ಮಂಗಳವಾರ, ಡಿಸೆಂಬರ್ 1, 2020
17 °C

ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 21 ಮಂದಿಯನ್ನು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವೈದ್ಯಕೀಯ ಕ್ಷೇತ್ರದಿಂದ ಕೋಲಾರದ ವೈದ್ಯ ಡಾ.ವಿ.ಎಸ್.ಕೃಷ್ಣಮೂರ್ತಿ, ಸಮಾಜ ಸೇವೆಗೆ ಕೋಲಾರದ ಸಾ.ಮಾ.ರಂಗಪ್ಪ, ಶಿಲ್ಪಕಲೆ ಕ್ಷೇತ್ರದಿಂದ ಮಾಲೂರು ತಾಲ್ಲೂಕಿನ ಶಿಲ್ಪಿ ಎಸ್‌.ಎಸ್‌.ಮಹಾದೇವ ಪಂಚಾಲ್‌ ಹಾಗೂ ಶಿಲ್ಪಿ ಪೂರ್ಣಚಂದ್ರ, ಕನ್ನಡಪರ ಹೋರಾಟಗಾರರಾದ ಬಂಗಾರಪೇಟೆಯ ರಂಗರಾಮಯ್ಯ ಮತ್ತು ಕೋಲಾರದ ಟಿ.ಶ್ರೀನಿವಾಸ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿಕ್ಷಣ ಕ್ಷೇತ್ರದಿಂದ ಕೋಲಾರದ ನಾರಾಯಣಪ್ಪ ಮತ್ತು ಶ್ರೀನಿವಾಸಪುರದ ಶ್ರೀರಾಮರೆಡ್ಡಿ, ಸಂಗೀತ ಕ್ಷೇತ್ರದಿಂದ ಮಾಲೂರಿನ ರಾಮಮೂರ್ತಿ, ಸಾಹಿತ್ಯ ಕ್ಷೇತ್ರದಿಂದ ಮಾಲೂರಿನ ತಮ್ಮಯ್ಯ ಮತ್ತು ಕೋಲಾರದ ಕೆ.ಆರ್‌.ಜಯಶ್ರೀ, ಸಮಾಜ ಸೇವೆಗೆ ಬಿ.ಆರ್‌.ಶ್ರೀನಿವಾಸಮೂರ್ತಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪತ್ರಿಕೋದ್ಯಮ ಕ್ಷೇತ್ರದಿಂದ ಕೆಜಿಎಫ್‌ನ ಎನ್‌.ಆರ್‌.ಪುರುಷೋತ್ತಮ್‌ ಮತ್ತು ಕೋಲಾರದ ಅನಂತರಾಮ್‌, ಜನಪದ ಕಲಾವಿದ ಮುಳಬಾಗಿಲಿನ ಬಾಲಕೃಷ್ಣಪ್ಪ, ಶಾಸನ ಸಂಶೋಧಕ ಮುಳಬಾಗಿಲಿನ ಕೆ.ಆರ್‌.ನರಸಿಂಹನ್‌. ಕ್ರೀಡಾ ಕ್ಷೇತ್ರದಿಂದ ಕೋಲಾರದ ಅಂಚೆ ಅಶ್ವತ್ಥ್‌, ಅಂಕಣಕಾರ ಕೋಲಾರದ ಡಿ.ಎಸ್.ಶ್ರೀನಿವಾಸಪ್ರಸಾದ್‌, ರಂಗಕರ್ಮಿ ಮುದುವಾಡಿಯ ಕೆ.ಎಂ.ಕೃಷ್ಣಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡಪರ ಚಟುವಟಿಕೆಗಾಗಿ ಕೋಲಾರದ ಕನ್ನಡ ಪಕ್ಷಕ್ಕೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಾಗಿ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ಪ್ರಶಸ್ತಿ ಲಭಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.