲ್‌ಪೇಟೆಯ ಚಾಮುಂಡೇಶ್ವರಿ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು.

ಟೇಕಲ್ ರಸ್ತೆಯಲ್ಲಿನ ಸಪ್ಪಲಮ್ಮ, ರೇಣುಕಾ ಯಲ್ಲಮ್ಮ, ಮಾರೆಮ್ಮ, ಅಮ್ಮವಾರಿಪೇಟೆಯ ಗಂಗಮ್ಮ ದೇವಸ್ಥಾನ, ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಎಲ್ಲ ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !