ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಶಾಲಾ ಮಕ್ಕಳ ಹಾಜರಾತಿ ಏರಿಕೆ

Last Updated 6 ಜನವರಿ 2021, 3:51 IST
ಅಕ್ಷರ ಗಾತ್ರ

ಮಾಲೂರು: ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಏರಿಕೆಯಾಗುತ್ತಿದೆ. ಒಂದೆರಡು ದಿನಗಳಲ್ಲಿ ಶೇ 90 ರಷ್ಟು ಹಾಜರಾತಿ ಹೆಚ್ಚಳವಾಗಲಿದೆ ಎಂದು ಬಿಇಒ ಟಿ.ಕೃಷ್ಣ ಮೂರ್ತಿತಿಳಿಸಿದರು.

ಪಟ್ಟಣದ ಬಾಲಕಿಯರ ಸರ್ಕಾರಿಪ್ರೌಢಶಾಲೆಗೆ ಮಂಗಳವಾರ ಭೇಟಿ ನೀಡಿ ಮಕ್ಕಳ ಹಾಜರಾತಿ ಹಾಗೂ ಕೋವಿಡ್ -19 ನಿಯಮಗಳನ್ನು ಪರಿಶೀಲಿಸಿ ಮಾತನಾಡಿದರು.

ಜನವರಿ 1ರಿಂದ 6 ಹಾಗೂ 10ನೇ ತರಗತಿ ವರೆಗೆ ಶಾಲೆಗಳನ್ನು ಆರಂಭಿಸಿದ್ದು, ಕೋವಿಡ್ ಆರೋಗ್ಯ ಸಂರಕ್ಷಣಾತ್ಮಕ ಮಾರ್ಗಸೂಚಿಗಳ ಅನ್ವಯ ಪ್ರತಿ ನಿತ್ಯ ಶಾಲೆಗೆ ಬರುವ ವಿದ್ಯಾರ್ಥಿ, ಬೋಧಕ, ಬೋಧಕೇತರ ಸಿಬ್ಬಂದಿ ತಪಾಸಣೆ ಮಾಡಿ ಶಾಲೆಯ ಒಳಗಡೆ ಬಿಡಲಾಗುತ್ತಿದೆ. ಶಾಲೆಯ ಕೊಠಡಿಗಳನ್ನು ಸ್ಯಾನಿಟೈಸರ್ ಮಾಡಿಸಿ ಒಂದು ಕೊಠಡಿಗೆ 15 ರಿಂದ 20 ಮಕ್ಕಳಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್-19 ಮಾರ್ಗ ಸೂಚಿಗಳನ್ನು ತಪಾಸಣೆ ಮಾಡಲು ಪ್ರತಿ ನಿತ್ಯ 5 ತಂಡಗಳನ್ನು ರೂಪಿಸಿ ಮಾಹಿತಿ ನೀಡಲಾಗುತ್ತಿದೆ ಎಂದರು.

ಉಚಿತ ಮಾಸ್ಕ್ ವಿತರಣೆ: ತಾಲ್ಲೂಕಿನ ಸಂತೇಹಳ್ಳಿ ಗ್ರಾಮದ ರಸ್ತೆ ಬಳಿ ಇರುವ ಸಿಲ್ವರ್ ಕಾಸ್ಟ್ ಗಾರ್ಮೆಂಟ್ಸ್ ಕಾರ್ಖಾನೆಯವರು 32 ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಉಚಿತವಾಗಿ ಮಾಸ್ಕ್ ನೀಡುತ್ತಿದ್ದಾರೆ. ಮಕ್ಕಳಿಗೆ 3 ಗಂಟೆಗಳ ಕಾಲ ಮಾತ್ರ ತರಗತಿ ನಡೆಸಲಾಗುತ್ತಿದೆ. 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲೇ ವಿದ್ಯಾಗಮ ಮೂಲಕ ಬೋಧನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT