ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌: ಸಾಮಾಜಿಕ ನ್ಯಾಯದಡಿ ಟಿಕೆಟ್‌

ಮುಳಬಾಗಿಲು: ನಗರ ಸಭೆ ಚುನಾವಣೆ
Last Updated 1 ನವೆಂಬರ್ 2019, 15:57 IST
ಅಕ್ಷರ ಗಾತ್ರ

ಮುಳಬಾಗಿಲು: ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 26 ವಾರ್ಡ್‌ಗಳಿಗೆ ಸಾಮಾಜಿಕ ನ್ಯಾಯದಡಿ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಬಿ ಫಾರಂ ನೀಡಲಾಗಿದೆ. ಉಳಿದ 5 ವಾರ್ಡ್‌ಗಳಲ್ಲಿ ಜಾತ್ಯಾತೀತ ಮನೋಭಾವನೆ ಹೊಂದಿರುವ ಪಕ್ಷೇತರರಿಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಕಾಂಗ್ರೆಸ್ ಪಕ್ಷದ ತಾಲ್ಲೂಕು ಚುನಾವಣಾ ಉಸ್ತುವಾರಿ ಹಾಗೂ ವಿಧಾನಪಪರಿಷತ್ ಸದಸ್ಯ ಪಿ.ವಿ.ರಮೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಳಬಾಗಿಲು ನಗರಸಭೆಯಾಗಿ ಬಡ್ತಿ ಹೊಂದಲು ಕಾಂಗ್ರೆಸ್ ಪಕ್ಷದ ಕೊಡುಗೆ ಇದೆ, ಸ್ಥಳೀಯ ಶಾಸಕ ಮತ್ತು ಸಚಿವರಾಗಿರುವ ಎಚ್.ನಾಗೇಶ್ ಕಾಂಗ್ರೆಸ್ ಬೆಂಬಲದಿಂದ ಗೆದ್ದು ಬಿಜೆಪಿ ಸೇರಿಕೊಂಡಿದ್ದಾರೆ. ಇವರಿಗೆ ಸ್ಥಳೀಯ ಜನರ ಬೆಂಬಲವಿಲ್ಲ, ಈ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪೈಪೋಟಿ ನೀಡಬಹುದು ಆದರೆ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ ಪಕ್ಷ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಬಿ ಫಾರಂ ನೀಡುವ ತನಕ ಎಲ್ಲರ ವಿಶ್ವಾಸ ತೆಗೆದುಕೊಂಡು ಕೆಲಸ ಮಾಡಲಾಗಿದೆ, ಪುರಸಭೆಯಿದ್ದಾಗ ಕಾಂಗ್ರೆಸ್ ಆಡಳಿತ ನಡೆಸಿ ಜನರ ವಿಶ್ವಾಸಗಳಿಸಿದೆ. ಈ ಚುನಾವಣೆಯಲ್ಲಿ 20ಕ್ಕು ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವೆ ರಾಣೀ ಸತೀಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಎನ್.ಬಿಸೇಗೌಡ, ಜಿ. ರಾಮಲಿಂಗರೆಡ್ಡಿ, ಕೆ.ವಿ ರಾಮಪ್ರಸಾದ್, ಜೆ.ಕೃಷ್ಣಪ್ಪ, ರತ್ನಮ್ಮ, ವಡ್ಡಹಳ್ಳಿ ಡಾ.ರಮೇಶ್, ಸುಭಶ್ ಚಂದ್ರಗೌಡ, ಜಿ.ಎಂ ಗೋವಿಂದಪ್ಪ, ಸಿದ್ದಘಟ್ಟ ಮುನಿಸ್ವಾಮಿಗೌಡ, ಕಸವಗಾನಹಳ್ಳಿ ವೆಂಕಟರಮಣಪ್ಪ ಅಭ್ಯರ್ಥಿಗಳಾದ ಬಾಸ್ಕರ್, ರಾಜಶೇಖರ್, ಮನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT