ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸರ್ಕಾರಿ ನೌಕರರ ಕ್ರೀಡಾಕೂಟ; ಬಿರುಸಿನ ಪೈಪೋಟಿ

Last Updated 29 ಜನವರಿ 2023, 5:48 IST
ಅಕ್ಷರ ಗಾತ್ರ

ಕೋಲಾರ: ಕಂದಾಯ ಇಲಾಖೆಯ ಕಲ್ಪನಾ ಶನಿವಾರ ಆರಂಭವಾದ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದ 100 ಮೀಟರ್ ಓಟದಲ್ಲಿ ಮೊದಲ ಸ್ಥಾನ ಗಳಿಸಿದರು.

ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ 35 ವರ್ಷಕ್ಕಿಂತ ಕೆಳಗಿನವರ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಎರಡನೇ ಸ್ಥಾನವನ್ನು ಲೋಕೋಪಯೋಗಿ ಇಲಾಕೆಯ ಬಿ.ಎಸ್‌.ದೇವಿಕಾ ಪಡೆದರು.

ಸಮಾಜ ಕಲ್ಯಾಣ ಇಲಾಖೆಯ ಟಿ.ಆರ್.ಶಿವರಾಜ್‌ ಕುಮಾರ್‌ ಪುರುಷರ ವಿಭಾಗದ 800 ಮೀಟರ್ ಓಟದಲ್ಲಿ ಮೊದಲ ಸ್ಥಾನ ಗಳಿಸಿದರು. ಎರಡನೇ ಸ್ಥಾನವನ್ನು ನ್ಯಾಯಾಂಗ ಇಲಾಖೆಯ ಬಾಬು ಪಡೆದರು.

ಫಲಿತಾಂಶ ಇಂತಿವೆ:

ಮಹಿಳೆಯರ ವಿಭಾಗ: 35ಕ್ಕಿಂತ ಕೆಳಗಿನವರ ವಿಭಾಗ: 100 ಮೀ.: ಕಲ್ಪನಾ (ಕಂದಾಯ)–1, ಬಿ.ಎಸ್‌.ದೇವಿಕಾ (ಪಿಡಬ್ಲ್ಯುಡಿ)–2; 200 ಮೀ.: ಬಿ.ಎಸ್‌.ದೇವಿಕಾ (ಪಿಡಬ್ಲ್ಯುಡಿ)–1, ಕಲ್ಪನಾ (ಕಂದಾಯ)–2; 400 ಮೀ.: ಲಾವಣ್ಯಾ (ಶಿಕ್ಷಣ)–1, ದಿವ್ಯಾ (ಸಮಾಜ ಕಲ್ಯಾಣ)–2; 800 ಮೀ,: ಅಂಬಿಕಾ (ಬಿಸಿಎಂ)–1, ಎಲ್‌.ಎಸ್‌.ಚೈತನ್ಯಾ (ಶಿಕ್ಷಣ)–2; ಡಿಸ್ಕಸ್‌ ಥ್ರೋ: ಪುಷ್ಪಾ (ಅಬಕಾರಿ)–1, ಲಾವಣ್ಯಾ (ಶಿಕ್ಷಣ)–2; ಗುಂಡು ಎಸೆತ: ಎಸ್‌.ಲಾವಣ್ಯಾ (ಶಿಕ್ಷಣ)–1, ಪುಷ್ಪಾ (ಅಬಕಾರಿ)–2; ಲಾಂಗ್‌ ಜಂಪ್‌: ಎನ್‌.ಜಿ.ವೀಣಾ (ಶಿಕ್ಷಣ)–1, ಲಾವಣ್ಯಾ (ಶಿಕ್ಷಣ)–2; ಹೈಜಂಪ್‌: ಮಮತಾ (ಆರೋಗ್ಯ)–1, ಆರ್‌.ಆಶಾ (ಶಿಕ್ಷಣ–ಬಂಗಾರಪೇಟೆ)–2; 4x100 ರಿಲೇ: ಕಲ್ಪನಾ, ದೇವಿಕಾ, ರೇಖಾ, ತಬಸಂ (ಕೋಲಾರ)–1, ಉಮಾ, ಸುಮಾ, ಲಾವಣ್ಯ, ರೂಪಾ (ಬಂಗಾರಪೇಟೆ)–2.

35ರಿಂದ 45 ವರ್ಷ: 100 ಮೀ: ಎನ್‌.ಜಿ.ವೀಣಾ (ಶಿಕ್ಷಣ)–1, ಮಾಘವಿ (ಶಿಕ್ಷಣ)–2; 200 ಮೀ.: ತಬಸ್ಸಂ (ಶಿಕ್ಷಣ)–1, ಮಾಘವಿ (ಶಿಕ್ಷಣ)–2; 400 ಮೀ: ತಬಸ್ಸಂ (ಶಿಕ್ಷಣ)–1, ಅನುಪಮಾ (ಶಿಕ್ಷಣ)–2; ಡಿಸ್ಕಸ್‌ ಥ್ರೋ: ರತ್ನಮ್ಮ (ಶಿಕ್ಷಣ)–1, ಶೈಲಾ (ಶಿಕ್ಷಣ)–2; ಹೈಜಂಪ್‌: ಪ್ರಭಾವತಿ (ಶಿಕ್ಷಣ)–1, ಪ್ರೇಮಲತಾ (ಆರೋಗ್ಯ)–2; ಗುಂಡು ಎಸೆತ: ಜಯಸುಧಾ (ಶಿಕ್ಷಣ)–1, ಅಂಬಿಕಾ (ಬಿಸಿಎಂ)–2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT