ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್ಟ್ಯಾಗ್ ಕಡ್ಡಾಯ: ಸ್ಥಳೀಯರಿಗೆ ಹೊರೆಯಾದ ‘ಫಾಸ್ಟ್ಯಾಗ್‌’

ಫಾಸ್ಟ್ಯಾಗ್ ಕಡ್ಡಾಯ: ಸಂಚಾರ ನಿರಾತಂಕ
Last Updated 17 ಫೆಬ್ರುವರಿ 2021, 4:34 IST
ಅಕ್ಷರ ಗಾತ್ರ

ನಂಗಲಿ: ಸಂಚಾರದ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಮತ್ತು ಸುಂಕ ವಸೂಲಿ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದೆ. ಇದರಿಂದ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದೆ ಸಂಚರಿಸಿದರು.

ಫಾಸ್ಟ್ಯಾಗ್ ಇಲ್ಲದ ವಾಹನಗಳು ದುಪ್ಪಟ್ಟು ಹಣ ಪಾವತಿಸಬೇಕು ಎಂಬ ಕಟ್ಟಪ್ಪಣೆಯನ್ನು ಸಾರಿಗೆ ಇಲಾಖೆ ಆದೇಶ ಮಾಡಿದೆ‌. ವಾಹನ ಸವಾರರಿಗೆ ಯಾವುದೇ ಸಮಸ್ಯೆ ಆಗದೆ ಎಂದಿನಂತೆ ವಾಹನಗಳು ಸಂಚರಿಸಿದವು.

ಫೆ.15ರಮಧ್ಯರಾತ್ರಿಯಿಂದಲೇ ಕೇಂದ್ರ ಸಾರಿಗೆ ಇಲಾಖೆ ಫಾಸ್ಟ್ಯಾಗ್ ಕಡ್ಡಾಯ ಮಾಡಿ
ಫಾಸ್ಟ್ಯಾಗ್ ಖಾತೆಯಲ್ಲಿ ಕನಿಷ್ಠ ಹಣ ಇಲ್ಲದೆ ಇರುವಾಗ ಎರಡರಷ್ಟು ಸುಂಕವನ್ನು ಸಂದಾಯ ಮಾಡಿ ಟೋಲ್‌ಗಳಲ್ಲಿ ವಾಹನಗಳು ಸಂಚರಿಸಬಹುದು. ಇಲ್ಲವಾದಲ್ಲಿ ಸುಂಕ ವಸೂಲಿ ಕೇಂದ್ರಗಳ ಬಳಿ ಇರುವ ಫಾಸ್ಟ್ಯಾಗ್ ಕೇಂದ್ರಗಳ ಬಳಿ ಫಾಸ್ಟ್ಯಾಗ್ ಕಾರ್ಡುಗಳನ್ನು ಮಾಡಿಸಿಕೊಂಡು ನಂತರ ವಾಹನಗಳು ಟೋಲುಗಳಲ್ಲಿ ಸಂಚರಿಸಬಹುದು ಎಂದು ಆದೇಶ ಮಾಡಿದ್ದರಿಂದ ಬಹುತೇಕ ವಾಹನ ಸವಾರರು ಸಾರಿಗೆ ಇಲಾಖೆಯ ಆದೇಶದಿಂದ ಸಮಸ್ಯೆ ಇಲ್ಲದಂತೆ ಸಂಚರಿಸಿದರೆ ಕೆಲವೊಂದು ವಾಹನ ಸವಾರರು ಮಾತ್ರ ಸಮಸ್ಯೆಗೆಸಿಲುಕಿದರು.

ಸ್ಥಳೀಯ ವಾಹನ ಸವಾರರಿಗೆ ಸಮಸ್ಯೆ: ಇನ್ನು ಫಾಸ್ಟ್ಯಾಗ್ ಜಾರಿಯಿಂದ ಸ್ಥಳೀಯ ಪಾಸ್‌ಗಳನ್ನು ಹೊಂದಿದ್ದ ವಾಹನ ಸವಾರರಿಗೆ ಫಾಸ್ಟ್ಯಾಗ್ ನಿಂದ ಸಮಸ್ಯೆ ಎದುರಾದಂತೆ ಕಂಡುಬಂತು. ದಿನ ಒಂದರಲ್ಲಿ ಎರಡು ಮೂರು ಭಾರಿ ಸಂಚರಿಸುವ ಸ್ಥಳೀಯ ವಾಹನ ಸವಾರರು ಇಷ್ಟು ದಿನ ಸ್ಥಳೀಯ ಪಾಸ್‌ಗಳಲ್ಲಿ ಸುಂಕ ವಸೂಲಿ ಕೇಂದ್ರಗಳಲ್ಲಿ ಸಂಚರಿಸುತ್ತಿದ್ದರು. ಆದರೆ ಫೆಬ್ರವರಿ 15ರ ಮಧ್ಯರಾತ್ರಿಯಿಂದಲೇ ಫಾಸ್ಟ್ಯಾಗ್ ಹೊಂದಿರಬೇಕು ಎಂದು ಆದೇಶ ಬಂದಿದ್ದರಿಂದ ಸುಂಕ ವಸೂಲಿ ಕೇಂದ್ರದ ನೌಕರರುಸ್ಥಳೀಯ ವಾಹನ ಸವಾರರಿಗೆ ಆದೇಶದ ಪ್ರತಿಗಳನ್ನು ತೋರಿಸಿ‌ ಫಾಸ್ಟ್ಯಾಗ್ ಕಾರ್ಡ್ ಮಾಡಿಸುತ್ತಿದ್ದ ದೃಶ್ಯ ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT