ಶನಿವಾರ, ಮೇ 28, 2022
30 °C
ಸಕಾಲಕ್ಕೆ ಮರು ಪಾವತಿಸಲು ರೈತರಿಗೆ ಸಲಹೆ

₹ 1.52 ಕೋಟಿ ಸಾಲ ವಿತರಣೆ: ವೆಂಕಟೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರೈತರು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ನಿಗದಿತ ಅವಧಿಯಲ್ಲಿ ಮರುಪಾವತಿಸಿದರೆ ಬೇರೆಯವರಿಗೆ ಸಾಲ ನೀಡಲು ಸಹಕಾರಿಯಾಗಲಿದೆ’ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ವೆಂಕಟೇಶ್ ಕಿವಿಮಾತು ಹೇಳಿದರು.

ನಗರದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ರೇಷ್ಮೆ, ಕೋಳಿ, ಕುರಿ ಉದ್ಯಮ, ಟ್ರಾಕ್ಟರ್‌ ಸೇರಿದಂತೆ ವಿವಿಧ ಯೋಜನೆಯಡಿ 32 ಮಂದಿ ₹ 1.52 ಕೋಟಿ ಸಾಲ ಅವರು ಮಾತನಾಡಿದರು.

ಸಾಲವನ್ನು ಶೇ 3ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಬೇರೆ ಯಾರೂ ಸಾಲ ನೀಡುವುದಿಲ್ಲ. ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಪಾವತಿಸಿದರೆ ಉಳಿದ ಶೇ 9ರಷ್ಟು ಬಡ್ಡಿಯನ್ನು ಸರ್ಕಾರ ಪಾವತಿಸುತ್ತದೆ. ತಪ್ಪಿದರೆ ಬಾಕಿದಾರರೇ ಶೇ 12ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ಸಾಲದ ಕಂತು ಬಾಕಿ ಇರಿಸಿಕೊಂಡು ಬ್ಯಾಂಕಿನವರು ವಸೂಲಾತಿಗಾಗಿ ಮನೆ ಬಾಗಿಲಿಗೆ ಬರುವಂತೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಬ್ಯಾಂಕಿನಿಂದ ಸಾಲದ ಮೊತ್ತವನ್ನು ₹ 4ರಿಂದ ₹ 5 ಕೋಟಿಗೆ ವಿಸ್ತರಿಸಲಾಗುವುದು. ಇದಕ್ಕೆ ಪೂರಕವಾಗುವಂತೆ ಸಾಲ ಪಡೆದವರು ಕಂತುಗಳನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಕೋರಿದರು.

ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಬ್ಯಾಂಕಿನಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲಗಳಿದ್ದು, ಸಾಲದ ಭದ್ರತೆಗೆ ಪಡೆದ ಜಮೀನಿನ ದಾಖಲೆಗಳನ್ನು ನಾವು ರಾಜ್ಯಮಟ್ಟದ ಬ್ಯಾಂಕಿಗೆ ನೀಡುತ್ತೇವೆ. ರಾಜ್ಯ ಬ್ಯಾಂಕಿಗೆ ನಬಾರ್ಡ್ ಸಾಲ ಮಂಜೂರು ಮಾಡುತ್ತದೆ ಎಂದು ವಿವರಿಸಿದರು.

ರೈತರು ಖಾಸಗಿ ಮೀಟರ್ ಬಡ್ಡಿ ದಂಧೆಕೋರರತ್ತ ಯಾವುದೇ ಕಾರಣಕ್ಕೂ ಹೋಗಬೇಡಿ. ನಿಮಗೆ ಬ್ಯಾಂಕಿನಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಿದೆ. ಇದನ್ನು ಸದ್ಬಳಕೆ ಮಾಡಿಕೊಂಡರೆ ನೀವು ಅಭಿವೃದ್ಧಿ ಹೊಂದುವ ಜೊತೆಗೆ ಬ್ಯಾಂಕ್ ಸಹ ತನ್ನ ವಹಿವಾಟು ವಿಸ್ತರಿಸಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಬಿ.ಎಸ್. ಶೋಭಾ, ನಿರ್ದೇಶಕರಾದ ಎಚ್. ಕೃಷೇಗೌಡ, ಶಶಿಧರ್, ಟಿ.ಕೆ. ಬೈರೇಗೌಡ, ಎ. ಶಿವಕುಮಾರ್, ಕೆ.ಸಿ. ಮಂಜುನಾಥ್, ಎಂ. ಮಂಜುನಾಥ್, ಜೆ.ಎಂ. ರಾಧಕೃಷ್ಣ, ಕೆ.ಎಂ. ಗೋವಿಂದಪ್ಪ, ಬಿ. ಅಮರೇಶ್, ಸುನಂದಮ್ಮ, ಪಾಪಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು