ಕೋಲಾರ: ಸರ್ಕಾರಿ ಜಾಗ ಒತ್ತುವರಿ ಆಗುತ್ತಿರುವುದು ಗೊತ್ತಾಗಿಯೂ ತೆರವಿಗೆ ಕ್ರಮವಹಿಸಲು ಮುಂದಾಗದಿದ್ದರೆ ಪ್ರಚೋದನೆ ಮಾಡಿದವರು ಎಂದು ಪರಿಗಣಿಸಿ ಅಂಥ ಅಧಿಕಾರಿ ಮೇಲೆ ದೂರು ದಾಖಲಿಸಬಹುದು. ಗೊತ್ತಿದ್ದೂ ನಿರ್ಲಕ್ಷ್ಯ ತೋರಿದರೆ ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಎಚ್ಚರಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಕಂದಾಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯಿದೆಗಳ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಜಮೀನುಗಳು ಒತ್ತುವರಿಯಾಗುತ್ತಿರುವುದು ದುರದೃಷ್ಟಕರ ವಿಚಾರ. ಸ್ಥಿರಾಸ್ತಿ ಬೆಲೆ ಗಗನಕ್ಕೇರಿದ್ದು, ಭೂ ಕಬಳಿಕೆ ಮಾಡುವವರೂ ಹೆಚ್ಚುತ್ತಿದ್ದಾರೆ, ತೆರವು ಕೂಡ ಈಗ ಕಷ್ಟವಾಗುತ್ತಿದೆ. ಸರ್ಕಾರಿ ಜಮೀನುಗಳಾದ ಗೋಮಾಳ, ಅರಣ್ಯ ಪ್ರದೇಶ, ಗುಂಡು ತೋಪು, ರಾಜಕಾಲುವೆಯನ್ನು ಹೆಚ್ಚಾಗಿ ಒತ್ತುವರಿ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದಿಶಾಂಕ ನಕ್ಷೆ ಮೂಲಕ ಜಮೀನು ಗುರುತಿಸಿ, ಒತ್ತುವರಿ ಮಾಡಿದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಬಹುದು. ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಮೊದಲು ಸರ್ಕಾರಿ ಆಸ್ತಿ ಎಷ್ಟಿದೆ ಎಂಬುದನ್ನು ಗುರುತಿಸಿ ರಕ್ಷಣೆ ಮಾಡಲು ಕ್ರಮವಹಿಸಬೇಕು. ಅಧಿಕಾರಿಗಳು ಕಾನೂನಿನಡಿ ಕಾರ್ಯನಿರ್ವಹಿಸಿದಾಗ ಗೌರವ ಉಳಿಯುತ್ತದೆ. ಅದು ಬಿಟ್ಟು ಒತ್ತಡಗಳಿಗೆ ಮಣಿದು ಕೆಲಸ ನಿರ್ವಹಿಸಿದರೆ ಅದು ಮುಂದಿನ ದಿನಗಳಲ್ಲಿ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಸರ್ಕಾರಿ ಆಸ್ತಿ ರಕ್ಷಣೆ ಮಾಡಲು ಬ್ರಿಟಿಷ್ ಕಾಲದಿಂದಲೂ ಕಾಯಿದೆ, ಕಾನೂನುಗಳಿವೆ. ಆದಾಗ್ಯೂ ಒತ್ತುವರಿ ನಡೆಯುತ್ತಲೇ ಇದೆ. ಆರಂಭದಲ್ಲಿ ಒತ್ತುವರಿ ಗುರುತಿಸುತ್ತಿರಲಿಲ್ಲ, ದೂರು ದಾಖಲಾಗುತ್ತಿರಲಿಲ್ಲ, ಇನ್ನು ಕೆಲ ಪ್ರಕರಣಗಳಲ್ಲಿ ದೂರು ದಾಖಲಾದರೂ ಸರಿಯಾದ ದಾಖಲೆಗಳಿಲ್ಲದೆ ತಡವಾಗುತ್ತಿತ್ತು. ಇದರಿಂದಾಗಿ ಜಾಗವು ಒತ್ತುವರಿಯಾಗಿ ಸಮಸ್ಯೆ ಎದುರಿಸುವ ಮೊದಲೇ ಒತ್ತುವರಿ ತಡೆಯಲು ಮುಂದಾಗಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸ್ಮಶಾನಕ್ಕಾಗಿ ಖಾಸಗಿ ಜಾಗ ಖರೀದಿ ಮಾಡಲು ಮೀಸಲಿರಿಸುವ ಪರಿಸ್ಥಿತಿ ಎದುರಾಗಿದೆ. ಮೊದಲಿಂದಲೇ ಸರ್ಕಾರಿ ಜಮೀನುಗಳನ್ನು ರಕ್ಷಣೆ ಮಾಡಿಕೊಂಡು ಬಂದಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಶೇ 30ರಷ್ಟು ಅಧಿಕಾರಿ, ಸಿಬ್ಬಂದಿ ಕೊರತೆಯಿದ್ದರೂ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಲಾಗುತ್ತಿದೆ. ಅದರಲ್ಲೂ ಇಲಾಖೆ ಪ್ರಗತಿಯಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದರು.

ಫ್ರೂಟ್ಸ್ ಐ.ಡಿ ನೋಂದಣಿ ಮಾಡಿಸಿ ರೈತರಿಗೆ ಪರಿಹಾರವನ್ನು ಸಕಾಲಕ್ಕೆ ಸಿಗುವಂತೆ ಮಾಡಿದ್ದೇವೆ. ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವಲ್ಲಿ ಶೇ 92 ರಷ್ಟು ಸಾಧನೆಯಾಗಿದೆ. ಲ್ಯಾಂಡ್ ಬೀಟ್ ನೋಂದಣಿಯಲ್ಲಿ ಜಿಲ್ಲೆಯ 34 ಸಾವಿರ ಸರ್ಕಾರಿ ಆಸ್ತಿಗಳನ್ನು ಜಿಯೋ ಫೆನ್ಸಿಂಗ್ ಮಾಡಿದ್ದೇವೆ ಎಂದರು.

ಜಿಲ್ಲೆಗೆ ಅಧಿಕಾರಿಗಳು ಬರಲು ಮುಂದಾಗುವುದಿಲ್ಲ. ಜಿಲ್ಲಾ ಪಂಚಾಯಿತಿ ಸಿಇಒ, ಲೆಕ್ಕಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇವೆ. ಇರುವ ಅಧಿಕಾರಿ, ಸಿಬ್ಬಂದಿ ಸೇವಾ ಮನೋಭಾವ ಇಟ್ಟುಕೊಂಡಿದ್ದಾರೆ. ಕಾರ್ಯವೈಖರಿ ಬದಲಾವಣೆಯಿಂದ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಹೇಳಿದರು.

ನಂತರ ವಿವಿಧ ವಿಚಾರಗಳ ಸಂಬಂಧ ಗೋಷ್ಠಿಗಳು ನಡೆದವು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕ ಬಿ.ಕೆ.ಸಂಜಯ್, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯರಾದ ಎಸ್.ಪಾಲಯ್ಯ, ಕೆ.ಎಚ್.ಅಶ್ವತ್ಥನಾರಾಯಣಗೌಡ, ಡಿಸಿಎಫ್ ವಿ.ಏಡುಕೊಂಡಲು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್ ಡಾ.ನಯನಾ, ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ.ಅಣ್ಣಯ್ಯ ಇದ್ದರು.

ಅರಣ್ಯ ಒತ್ತುವರಿ ತೆರವು–ಕೋಲಾರ ಮಾದರಿ

‘ಯಾವ ರಾಜ್ಯದಲ್ಲೂ ಸಾಧ್ಯವಾಗದ ಕೆಲಸವನ್ನು ಕೋಲಾರದಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮಾಡಿವೆ. 2 ಸಾವಿರ ಎಕರೆಗೂ ಹೆಚ್ಚು ಅರಣ್ಯ ಜಮೀನಿನ ಒತ್ತುವರಿ ತೆರವುಗೊಳಿಸುವ ಮೂಲಕ ದೇಶದ ಗಮನ ಸೆಳೆದಿದೆ. ಶ್ರೀನಿವಾಸಪುರದಲ್ಲಿ ನಡೆದಿರುವ ಕಾರ್ಯಾಚರಣೆಯೇ ಅದಕ್ಕೆ ಸಾಕ್ಷಿ. ಅಷ್ಟು ದೊಡ್ಡ ಮಟ್ಟದಲ್ಲಿ ಒತ್ತುವರಿ ತೆರವುಗೊಳಿಸುವುದು ಸುಲಭದ ಮಾತಲ್ಲ. ಅದರ ಮೌಲ್ಯವು ಕೋಟಿಗಟ್ಟಲೇ ಇರುತ್ತದೆ. ಇದು ನಿಜಕ್ಕೂ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಮಾದರಿಯಾಗಿದೆ ಕಾನೂನು ಸಮರ್ಪಕವಾಗಿ ಜಾರಿಯಾಗಿದೆ’ ಎಂದು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಶ್ಲಾಘಿಸಿದರು.

ಯಾವುದೇ ಸರ್ಕಾರಿ ಜಮೀನನ್ನು ಸಂರಕ್ಷಿಸಿ ಸರ್ಕಾರದ ಆಸ್ತಿಯಾಗಿ ಗಟ್ಟಿಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ. ಮಕ್ಕಳಂತೆ ಜೋಪಾನ ಮಾಡಬೇಕು. ಇನ್ನಾದರೂ ಎಚ್ಚೆತ್ತು ರಕ್ಷಣೆಗೆ ಮುಂದಾಗಬೇಕು.
-ಬಿ.ಎ.ಪಾಟೀಲ್, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.