ಪ್ರಜಾವಾಣಿ ವಾರ್ತೆ

ಮುಳಬಾಗಿಲು: ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಸುಖಾ ಸಮನೆ ಕಾಲಹರಣ ಮಾಡಬಾರದು. ಮೊಬೈಲ್ ಮೋಹಕ್ಕೆ ಬಲಿಯಾಗದೆ ಗ್ರಾಮೀಣ ಪ್ರದೇಶದಲ್ಲಿರುವ ಕೇಂದ್ರ ಗ್ರಂಥಾಲಯಗಳಲ್ಲಿ ಆಟ–ಪಾಠ ಜತೆಗೆ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಅರಿವು ಕೇಂದ್ರದ ಗ್ರಂಥಾಲಯ ಮೇಲ್ವಿಚಾರಕ ನರಸಿಂಹಶೆಟ್ಟಿ ಕಿವಿಮಾತು ಹೇಳಿದರು.

ತಾಲ್ಲೂಕಿನ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಗ್ರಂಥಾಲಯದಲ್ಲಿ ಶನಿವಾರದಿಂದ ಮೇ10ರವರೆಗೂ ನಡೆಯುವ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನರಂಜನೆ, ಸಾಮಾನ್ಯ ಜ್ಞಾನ, ಕಥೆ, ನಾಟಕ ಮತ್ತಿತರ ಪುಸ್ತಕಗಳನ್ನು ಓದುವುದರ ಜೊತೆಗೆ ಗಣಕ ಯಂತ್ರದಲ್ಲಿ ಆಟ ಪಾಠ ಕಲಿತು ರಜೆಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆ.ಸರಿತಾ, ರಾಜು, ಮಲ್ಲೆಕುಪ್ಪಅಂಬರೀಶ್, ಸಂಪತ್, ಚಿನ್ನಪ್ಪಯ್ಯ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.