ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೇಮಗಲ್ | ಕೃಷಿಯಲ್ಲೇ ಬದುಕು ಕಟ್ಟಿಕೊಂಡ ಎಂಜಿನಿಯರ್: ಉತ್ತಮ ಫಸಲಿನ ನಿರೀಕ್ಷೆ

ಎಸ್ ಎಂ ಅಮರ್
Published 3 ಆಗಸ್ಟ್ 2024, 7:32 IST
Last Updated 3 ಆಗಸ್ಟ್ 2024, 7:32 IST
ಅಕ್ಷರ ಗಾತ್ರ

ವೇಮಗಲ್: ಕೃಷಿ ಲಾಭದಾಯಕವಲ್ಲವೆಂದು ಉದ್ಯೋಗ ಹರಸಿ ನಗರಗಳಿಗೆ ವಲಸೆ ಹೋಗುತ್ತಿದ್ದ ಯುವಜನತೆ ಮತ್ತೆ ಕೃಷಿಯತ್ತ ಆಸಕ್ತಿ ವಹಿಸಿ ಮಾದರಿ ರೈತರಾಗುತ್ತಿರುವುದಕ್ಕೆ ರಾಜಕಲ್ಲಹಳ್ಳಿಯ ಅಜಯ್ ಕುಮಾರ್ ಉತ್ತಮ ಉದಾಹರಣೆ. 

ಅಜಯ್ ಕುಮಾರ್ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಬೇರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಕೃಷಿಯ ಮೇಲೆ ಅವರಿಗಿದ್ದ ಒಲವು ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳುವಂತೆ ಮಾಡಿದೆ. 

ನಾಲ್ಕು ವರ್ಷಗಳಿಂದ 4 ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಿ ಅಧಿಕ ಲಾಭ ಗಳಿಸಿ, ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಜತೆಗೆ ಪ್ರಸ್ತುತ ತಮ್ಮ ಅಕ್ಕಪಕ್ಕದ 6 ಎಕರೆ ಜಮೀನನ್ನು ಲೀಸ್ ಪಡೆದು ಟೊಮೆಟೊ, ಸಿಹಿ ಜೋಳ, ಹೂಕೋಸು, ಕೊತ್ತಂಬರಿ ಇನ್ನಿತರ ಮಿಶ್ರ ಬೆಳೆ ಬೆಳೆದಿದ್ದಾರೆ. ಟೊಮೆಟೊ ಈಗ ಕಟಾವಿಗೆ ಬಂದಿದ್ದು, ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದಾರೆ ಅಜಯ್ ಕುಮಾರ್.

ನೀರಿಗಾಗಿ ಮಳೆ ನೀರಿನ ಸಂಗ್ರಹದ ಎರಡು ಕೃಷಿ ಹೊಂಡ ಹಾಗೂ ಎರಡು ಕೊಳವೆಬಾವಿಗಳಿವೆ. ಸುಮಾರು ನಾಲ್ಕು ಎಕರೆ ಟೊಮೆಟೊ, ಒಂದು ಎಕರೆ ಸಿಹಿ ಜೋಳ, ಎರಡು ಎಕರೆ ಹೂಕೋಸು, ಅರ್ಧ ಎಕರೆ ಕೊತ್ತಂಬರಿ ಸೊಪ್ಪು, ಅರ್ಧ ಎಕರೆಗೆ ಸೌತೆಕಾಯಿ, ಈಗ ಇನ್ನು ಎರಡು ಎಕರೆಗೆ ಟೊಮೆಟೊ ಸಸಿ ನಾಟಿ ಮಾಡುವ ತಯಾರಿಯಲ್ಲಿದ್ದಾರೆ. ಒಂದು ಬೆಳೆಯಲ್ಲಿ ನಷ್ಟವಾದರೂ ಇನ್ನೊಂದು ಬೆಳೆಯಲ್ಲಿ ಲಾಭ ಪಡೆಯಬಹುದೆಂಬ ಉತ್ಸಾಹದಿಂದ ಕೃಷಿ ಮಾಡುತ್ತಿದ್ದಾರೆ ಅಜಯ್ ಕುಮಾರ್.

ಬೆಳೆಯೊಂದಿಗೆ ಹೈನುಗಾರಿಕೆಯನ್ನು ಮಾಡುತ್ತಿದ್ದು, ಬದುಗಳಲ್ಲಿ ಜಾನುವಾರುಗಳಿಗೆ ಹುಲ್ಲು ಬೆಳೆಯುತ್ತಿದ್ದಾರೆ. ಮಿಶ್ರ ಬೆಳೆ ಪ್ರಯೋಗ ಮಾಡಿರುವ ಅವರು ಒಂದಲ್ಲಾ ಒಂದು ಬೆಳೆ ಕೈಹಿಡಿಯಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಅಜಯ್ ಕುಮಾರ್
ಅಜಯ್ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT