ಕೋಲಾರ: ಜೆಡಿಎಸ್ ಪಕ್ಷ ಸೇರಲು ‘ಸ್ವಾಭಿಮಾನಿ ಜನತಾ ಪಕ್ಷ’ದ ಹೂಡಿ ವಿಜಯಕುಮಾರ್ ಸಜ್ಜಾಗಿರುವ ಬೆನ್ನಲೇ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ನಡುವೆ ಬಿರುಕು ಮೂಡಿರುವಂತಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದ ಹೂಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸುವ ಮೂಲಕ ಜೆಡಿಎಸ್ ವರಿಷ್ಠರು ಮೈತ್ರಿ ಧರ್ಮ ಪಾಲನೆ ಮುರಿಯುತ್ತಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಕೆ.ಎಸ್.ಮಂಜುನಾಥಗೌಡ ಸಿಡಿದೆದ್ದಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅವರಿಗೆ ಈ ಕ್ಷೇತ್ರದಲ್ಲಿ ಮೈತ್ರಿ ಪಕ್ಷದಿಂದ ಹೂಡಿ ಅವರನ್ನು ಕಣಕ್ಕಿಳಿಸಿದರೆ ತಮ್ಮ ಪಾಡೇನು ಎಂಬುದು ಈ ಆತಂಕಕ್ಕೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ ಹಾಗೂ ಪುರಸಭೆಗೆ ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಿನ ಬೆಳವಣಿಗೆ ಉಭಯ ಪಕ್ಷಗಳ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಸದ್ಯ ಮಾಲೂರು ಕ್ಷೇತ್ರಕ್ಕೆ ಸೀಮಿತವಾಗಿ ಕೆಲವೊಂದು ಬೆಳವಣಿಗೆ ನಡೆದಿದ್ದರೂ ಜಿಲ್ಲೆಯ ಇನ್ನುಳಿದ ಕ್ಷೇತ್ರಗಳಲ್ಲೂ ಈಗಾಗಲೇ ಗುಸುಗುಸು ಆರಂಭವಾಗಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷಗಳು ಇರುವಾಗಲೇ ನಡೆಯುತ್ತಿರುವ ಇಂಥ ಬೆಳವಣಿಗೆ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕಿಸಿದಂತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖವಾಗಿ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಹೂಡಿ ವಿಜಯಕುಮಾರ್ ಸ್ಪರ್ಧಿಸಿ ಕಮಲದ ಗೆಲುವಿಗೆ ಅಡ್ಡಗಾಲಾಗಿದ್ದರು ಎಂಬ ಟೀಕೆ ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್ ಪರೋಕ್ಷವಾಗಿ ಸಹಾಯ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಮಂಜುನಾಥಗೌಡ ಸೇರಿದಂತೆ ಮೈತ್ರಿ ಅಂಗ ಪಕ್ಷವಾದ ಬಿಜೆಪಿಯ ಹಲವು ಮುಖಂಡರು ಈ ರೀತಿ ಆರೋಪಿಸುತ್ತಿದ್ದು, ಸದ್ಯದ ಬೆಳವಣಿಗೆಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅಲ್ಲದೇ, ವರಿಷ್ಠರಿಗೆ ಮಾಹಿತಿ ರವಾನಿಸುತ್ತಿದ್ದಾರೆ. ಈಗಾಗಲೇ ಜೆಡಿಎಸ್ನವರು ಮುಂದಿನ ಮುಖ್ಯಮಂತ್ರಿ ಪ್ರಸ್ತಾಪದ ನಂತರ ರಾಜ್ಯಮಟ್ಟದಲ್ಲೇ ಭಿನ್ನಾಭಿಪ್ರಾಯ ಮೂಡಿದ್ದು, ಮೈತ್ರಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗೊತ್ತಾಗುತ್ತಿದೆ.

ಈ ಬೆಳವಣಿಗೆಯು ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದವರು ಒಳಗೊಳಗೆ ಖುಷಿಪಡುವಂತೆ ಮಾಡಿದೆ. ಮೈತ್ರಿ ಬಿರುಕನ್ನು ಬಂಡವಾಳವಾಗಿಸಿಕೊಳ್ಳಲು ‘ಕೈ’ ಮುಖಂಡರು ಮುಂದಾಗಿದ್ದಾರೆ.

ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ತೆನೆ ಹೊರಲು ಸಿದ್ಧವಾಗಿರುವ ಹೂಡಿ ವಿಜಯಕುಮಾರ್ ವಿರುದ್ಧ ಕೆ.ಎಸ್.ಮಂಜುನಾಥಗೌಡ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿರುವುದು ಮುಂದಿನ ಬೆಳವಣಿಗೆಗಳನ್ನು ಅಚ್ಚರಿಯಿಂದ ಗಮನಿಸುವಂತೆ ಮಾಡಿದೆ.

ಚುನಾವಣೆಗೆ ಇನ್ನೂ ಎರಡು ವರ್ಷವಿದ್ದು, ಟಿಕೆಟ್ ವಿಚಾರವನ್ನು ಆಗ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೂಡಿ ವಿಜಯಕುಮಾರ್ ಹೇಳಿದರೆ, ಮಾಲೂರಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು ಟಿಕೆಟ್ ಖಚಿತವೆಂದು ಆ ಪಕ್ಷದ ಮುಖಂಡ ಜೆ.ಇ.ರಾಮೇಗೌಡ ಹೇಳಿರುವುದು ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

Highlights - ಮೈತ್ರಿ ಬಿರುಕನ್ನು ಬಂಡವಾಳವಾಗಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಮಾಲೂರಲ್ಲಿ ಬಿಜೆಪಿಗಿಂತ ಜೆಡಿಎಸ್ ಬಲಿಷ್ಠ ಎಂದ ರಾಮೇಗೌಡ ಟಿಕೆಟ್ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದ ಹೂಡಿ ವಿಜಯಕುಮಾರ್

Cut-off box - ಕಾಂಗ್ರೆಸ್ ಗೆಲ್ಲಿಸಲು ಜೆಡಿಎಸ್ ನಾಟಕ: ಮಂಜುನಾಥಗೌಡ ಮಾಲೂರು ಸೇರಿದಂತೆ ಹಲವೆಡೆ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಜೆಡಿಎಸ್ನಿಂದ ನಾಟಕ ನಡೆಯುತ್ತಿದೆ. ಬಿಜೆಪಿಗೆ ಹೊಡೆತ ನೀಡಲು ಈ ಕುತಂತ್ರ ನಡೆಯುತ್ತಿದೆ. ಇದೇ ಉದ್ದೇಶಕ್ಕೆ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಂತಿದೆ. ಹೂಡಿ ವಿಜಯಕುಮಾರ್ ಅವರನ್ನು ಜೆಡಿಎಸ್ಗೆ ಸೇರಿಸಿಕೊಳ್ಳುತ್ತಿರುವುದು ಮೈತ್ರಿ ನಾಟಕದ ಎರಡನೇ ಭಾಗವಾಗಿದೆ. ಈ ರೀತಿ ಎಚ್.ಡಿ.ಕುಮಾರಸ್ವಾಮಿ ಮಾಡಬಾರದಿತ್ತು ಎಂದು ಮಾಜಿ ಶಾಸಕ ಬಿಜೆಪಿಯ ಕೆ.ಎಸ್.ಮಂಜುನಾಥಗೌಡ ಅಸಮಾಧಾನ ಹೊರಹಾಕಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಜೆಡಿಎಸ್ ಸೇರುತ್ತಿರುವ ಹೂಡಿ ವಿಜಯಕುಮಾರ್ ಕೇವಲ ಒಂದು ‘ಪಾನ್’ ಇದ್ದಂತೆ. ಕಿಂಗ್ ಕ್ವೀನ್ ಬೇರೆಯವರೇ ಇದ್ದಾರೆ. ಮಾಲೂರಿನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದ್ದು ಕಾಂಗ್ರೆಸ್ ಪಕ್ಷವನ್ನು ಮತ್ತೆ ಗೆಲ್ಲಿಸಲು ಹೊರಟಿದ್ದಾರೆ. ಗಣಿ ಪ್ರಕರಣ ಹಾಗೂ ಇ.ಡಿ ದಾಳಿ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರಿಗೆ ರಕ್ಷಣೆ ಕೊಟ್ಟಿದ್ದೇ ಕುಮಾರಸ್ವಾಮಿ’ ಎಂದು ನೇರವಾಗಿ ಆರೋಪಿಸಿದರು. ಹೂಡಿ ವಿಜಯಕುಮಾರ್ ಕಳೆದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಆಗಿದ್ದವರು. ಪಕ್ಷದ ವರಿಷ್ಠರ ಮೇಲೆಯೇ ಟೀಕಾ ಪ್ರಹಾರ ನಡೆಸಿದ್ದರು. ಆಗ ಏನೆಲ್ಲಾ ನಡೆಯಿತು ಎಂಬುದು ಇಡೀ ಕ್ಷೇತ್ರದ ಜನರಿಗೆ ಗೊತ್ತಿದೆ. ಜೆಡಿಎಸ್ನಿಂದ ರಾಮೇಗೌಡರನ್ನು ಕಣಕ್ಕಿಳಿಸಿದ್ದು ಬಿಜೆಪಿ ಸೋಲಿಸಲು ಎಂಬುದು ಸ್ಪಷ್ಟ. ಈಗ ಮತ್ತೆ ಕ್ಷೇತ್ರದ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಕೋಲಾರ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಇಂಥ ಕುತಂತ್ರ ನಡೆಯುತ್ತಿದೆ ಎಂದು ದೂರಿದರು. ಈ ಎಲ್ಲಾ ವಿಚಾರಗಳು ನಮ್ಮ ವರಿಷ್ಠರಿಗೆ ಗೊತ್ತಿದೆ. ಚುನಾವಣೆಗೆ ಇನ್ನೂ ಎರಡು ವರ್ಷವಿದ್ದು ನಾನು ಕೂಡ ಈ ಕುತಂತ್ರ ಎದುರಿಸಲು ಸಿದ್ಧನಿದ್ದೇನೆ ಎಂದರು.

ಮಲ್ಲೇಶ್ ಬಾಬು ವಿರುದ್ಧವೂ ಕೆಎಸ್ಎಂ ಅಸಮಾಧಾನ

ಲೋಕಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ನಾನು ಕೈನಿಂದ ದುಡ್ಡು ಹಾಕಿ ಮಲ್ಲೇಶ್ ಬಾಬು ಅವರ ಪರ ಕೆಲಸ ಮಾಡಿದೆ. ಈಗ ಹೂಡಿ ವಿಜಯಕುಮಾರ್ ಅವರನ್ನು ಕುಮಾರಸ್ವಾಮಿ ಬಳಿ ಕರೆದುಕೊಂಡು ಹೋಗಿ ಪಕ್ಕದಲ್ಲಿ ನಿಲ್ಲಿಸಿಕೊಂಡು ಫೋಟೊ ತೆಗೆಸಿಕೊಳ್ಳುತ್ತಾರೆ. ಇದ್ಯಾವ ನ್ಯಾಯ? ಈ ಬಗ್ಗೆ ನಾನು ಸಂಸದರನ್ನು ಜೋರು ದನಿಯಲ್ಲಿಯೇ ಪ್ರಶ್ನೆ ಮಾಡಿದ್ದೇನೆ ಎಂದು ಕೆ.ಎಸ್.ಮಂಜುನಾಥಗೌಡ ಹೇಳಿದರು. ಇದು ಬೆನ್ನಿಗೆ ಚೂರಿ ಹಾಕುವ ಕೆಲಸವಲ್ಲದೇ ಮತ್ತೇನು? ನಾನು ತುಸು ಮೃದವಾಗಿ ಈ ರೀತಿ ಹೇಳುತ್ತಿದ್ದೇನೆ. ಹಳ್ಳಿ ಜನ ಬೇರೆ ರೀತಿಯಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.

ಟಿಕೆಟ್ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು

ಲೋಕಸಭೆ ಚುನಾವಣೆಯಲ್ಲೇ ನಾನು ಎನ್ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಬೆಂಬಲಿಸಿ ಕೆಲಸ ಮಾಡಿದ್ದೆ. ಆಗಿನಿಂದಲೇ ಜೆಡಿಎಸ್ ಸೇರುವ ಮಾತುಕತೆ ನಡೆಯುತ್ತಿತ್ತು. ಈಗ ಒಪ್ಪಿಗೆ ನೀಡಿದ್ದು ಮಾರ್ಚ್ 5ರಂದು ಜೆಡಿಎಸ್ ಸೇರುತ್ತಿದ್ದೇನೆ. ರಾಮೇಗೌಡರ ನೇತೃತ್ವದಲ್ಲಿ ಮಾಲೂರು ಕ್ಷೇತ್ರದಲ್ಲಿ ಜೆಡಿಎಸ್ ಬಲಪಡಿಸುವ ಕೆಲಸ ಮಾಡುತ್ತೇನೆ. ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷವಿದ್ದು ಆ ಬಗ್ಗೆ ಯೋಚನೆ ಮಾಡಿಲ್ಲ. ಟಿಕೆಟ್ ನೀಡುವ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಹೂಡಿ ವಿಜಯಕುಮಾರ್ ಸ್ವಾಭಿಮಾನಿ ಜನತಾ ಪಕ್ಷದ ಮುಖಂಡ

ನಾಲ್ಕು ಕ್ಷೇತ್ರಗಳಲ್ಲಿ ಗೊಂದಲ

ಮಾಲೂರು ಅಲ್ಲದೇ; ಕೋಲಾರ ಬಂಗಾರಪೇಟೆ ಹಾಗೂ ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿದ್ದು 2028ರ ಚುನಾವಣೆಯಲ್ಲಿ ಯಾವ ರೀತಿ ಹೊಂದಾಣಿಕೆ ನಡೆಯಲಿದೆ ಎಂಬುದು ಆ ಪಕ್ಷದ ಮುಖಂಡರು ಕಾರ್ಯಕರ್ತರಲ್ಲೇ ಈಗಲೇ ಗೊಂದಲ ಉಂಟು ಮಾಡಿದೆ. ಜಿಲ್ಲೆಯಲ್ಲಿ ಸಂಘಟನೆ ಇಲ್ಲದೆ ಸಮರ್ಥ ಜಿಲ್ಲಾಧ್ಯಕ್ಷರಿಲ್ಲದೆ ಸೊರಗಿರುವ ಜೆಡಿಎಸ್ಗೆ ಈ ಬೆಳವಣಿಗೆಗಳು ನುಂಗಲಾರದ ತುತ್ತಾಗಿವೆ. ಜೆಡಿಎಸ್ ಸೇರಲು ಸಜ್ಜಾಗಿರುವ ಹೂಡಿ ವಿಜಯ್ ಕುಮಾರ್ ಖುಷಿಯಾಗಿದ್ದಾರೆ. ಮಾಲೂರಿನಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ಜೆಡಿಎಸ್ ವರಿಷ್ಠರು ಕೂಡ ಖುಷಿಯಲ್ಲಿದೆ. ಆದರೆ ಟಿಕೆಟ್ ವಿಚಾರ ಹಾಗೂ ಪಕ್ಷದ ಸಂಘಟನೆ ನಿಟ್ಟಿನಲ್ಲಿ ಮುಂದಿನ ಬೆಳವಣಿಗೆಗಳು ಮಾತ್ರ ಕುತೂಹಲ ಮೂಡಿಸಿವೆ.

ಮಾಲೂರಲ್ಲಿ ಜೆಡಿಎಸ್ಗೆ ಟಿಕೆಟ್ ಖಚಿತ ಕೆ.ಎಸ್.ಮಂಜುನಾಥಗೌಡ

ಈ ಹಿಂದೆ ಗೆದ್ದು ಶಾಸಕರಾಗಿದ್ದು ಜೆಡಿಎಸ್ನಿಂದ. ಬಿಜೆಪಿಯಿಂದ ಆಗಿಲ್ಲವಲ್ಲ. ಈ ಭಾಗದಲ್ಲಿ ನಮ್ಮ ಪಕ್ಷ ಬಿಜೆಪಿಗಿಂತ ಬಲಿಷ್ಠವಾಗಿದೆ. ಹೀಗಾಗಿ ಜೆಡಿಎಸ್ಗೆ ಶೇ 100ರಷ್ಟು ಟಿಕೆಟ್ ಸಿಗುವುದು ಖಚಿತ. ಕೋಲಾರ ರಾಜಕಾರಣ ವಿಚಿತ್ರವಾಗಿದೆ. ಹಿಂದಿನ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷವಿದ್ದು ಪಕ್ಷದ ಸಂಘಟನೆಗೆ ಒತ್ತು ನೀಡಲಾಗುವುದು ಜೆ.ಇ.ರಾಮೇಗೌಡ ಜೆಡಿಎಸ್ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.