ಸಂಭ್ರಮದ ಗಣೇಶೋತ್ಸವ ಆಚರಣೆ; 15ಕ್ಕೆ ಸಾಮೂಹಿಕ ಗಣೇಶ ವಿಸರ್ಜನೆ

7

ಸಂಭ್ರಮದ ಗಣೇಶೋತ್ಸವ ಆಚರಣೆ; 15ಕ್ಕೆ ಸಾಮೂಹಿಕ ಗಣೇಶ ವಿಸರ್ಜನೆ

Published:
Updated:
Deccan Herald

ಕೋಲಾರ: ಗಣೇಶ ಚತುರ್ಥಿಯ ಆಚರಣೆ ಬುಧವಾರ ಸಂಭ್ರಮ, ಸಡಗರದಿಂದ ಜರುಗಿತು. ವಿವಿಧೆಡೆಯ ಸಂಘಸಂಸ್ಥೆಗಳವರು ವಿವಿಧ ಭಂಗಿಯಲ್ಲಿನ ಬೃಹತ್ ಮೂರ್ತಿಗಳನ್ನು ಪ್ರತಿಷ್ಟಾಪಿಸಿದರೆ, ಚಿಕ್ಕ ಮೂರ್ತಿಗಳನ್ನು ತಂದು ಭಕ್ತಿಯಿಂದ ಪೂಜಿಸಿದರು.

ಬಾಲಗಂಗಾಧರ ತಿಲಕ್ ಗಣೇಶ ಸಮಿತಿ, ಭಜರಂಗದಳ, ಅಖಂಡ ಭಾರತ ವಿನಾಯಕ ಮಹಾಸಭಾ, ವಕೀಲರ ಸಂಘ, ಎಪಿಎಂಸಿ ಮಾರುಕಟ್ಟೆ, ಸೇರಿದಂತೆ ವಿವಿಧ ಸಂಘಟನೆಗಳು, ಶಾಲಾ ಕಾಲೇಜುಗಳಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ಬಾಲಗಂಗಾಧರ ತಿಲಕ್ ಗಣೇಶ ಸಮಿತಿ ನಗರದ ಗಾಂಧಿವನದಲ್ಲಿ ಪ್ರತಿಷ್ಟಾಪಿಸಿದ್ದ ಬೃಹತ್ ಗಾತ್ರದ ಶಿವ, ಗಣೇಶ ನೋಡಲು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ನಗರದ ಎಸ್‌ಎನ್‌ಆರ್ ಆಸ್ಪತ್ರೆ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಸಭಾದಿಂದ ಗಣೇಶೋತ್ಸವ ಆಚರಿಸಿದರು. ಗಣೇಶ ಮೂರ್ತಿಗಳ ದರ್ಶನ ಪಡೆಯಲು ಬಂದ ಸಾರ್ವಜನಿಕರಿಗೆ ಮಂಗಳಾರಾತಿ, ಪ್ರಸಾದ ವಿನಿಯೋಗ ನಡೆಯಿತು. ಶುಕ್ರವಾರ ಸಂಜೆ ಸಾಂಸ್ಕೃತಿಕ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ವಿಶೇಷ ಪೂಜಾ ಕಾರ್ಯಕ್ರಮ: ಗಣೇಶ ಚತುರ್ಥಿ ಅಂಗವಾಗಿ ನಗರದ ಕೆಇಬಿ ಗಣೇಶ ದೇವಾಲಯ, ಕೋಲಾ ರಮ್ಮ ದೇವಾಲಯ, ಸೋಮೇಶ್ವರ ದೇವಾಲಯದಲ್ಲಿ ಮುಂಜಾನೆಯಿಂದಲ್ಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು.

15ರಂದು ವಿಸರ್ಜನೆ: ನಗರದ ವಿವಿಧ ಬಡಾವಣೆಯಲ್ಲಿ ಸ್ಥಾಪಿಸಲಾಗಿರುವ ಗಣೇಶ ಮೂರ್ತಿಗಳನ್ನು ಶನಿವಾರ ಬೆಳಿಗ್ಗೆ 11ಕ್ಕೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಕೋಲಾರಮ್ಮ ಕೆರೆಯಲ್ಲಿ ನಿರ್ಮಿಸಲಾಗಿರುವ ತೋಟ್ಟಿಯಲ್ಲಿ ವಿಸರ್ಜಿಸಲಾಗುವುದು.

ನಗರದ ಗಾಂಧಿವನದಿಂದ ಗಣೇಶ ಮೂರ್ತಿಗಳ ಮೆರವಣಿಗೆ ಎಂಜಿ ರಸ್ತೆ, ಅಮ್ಮವಾರಿ ಪೇಟೆ, ಎಂಬಿ ರಸ್ತೆ, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ವೃತ್ತ, ಶಾರಾದಾ ಚಿತ್ರಮಂದಿರ, ದೊಡ್ಡಪೇಟೆ , ಕಾಲೇಜುವೃತ್ತದಲ್ಲಿ ಮೆರವಣಿಗೆ ನಡೆಯಲಿದ್ದು ಕೋಲಾರಮ್ಮ ಕೆರೆಯಲ್ಲಿ ನಗರಸಭೆಯಿಂದ ನಿರ್ಮಿಸಲಾಗಿರುವ ಪುಷ್ಕರಣಿಯಲ್ಲಿ ವಿಸರ್ಜನೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !