ಮುಳಬಾಗಿಲು: ಇತ್ತೀಚೆಗೆ ಕಸವಿರೆಡ್ಡಿ ಹಳ್ಳಿ ಗ್ರಾಮದಲ್ಲಿ ರಾಸಾಯನಿಕ ಮಿಶ್ರಿತ ನೀರು ಕುಡಿದು ಸಾವನ್ನಪ್ಪಿದ್ದ ಐದು ಹಸುಗಳಿಗೆ ಸೋಮವಾರ ನಗರದಲ್ಲಿ ಕೋಮುಲ್ ವತಿಯಿಂದ ಪರಿಹಾರ ಹಣದ ಚೆಕ್ ವಿತರಿಸಲಾಯಿತು.

ತಾಲ್ಲೂಕಿನ ಕಸವಿರೆಡ್ಡಿ ಹಳ್ಳಿ ಗ್ರಾಮದಲ್ಲಿ ರೈತರೊಬ್ಬರು ಕೃಷಿ ಚಟುವಟಿಕೆಗಳಿಗೆಂದು ರಾಸಾಯನಿಕ ಗೊಬ್ಬರ ಯೂರಿಯಾ ಮತ್ತಿತರರ ಔಷಧಗಳನ್ನು ಮಿಶ್ರಣ ಮಾಡಿ ಇಡಲಾಗಿತ್ತು. ಆ ನೀರನ್ನು ಗ್ರಾಮದ ಎಸ್.ನಂದಿನಿ, ಕೆ.ವೆಂಕಟೇಶ್, ಎನ್.ವೆಂಕಟೇಶ್ ಹಾಗೂ ಮುನಿಯಪ್ಪ ಎಂಬುವವರ ಹಸುಗಳು ಕುಡಿದು 10 ಹಸುಗಳುಗಳು ಅನಾರೋಗ್ಯಕ್ಕೆ ಒಳಗಾಗಿದ್ದವು. ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಐದು ಹಸುಗಳು ಸಾವನ್ನಪ್ಪಿದ್ದರಿಂದ ಕೋಮುಲ್ ವತಿಯಿಂದ ಪರಿಹಾರದ ಚೆಕ್ ವಿತರಿಸಲಾಯಿತು.

ಈ ವೇಳೆ ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಮಾತನಾಡಿ, ರೈತರು ತಮ್ಮ ಎಲ್ಲಾ ಹಸುಗಳಿಗೆ ವಿಮೆ ಮಾಡಿಸಿಕೊಂಡರೆ ಹಸುಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಕೋಮುಲ್ ವತಿಯಿಂದ ₹70 ಸಾವಿರ ಪರಿಹಾರ ನೀಡಲಾಗುತ್ತದೆ. ಆದರೆ, ಇತ್ತೀಚಿಗೆ ಸಾವನ್ನಪ್ಪಿದ ಐದು ಹಸುಗಳಿಗೆ ವಿಮೆ ಇಲ್ಲದ ಕಾರಣ ಕೋಮುಲ್ ದತ್ತಿ ನಿಧಿಯಿಂದ ತಲಾ ₹10 ಸಾವಿರ ಪರಿಹಾರ ನೀಡಲಾಯಿತು. ರೈತರು ತಪ್ಪದೇ ಹಸುಗಳಿಗೆ ವಿಮೆ ಮಾಡಿಸಿ ಎಂದರು.

ಕೋಮುಲ್ ನಿರ್ದೇಶಕ ಬಿ.ವಿ.ಸಾಮೇಗೌಡ, ವಕೀಲ ಎಂ.ಎಸ್.ಶ್ರೀನಿವಾಸ ರೆಡ್ಡಿ, ಕಸವಿರೆಡ್ಡಿ ಹಳ್ಳಿ ರಾಜು, ಪೊಂಬರಹಳ್ಳಿ ಡೇರಿ ಅಧ್ಯಕ್ಷ ಮಂಜುನಾಥ್, ವಾನಿಗಾನಹಳ್ಳಿ ಡೇರಿ ಅಧ್ಯಕ್ಷ ಎ.ಸಿ.ಕೃಷ್ಣಪ್ಪ, ವ್ಯವಸ್ಥಾಪಕ ಡಾ.ಕಿರಣ್ ಕುಮಾರ್, ಮಧು ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.