ಸಂಘದ ಸದಸ್ಯರಿಗೆ ಸೌಕರ್ಯ

7

ಸಂಘದ ಸದಸ್ಯರಿಗೆ ಸೌಕರ್ಯ

Published:
Updated:
Deccan Herald

ಕೋಲಾರ: ‘ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಸಂಘದ ಸದಸ್ಯರಿಗೆ ಸೌಕರ್ಯ ಕಲ್ಪಿಸುತ್ತೇವೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಅಧ್ಯಕ್ಷ ಎ.ರಾಜಗೋಪಾಲಚಾರಿ ತಿಳಿಸಿದರು.

ಇಲ್ಲಿ ಬುಧವಾರ ಸಂಘದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ‘ಸಂಘದ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿನ್ನು ಶೀಘ್ರವೇ ಆರಂಭಿಸಲು ನಿರ್ಧರಿಸಲಾಗಿದೆ. ಜತೆಗೆ ಸದಸ್ಯರ ನೋಂದಣಿ ಹೆಚ್ಚಿಸುತ್ತೇವೆ’ ಎಂದರು.

‘ಸಂಘದ ಕಾರ್ಯ ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸುವುದರ ಜತೆಗೆ ಸರ್ಕಾರಿ ನೌಕರರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು’ ಎಂದು ಸಂಘದ ನೂತನ ಉಪಾಧ್ಯಕ್ಷ ಡಿ.ಚಿಕ್ಕಣ್ಣ ಭರವಸೆ ನೀಡಿದರು.

‘ಸರ್ಕಾರಿ ನೌಕರರ ನಿರೀಕ್ಷೆಗಳು ಹೆಚ್ಚಿವೆ. ಬಹುತೇಕ ಮಂದಿ ನಿವೇಶನ ಮತ್ತು ಮನೆ ಇಲ್ಲದೆ ಬದುಕು ನಡೆಸುತ್ತಿದ್ದಾರೆ. ಅವರಿಗೆ ಸ್ವಂತ ಸೂರು ಕಲ್ಪಿಸಲಾಗುತ್ತದೆ. ನಿವೇಶನರಹಿತರಿಗೆ ನಿವೇಶನ ಒದಗಿಸುತ್ತೇವೆ’ ಎಂದು ಸಂಘದ ನಿರ್ದೇಶಕ ಜೆ.ಜಿ.ನಾಗರಾಜ್ ಹೇಳಿದರು.

ಸಂಘದ ನಿರ್ದೇಶಕರಾದ ಟಿ.ಎಂ.ನಾರಾಯನಸ್ವಾಮಿ, ನಾಗೇಶ್, ಆರ್.ನಾರಾಯಣಸ್ವಾಮಿ, ಎಂ.ನಾಗರಾಜ, ನಂಜುಂಡಪ್ಪ, ವಿ.ಮಂಜುನಾಥ್, ಎಂ.ಜಗದೀಶ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !