ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಪ್ರಯತ್ನವೇ ಸಾಧನೆಗೆ ಸಹಕಾರಿ: ನ್ಯಾಯಾಧೀಶ ಎಂ.ಗಣಪತಿ ಪ್ರಶಾಂತ್

Last Updated 26 ಏಪ್ರಿಲ್ 2019, 13:12 IST
ಅಕ್ಷರ ಗಾತ್ರ

ಕೋಲಾರ: ‘ಸತತ ಪ್ರಯತ್ನದಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ’ ಎಂದು 1ನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಗಣಪತಿ ಪ್ರಶಾಂತ್ ತಿಳಿಸಿದರು.

ನಗರದ ಸಾಯಿ ಫೌಂಡೇಶನ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಶುಕ್ರವಾರ ನಡೆದ ಕಾನೂನು ಸಾಕ್ಷರತಾ ರಥದ ಪ್ರವಾಸದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು - ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಉತ್ತಮ ಭವಿಷ್ಯ ರೂಪಿಸಲು ನಮ್ಮನ್ನು ನಂಬಿದವರ ಜತೆ ಕೊನೆಯವರೆಗೂ ನಂಬಿಕೆ ಉಳಿಸಿಕೊಂಡಿರಬೇಕು’ ಎಂದರು.

‘ಸಣ್ಣ ಪುಟ್ಟ ವಿಷಯಗಳು ದೊಡ್ಡ ವಿವಾದವಾಗಿ ದಾವೆ ಹೂಡುವ ಹಂತಕ್ಕೆ ತಲುಪುವುದು ದುರದೃಷ್ಟಕರ. ವಿವಾದಗಳನ್ನು, ಕಲಹಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಿ ಕೊಳ್ಳುವ ಮೂಲಕ ಸುಖಮಯ ಜೀವನವನ್ನು ನಡೆಸುವಂತಾಗಬೇಕು’ ಎಂದು ಸಲಹೆ ನೀಡಿದರು.

‘ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲ. ಕಷ್ಟಕಾಲ ಬಂದಾಗ ಹೇಗೆ ನಿಭಾಯಿಸುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಜೀವನದಲ್ಲಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ನಿಮ್ಮನ್ನು ಪರಿಚಯಿಸಿಕೊಳ್ಳಬೇಕು’ ಎಂದರು.

‘ಉದ್ದೇಶ ಪೂರ್ವಕವಾಗಿ ಕೆಟ್ಟ ಚಟಗಳನ್ನು ಯಾರು ಕಲಿಯುವುದಿಲ್ಲ. ಮನಸ್ಸಿನಲ್ಲಿ ಅಗುವ ಬದಲಾವಣೆಗಳಿಂದಲೋ, ಅಕ್ಕ ಪಕ್ಕದಲ್ಲಿರುವ ಇರುವರ ಸಹವಾಸದಿಂದ ಕಲಿಯಬೇಕಾಗುತ್ತದೆ. ಆದರೆ ಒಂದು ಸಾರಿ ಅಂತಹವರ ಜತೆ ಸೇರಿದರೆ ಮತ್ತೆ ಬಿಡುವುದು ಕಷ್ಷವಾಗುತ್ತಾದೆ ಆದರಿಂದ ಮೂರನೇ ವ್ಯಕ್ತಿಗಳಿಂದ ದೂರದ ಭಾವನೆಗಳಿಂದ ಇರಬೇಕಾಗುತ್ತದೆ’ ಎಂದು ಹೇಳಿದರು.

‘ಗುರಿ ಸಾಧಿಸಲು ಹಗಲಿನಲ್ಲಿ ಕಣ್ಣು ಬಿಟ್ಟು ಕನಸು ಕಾಣಿದಾಗ ನನಸಾಗುತ್ತದೆ. ಆಗ ನಿಮ್ಮಿಂದಲೂ ಸಮಾಜದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಸಲು ಸಹಕಾರಿಯಾಗುತ್ತದೆ. ತಮ್ಮಲ್ಲಿನ ನಂಬಿಕೆಯನ್ನು ಯಾವತ್ತು ಕಳೆದುಕೊಳ್ಳಬಾರದು’ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಜಯರಾಮ್ ಮಾತನಾಡಿ, ‘ಅಕ್ಕ ಪಕ್ಕದವರ ಸಹವಾಸ ಮಾಡಿ ಕೆಲವರು ಕೆಟ್ಟರೆ, ಇನ್ನು ಕೆಲವರು ಮಾನಸಿಕ ಒತ್ತಡದಿಂದ ಕೆಡುತ್ತಾರೆ’ ಎಂದರು.

‘ಮನುಷ್ಯ ಕೆಡಲು ಏನು ಕಾರಣ ಎಂಬುದನ್ನು ತಿಳಿದು ಸಮಸ್ಯೆ ಬಗೆಹರಿಸಬೇಕು. ಇದಕ್ಕೆ ಕುಟುಂಬದ ಸದಸ್ಯರ ಪಾತ್ರ ಬಹಳ ಮುಖ್ಯ’ ಎಂದು ತಿಳಿಸಿದರು.

ಮಾನಸಿಕ ರೋಗಿಗಳ ತಜ್ಞೆ ಡಾ.ಪಾವನಾ ಮಾತನಾಡಿ, ‘ಅರಿವಿನ ಕೊರತೆಯಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಗಳು ಬಂದಾಗ ತಮ್ಮ ಮೆದಳು ಕೂಡ ಯೋಚನೆ ಮಾಡವ ಶಕ್ತಿಯನ್ನು ಕಳೆದುಕೊಳ್ಳುತ್ತದೆ ವರ್ತನೆಗಳು ಹಠದಿಂದ ಇಲ್ಲಿ ಸೇರಿಲ್ಲ ನಿಮ್ಮ ಒಳ್ಳೆಯದಕ್ಕೆ ತಾವುಗಳು ಸಹಕರಿಸಬೇಕು’ ಎಂದು ವಿವರಿಸಿದರು.

ಇದಕ್ಕೂ ಮುಂಚೆ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಸಾಕ್ಷರತಾ ರಥಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಐ.ಬಿ.ಬಿದರಿ ಚಾಲನೆ ನೀಡಿದರು.

ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಸದಸ್ಯ ಆರ್.ಮೋಹನ್ ಕುಮಾರ್, ಸಾಯಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಡಿ.ಜನಾರ್ಧನ್, ಜಾಗೃತಿ ಸೇವಾ ಸಂಸ್ಥೆಯ ಕೆ.ಆರ್.ಧನರಾಜ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT