ಬುಧವಾರ, ಜನವರಿ 22, 2020
16 °C

ಕುರಿ ಖರೀದಿಸಿದ ಮಾಜಿ ಸ್ಪೀಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಹಾಗೂ ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ರೈತರಂತೆಯೇ ತಲೆಗೆ ಟವೆಲ್‌ ಸುತ್ತಿಕೊಂಡು ಸಂತೆಯಲ್ಲಿ ಕುರಿ ಖರೀದಿಸಿದ ದೃಶ್ಯಾವಳಿಯ ವಿಡಿಯೋ ವೈರಲ್‌ ಆಗಿದೆ.

ರಮೇಶ್‌ಕುಮಾರ್‌ ಶ್ರೀನಿವಾಸಪುರ ತಾಲ್ಲೂಕಿನಲ್ಲಿರುವ ತಮ್ಮ ಸ್ವಗ್ರಾಮ ಅಡ್ಡಗಲ್‌ನ ತೋಟದ ಮನೆಯಲ್ಲಿ ಹಲವು ವರ್ಷಗಳಿಂದ ಕುರಿ ಸಾಕುತ್ತಿದ್ದಾರೆ. ಅವರು ಜನಸಾಮಾನ್ಯರಂತೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಮದನಪಲ್ಲಿ ತಾಲ್ಲೂಕಿನ ಅಂಗಲಾ ಗ್ರಾಮದ ಸಂತೆಗೆ ಹೋಗಿ ಕುರಿ ಖರೀದಿ ಮಾಡಿದ್ದಾರೆ.

ಕುರಿ ಸಂತೆಯಲ್ಲಿದ್ದ ಸಾರ್ವಜನಿಕರು ಈ ದೃಶ್ಯಾವಳಿಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ವಾಟ್ಸ್‌ ಆ್ಯಪ್‌ನಲ್ಲಿ ಹರಿಬಿಟ್ಟಿದ್ದು, ದೃಶ್ಯಾವಳಿ ವೈರಲ್‌ ಆಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು