ಸೋಮವಾರ, ಮಾರ್ಚ್ 8, 2021
19 °C

ಮನುಷ್ಯನ ಪರಿವರ್ತನೆಗೆ ಶಿಕ್ಷಣ ಪೂರಕ: ಎಚ್‌.ಎಂ.ಮಂಜುಳಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಹಸಿವು, ಬಡತನ ಹೋಗಲಾಡಿಸಲು ಸಾಕ್ಷರತೆ ಮುಖ್ಯ. ಮನುಷ್ಯನ ಪರಿವರ್ತನೆ ಮತ್ತು ಬದಲಾವಣೆಗೆ ಶಿಕ್ಷಣ ಪೂರಕ’ ಎಂದು ಹರಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಚ್.ಎಂ.ಮಂಜುಳಾ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹರಟಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಿಶ್ವ ಸಾಕ್ಷರತಾ ದಿನಾಚರಣೆಯಲ್ಲಿ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಅಕ್ಷರ ಕಲಿಸುವ ಪ್ರಯತ್ನ ಮಾಡಿದರೆ ಸುಶಿಕ್ಷಿತ ಸಮಾಜ ನಿರ್ಮಾಣವಾಗುತ್ತದೆ’ ಎಂದು ಸಲಹೆ ನೀಡಿದರು.

‘ಬಡತನದ ಕಾರಣಕ್ಕೆ ಸಾಕಷ್ಟು ಮಂದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. 21ನೇ ಶತಮಾನದಲ್ಲೂ ಅನಕ್ಷರಸ್ಥರು ಇದ್ದಾರೆ. ಶಿಕ್ಷಣದ ಅರಿವು ಮೂಡಿಸಲು 5 ದಶಕದಿಂದ ಸಾಕ್ಷರತೆ ದಿನ ಆಚರಿಸಲಾಗುತ್ತಿದೆ. ತಾವು ಕಲಿಯುವುದರ ಜತೆಗೆ ಇನ್ನೊಬ್ಬರಿಗೆ ಕಲಿಸುವ ಪ್ರವೃತ್ತಿ ಬೆಳೆಯಬೇಕು. ಆಗ ಸಾಕ್ಷರತೆ ಪ್ರಮಾಣ ಹೆಚ್ಚುತ್ತದೆ’ ಎಂದು ಹೇಳಿದರು.

‘ಸಮಾಜ ಮತ್ತು ಸಮುದಾಯಕ್ಕೆ ಸಾಕ್ಷರತೆಯ ಪ್ರಾಮುಖ್ಯತೆ ತಿಳಿಸಲು, ಶಿಕ್ಷಣ ಪಡೆಯುವವರಿಗೆ ಪ್ರೋತ್ಸಾಹಿಸಲು, ಜವಾಬ್ದಾರಿ ಅರ್ಥ ಮಾಡಿಸಲು ಸಾಕ್ಷರತಾ ದಿನ ಆಚರಿಸಲಾಗುತ್ತಿದೆ’ ಎಂದು ಸಾಕ್ಷರತಾ ಪ್ರೇರಕಿ ಎಚ್.ಆರ್.ವಿದ್ಯಾ ತಿಳಿಸಿದರು.

‘ಮನೆಯ ಎಲ್ಲಾ ಸದಸ್ಯರಿಗೆ ಕನಿಷ್ಠ ಸಹಿ ಮಾಡುವಂತಾಗಲು ಮಕ್ಕಳು ಶಿಕ್ಷಕರಾಗಿ ಕೆಲಸ ಮಾಡಬೇಕು. ಎಲ್ಲಾ ಸದಸ್ಯರು ಓದುವ ಮತ್ತು ಬರೆಯುವ ಹಂತಕ್ಕೆ ತಲುಪಿದರೆ ಸಾಕ್ಷರತಾ ದಿನ ಸಾರ್ಥಕವಾಗುತ್ತದೆ’ ಎಂದು ಶಾಲೆ ಮುಖ್ಯ ಶಿಕ್ಷಕ ಜಿ.ಶ್ರೀನಿವಾಸ್ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಿಗೆ ಸಾಕ್ಷರತೆ ಪಠ್ಯ, ಮನೆಕೆಲಸದ ಪುಸ್ತಕ ವಿತರಿಸಲಾಯಿತು. ಅಧ್ಯಾಪಕರಾದ ಕೆ.ಕೃಷ್ಣಪ್ಪ, ಪಿ.ಎಂ.ಗೋವಿಂದಪ್ಪ, ಎಚ್.ಮುನಿಯಪ್ಪ, ಕೆ.ಮಮತಾ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು