ಚುನಾವಣೆ: ಮತಗಟ್ಟೆಗಳಿಗೆ ಇವಿಎಂ ಹಂಚಿಕೆ

ಗುರುವಾರ , ಏಪ್ರಿಲ್ 25, 2019
22 °C

ಚುನಾವಣೆ: ಮತಗಟ್ಟೆಗಳಿಗೆ ಇವಿಎಂ ಹಂಚಿಕೆ

Published:
Updated:
Prajavani

ಕೋಲಾರ: ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಇಲ್ಲಿ ಶುಕ್ರವಾರ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಎರಡನೇ ಹಂತದಲ್ಲಿ ಪರಿಶೀಲಿಸಲಾಯತು.

ಇವಿಎಂ ಪರಿಶೀಲನೆ ಪ್ರಕ್ರಿಯೆ ವೀಕ್ಷಿಸಿ ಮಾತನಾಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ‘ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಕೋಲಾರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 2,100 ಮತಗಟ್ಟೆಗಳಿವೆ. ಈ ಮತಗಟ್ಟೆಗಳಿಗೆ ಆನ್‌ಲೈನ್‌ ಮೂಲಕ ಇವಿಎಂ ಹಂಚಿಕೆ ಮಾಡಲಾಯಿತು’ ಎಂದು ತಿಳಿಸಿದರು.

‘ಯಾವ ಮತಗಟ್ಟೆಗೆ ಯಾವ ಕ್ರಮ ಸಂಖ್ಯೆಯ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಹಾಗೂ ಮತ ಖಾತ್ರಿ ಉಪಕರಣ (ವಿ.ವಿ ಪ್ಯಾಟ್) ಹೋಗಬೇಕು ಎಂಬುದನ್ನು ಸಾಫ್ಟ್‌ವೇರ್‌ನಲ್ಲಿ ನಿರ್ಧರಿಸಲಾಗುತ್ತದೆ. ಈಗಾಗಲೇ ಮತಪತ್ರ ಸಿದ್ಧವಾಗಿದ್ದು, ಏ.7ರಿಂದ ಬಿಇಎಂಎಲ್ ಎಂಜಿನಿಯರ್‌ಗಳು ಒಂದು ಬ್ಯಾಲೆಟ್ ಯೂನಿಟ್‌ನಲ್ಲಿ ಮತಪತ್ರ ಅಳವಡಿಸುತ್ತಾರೆ’ ಎಂದು ವಿವರಿಸಿದರು.

‘ಶಿಢ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 242 ಮತಗಟ್ಟೆಗಳಿದ್ದು, ಅಲ್ಲಿಗೆ 315 ಬ್ಯಾಲೆಟ್ ಯೂನಿಟ್, 315 ಕಂಟ್ರೋಲ್ ಯೂನಿಟ್ ಹಾಗೂ 279 ವಿ.ವಿ ಪ್ಯಾಟ್‌ ಹಂಚಿಕೆ ಮಾಡಲಾಗಿದೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 265 ಮತಗಟ್ಟೆಗಳಿದ್ದು, 345 ಬ್ಯಾಲೆಟ್ ಯೂನಿಟ್, 345 ಕಂಟ್ರೋಲ್ ಯೂನಿಟ್ ಹಾಗೂ 305 ವಿ.ವಿ ಪ್ಯಾಟ್‌ ನೀಡಲಾಗಿದೆ’ ಎಂದು ಹೇಳಿದರು.

‘ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ 288 ಮತಗಟ್ಟೆಗಳಿದ್ದು, 346 ಬ್ಯಾಲೆಟ್ ಯೂನಿಟ್, 346 ಕಂಟ್ರೋಲ್ ಯೂನಿಟ್ ಹಾಗೂ 386 ವಿ.ವಿ ಪ್ಯಾಟ್ ಕೊಡಲಾಗಿದೆ. ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ 279 ಮತಗಟ್ಟೆಗಳಿದ್ದು, 335 ಬ್ಯಾಲೆಟ್ ಯೂನಿಟ್, 335 ಕಂಟ್ರೋಲ್ ಯೂನಿಟ್ ಹಾಗೂ 369 ವಿ.ವಿ ಪ್ಯಾಟ್‌ ಹಂಚಿಕೆ ಮಾಡಲಾಗಿದೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 234 ಮತಗಟ್ಟೆಗಳಿದ್ದು, 281 ಬ್ಯಾಲೆಟ್‌ ಯೂನಿಟ್‌, 281 ಕಂಟ್ರೋಲ್ ಯೂನಿಟ್ ಹಾಗೂ 309 ವಿ.ವಿ ಪ್ಯಾಟ್‌ ನೀಡಲಾಗಿದೆ’ ಎಂದರು.

‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 284 ಮತಗಟ್ಟೆಗಳಿದ್ದು, 341 ಬ್ಯಾಲೆಟ್ ಯೂನಿಟ್, 341 ಕಂಟ್ರೋಲ್ ಯೂನಿಟ್ ಹಾಗೂ 375 ವಿ.ವಿ ಪ್ಯಾಟ್‌ ಕೊಡಲಾಗಿದೆ. ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ 249 ಮತಗಟ್ಟೆಗಳಿದ್ದು, 299 ಬ್ಯಾಲೆಟ್ ಯೂನಿಟ್, 299 ಕಂಟ್ರೋಲ್ ಯೂನಿಟ್ ಹಾಗೂ 375 ವಿ.ವಿ ಪ್ಯಾಟ್‌ ಹಂಚಲಾಗಿದೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 259 ಮತಗಟ್ಟೆಗಳಿದ್ದು, 311 ಬ್ಯಾಲೆಟ್ ಯೂನಿಟ್, 311 ಕಂಟ್ರೋಲ್ ಯೂನಿಟ್ ಹಾಗೂ 342 ವಿ.ವಿ ಕೊಡಲಾಗಿದೆ’ ಎಂದು ಮಾಹಿತಿ ನೀಡಿದರು.

ಕ್ಷೇತ್ರದ ಚುನಾವಣಾ ವೀಕ್ಷಕರಾದ ಇಕ್ಬಾಲ್ ಆಲಂ ಅನ್ಸಾರಿ, ವಿಕಾಸ್ ಗಾರ್ಗ್, ಕಾಂಗ್ರೆಸ್‌, ಬಿಜೆಪಿ, ಸಿಪಿಎಂ ಹಾಗೂ ಜೆಡಿಎಸ್‌ ಪಕ್ಷದ ಏಜೆಂಟ್‌ಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !