ಶುಕ್ರವಾರ, ನವೆಂಬರ್ 15, 2019
23 °C

ನ.12ಕ್ಕೆ ಧಮ್ಮ ಜಾಗೃತಿ ಅಭಿಯಾನ

Published:
Updated:

ಕೋಲಾರ: ‘ಧಮ್ಮ ಜಾಗೃತಿ ಅಭಿಯಾನದ ದೀಕ್ಷಾ ಸಮಾರಂಭವನ್ನು ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮಲ್ಲಗಾನಹಳ್ಳಿಯಲ್ಲಿ ನ.12ರಂದು ಮಧ್ಯಾಹ್ನ 12ಕ್ಕೆ ಹಮ್ಮಿಕೊಳ್ಳಲಾಗಿದೆ’ ಎಂದು ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿಶ್ವ ಬದ್ಧ ಧಮ್ಮ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಶೋಷಿತ ಸಮುದಾಯಗಳನ್ನು ಜಾಗೃತಿಗೊಳಿಸುವುದೇ ಈ ಅಭಿಯಾನದ ಉದ್ದೇಶ’ ಎಂದರು.

‘ಪೂಜ್ಯ ಭಿಕ್ಷು ಸಂಘದಿಂದ ಜ್ಞಾನ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್, ಸಂಸದ ಎಸ್.ಮುನಿಸ್ವಾಮಿ, ನಿವೃತ್ತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ, ಮಾಜಿ ಶಾಸಕಿ ಮಲ್ಲಾಜಮ್ಮ, ಸಾಹಿತಿ ಚಿನ್ನಸ್ವಾಮಿ ಭಾಗವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

‘ಧಮ್ಮ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭವನ್ನು 2020ರ ಅ.14ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 10 ಲಕ್ಷ ಮಂದಿ ಬೌದ್ಧ ಮತ್ತು ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ನ.12ರಂದು ನಡೆಯಲಿರುವ ನಗರಸಭೆ ಚುನಾವಣೆಗೆ ನಗರದ 31ನೇ ವಾರ್ಡಿನ ಆಭ್ಯರ್ಥಿಯಾಗಿ ರೋಷನ್ ಪಾಷ ಆರ್‌ಪಿಐ ಪಕ್ಷದಿಂದ ಸ್ಪರ್ಧಿಸಿದ್ದು ಮತದಾರರು ಬೆಂಬಲ ನೀಡಬೇಕು’ ಎಂದು ಕೋರಿದರು. 

ಆರ್‌ಪಿಐ ಆಲ್ಪಸಂಖ್ಯಾತ ರಾಜ್ಯ ಘಟಕದ ಅಧ್ಯಕ್ಷ ಅರೀಫ್, ಗೌರವಾಧ್ಯಕ್ಷ ಸೈಯದ್ ಗೌಸ್, ಪದಾಧಿಕಾರಿಳಾದ ಶಂಕರ್ ಡಿ.ಮೋಹೀದ್ ಆಹಮದ್ ಘೋರಿ, ಮಂಜುಳಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)