ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟುಗೋಲು: 357 ಕ್ವಿಂ. ಅಕ್ಕಿ ಹರಾಜು

Last Updated 23 ಜೂನ್ 2022, 4:13 IST
ಅಕ್ಷರ ಗಾತ್ರ

ಕೋಲಾರ: ಅಕ್ರಮವಾಗಿ ಸಾಗಣೆ ವೇಳೆ ಮುಟ್ಟುಗೋಲು ಹಾಕಿಕೊಂಡಿದ್ದ 357.80 ಕ್ವಿಂಟಲ್‌ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯ ನಿಯಮಾನುಸಾರ ಬಹಿರಂಗ ಹರಾಜು ಮಾಡಲು ತಾಲ್ಲೂಕು ಆಡಳಿತ ಮುಂದಾಗಿದೆ.

ಕೋಲಾರದ ಎಪಿಎಂಸಿ ಮಾರುಕಟ್ಟೆ ಆವರಣದ ಟಿಎಪಿಸಿಎಂಎಸ್ ಆಹಾರ ಮಳಿಗೆಯ ಪ್ರಾಂಗಣದಲ್ಲಿ ಜುಲೈ 1 ರಂದು ಮಧ್ಯಾಹ್ನ 12ಕ್ಕೆ ಬಹಿರಂಗ ಹರಾಜು ನಡೆಯಲಿದೆ.

ಪಡಿತರ ಚೀಟಿದಾರರಿಗೆ ಸರ್ಕಾರ ಬಿಡುಗಡೆ ಮಾಡಿದ್ದ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿತ್ತು.

‘ಅಗತ್ಯ ವಸ್ತುಗಳ ಸಗಟು/ಚಿಲ್ಲರೆ ವ್ಯಾಪಾರಸ್ತರು, ಕಮಿಷನ್ ಏಜೆಂಟರು, ಅಕ್ಕಿ ಗಿರಣಿ ಮಾಲೀಕರು ಹಾಗೂ ದೊಡ್ಡ ಪ್ರಮಾಣದ ಬಳಕೆದಾರರ ಸಂಸ್ಥೆಗಳು ಹರಾಜಿನಲ್ಲಿ ಭಾಗವಹಿಸಬಹುದು’ ಎಂದು ತಾಲ್ಲೂಕಿನ ತಹಶೀಲ್ದಾರ್‌ ನಾಗರಾಜ್‌ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

ಮಾಹಿತಿಗಾಗಿ ತಹಶೀಲ್ದಾರ್‌, ಮೊಬೈಲ್‌– 9844763338 ಅಥವಾ ಆಹಾರ ನಿರೀಕ್ಷಕರು, ಮೊಬೈಲ್–9353957978 ಗೆ ಸಂಪರ್ಕಿಸಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT