ಬಡ, ಮಧ್ಯಮ ಹಾಗೂ ಮೇಲ್ವರ್ಗದವರು ಸೇರಿದಂತೆ ಎಲ್ಲಾ ವರ್ಗದ 2.40 ಲಕ್ಷ ಜನರಿಗೆ ಹಣಕಾಸು ನೆರವು ನೀಡಲಾಗುತ್ತದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಮನೆ ಮನೆಗೂ ಚೆಕ್ ಮೂಲಕ ಆರ್ಥಿಕ ನೆರವು ತಲುಪಿಸಲಾಗುತ್ತದೆ. 4 ಮಂದಿ ಸದಸ್ಯರ ಕುಟುಂಬಕ್ಕೆ ₹ 2 ಸಾವಿರ, 6 ಸದಸ್ಯರ ಕುಟುಂಬಕ್ಕೆ ₹ 3 ಸಾವಿರ, 8 ಸದಸ್ಯರ ಕುಟುಂಬಕ್ಕೆ ₹ 4 ಸಾವಿರ ಮತ್ತು 10 ಸದಸ್ಯರ ಕುಟುಂಬಕ್ಕೆ ₹ 5 ಸಾವಿರ ನೀಡಲಾಗುತ್ತದೆ. ಈ ಸೇವೆಗೆ ನರಸಾಪುರದಲ್ಲಿ ಅ.10ರಂದು ಚಾಲನೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.