ಹೊಸಪೇಟೆ (ವಿಜಯನಗರ): ಅನಾರೋಗ್ಯದಿಂದ ಬಳಲುತ್ತಿರುವ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆನೆ ‘ಲಕ್ಷ್ಮಿ’ಯನ್ನು ಬುಧವಾರ ನಸುಕಿನಲ್ಲೇ ಲಾರಿಗೆ ಹತ್ತಿಸಿ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಷ್ಮೀಪುರ ಆನೆ ಶಿಬಿರಕ್ಕೆ ಕಳುಹಿಸಿಕೊಡಲಾಯಿತು.

ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನೂರಾರು ಮಂದಿ ದೇವಸ್ಥಾನದ ಮುಂಭಾಗದಲ್ಲಿ ಸೇರಿದ್ದರು. ಆನೆಯನ್ನು ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡರು. ಲಾರಿ ಹತ್ತುವಾಗ ಮೊಬೈಲ್ಗಳಲ್ಲಿ ಚಿತ್ರ ಸೆರೆ ಹಿಡಿದರು.

ಆನೆಯ ಮಾವುತ ರಾಜಣ್ಣ, ಅವರ ಮೊಮ್ಮಗ ಭುವನ್, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಮಂಜುನಾಥ್ ಸಹಿತ ನಾಲ್ಕಾರು ಮಂದಿ ಆನೆಯ ಜತೆಗೆ ಕೋಲಾರದತ್ತ ತೆರಳಿದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಆನೆ ಲಕ್ಷ್ಮೀಪುರ ಶಿಬಿರ ತಲುಪಿತು. ಬಿಸಿಲಲ್ಲಿ ಹೋದ ಆನೆಗೆ ಕೆಲವೇ ನಿಮಿಷಗಳಲ್ಲಿ ಸ್ನಾನ ಮಾಡಿಸಲಾಯಿತು. ಬಳಿಕ ದೇವರ ಪ್ರಸಾದ ಹಚ್ಚಿ, ಬಿಸಿಲಿನ ಝಳ ತಗ್ಗಿಸುವ ನಿಟ್ಟಿನಲ್ಲಿ ಕಲ್ಲಂಗಡಿ ಹಣ್ಣು ಸಹಿತ ಅದಕ್ಕೆ ಇಷ್ಟವಾದ ಆಹಾರ ನೀಡಲಾಯಿತು.

‘ನಾನು ಕೆಲವು ದಿನ ಆನೆಯ ಜತೆಗೇ ಇದ್ದು ಊರಿಗೆ ಬರಲಿದ್ದೇನೆ, ಈ ವಾತಾವರಣಕ್ಕೆ ಒಗ್ಗಿಕೊಳ್ಳುವ ತನಕ ನಾನು ಆನೆಯ ಜತೆಗೇ ಇರಬೇಕಾಗುತ್ತದೆ. ಕಲ್ಲು ಚಪ್ಪಡಿಯ ಬದಲಿಗೆ ಇಲ್ಲಿ ಮಣ್ಣು ಇದೆ, ಆನೆಗೆ ಇಂತಹದೇ ಸ್ಥಳ ಬೇಕು. ಹಂಪಿ ಸಮೀಪ ಇಂತಹ ಮಣ್ಣಿನ ಜಾಗ ಕಲ್ಪಿಸಿದ್ದರೆ ಆನೆಗೆ ತೊಂದರೆಯೇ ಆಗುತ್ತಿರಲಿಲ್ಲ’ ಎಂದು ಮಾವುತ ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-25-2045762436

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.