ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ವಿಜ್ಞಾನ ವಿಭಾಗಕ್ಕೆ ಕಂಪ್ಯೂಟರ್ ವಿತರಣೆ

Last Updated 23 ಜುಲೈ 2021, 3:48 IST
ಅಕ್ಷರ ಗಾತ್ರ

ಮಾಲೂರು: ಉನ್ನತೀಕರಿಸಿದ ಶಿಕ್ಷಣ ದಿಂದ ದೇಶದ ಯುವ ಸಂಪನ್ಮೂಲದ ಸಬಲೀಕರಣವಾಗಲು ಸಾಧ್ಯ ಎಂದು ಪುರಸಭಾ ಅಧ್ಯಕ್ಷ ಎನ್. ವಿ.ಮುರಳೀಧರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಕಾಂಗಜಟ್ ಇಂಡಿಯಾ ಸಂಸ್ಥೆ, ರೋಟರಿ ಜಿಲ್ಲೆ 3190ರ ಸಹಭಾಗಿತ್ವದಲ್ಲಿ ಹೆಲ್ಪ್ ಎಜುಕೇಟ್ ಯೋಜನೆಯಡಿ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ನೀಡಿದ 35 ಕಂಪ್ಯೂಟರ್‌ಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಹಂತದಲ್ಲಿ ವಿದ್ಯಾರ್ಥಿ ಹಾಗೂ ಉಪನ್ಯಾಸಕರಿಗೆ ಅವಶ್ಯವಿರುವ ತಾಂತ್ರಿಕ ನೈಪುಣ್ಯದ ಶಿಕ್ಷಣ ನೀಡಬೇಕು. ಮಾಹಿತಿ ತಂತ್ರಜ್ಞಾನದ ಸದ್ಬಳಕೆಯಾದರೆ ಭಾರತದಂತಹ ದೊಡ್ಡ ಯುವ ಸಂಪನ್ಮೂಲ ದೇಶದಲ್ಲಿ ಯುವಜನರ ಅಭಿವೃದ್ಧಿ ಸಾಧ್ಯವಾಗಲಿದೆ. ಪ್ರತಿಯೊಬ್ಬರೂ ತಮ್ಮ ಕಾಲೇಜು ಶಿಕ್ಷಣದ ನಂತರ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರೋಟರಿ ಮಾಲೂರು ನಂದನಿ ಕ್ಲಬ್‌ ಅಧ್ಯಕ್ಷ ಎ. ಅಶ್ವತ್ಥರೆಡ್ಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ವೈ. ವೆಂಕಟೇಶ್ ಮಾತನಾಡಿದರು. ಪುರಸಭಾ ಸದಸ್ಯ ಮಂಜುನಾಥ್, ರೋಟರಿ ಸಂಸ್ಥೆಯ ಕಾರ್ಯದರ್ಶಿ ಸಿ.ಆರ್. ರೇವಣ್ಣ, ಪ್ರಾಧ್ಯಾಪಕರಾದ ನಾಗಿರೆಡ್ಡಿ, ಸೋಮಶೇಖರ್, ಆರ್. ಅನಂತಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT