ಭಾನುವಾರ, ಸೆಪ್ಟೆಂಬರ್ 25, 2022
20 °C

ಇಂಟರ್‌ವೆನ್ಷನಲ್ ರೇಡಿಯಾಲಜಿ: ಚೇತರಿಕೆಗೆ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಗರ್ಭಾಶಯದಲ್ಲಿನ ಫೈಬ್ರಾಯ್ಡ್‌ಗೆ (ನಾರುಗಡ್ಡೆ) ಎಂಬೊಲಿ ಜೇಷನ್ ಎನ್ನುವ ಇಂಟರ್‌ವೆನ್ಷನಲ್ ರೇಡಿಯಾಲಜಿ ವಿಧಾನದಿಂದ ರೋಗಿಯ ದೇಹಕ್ಕೆ ಗಾಯದ ಗುರುತು ಇಲ್ಲದಂತೆ ಚಿಕಿತ್ಸೆ ನೀಡಬಹುದಾಗಿದೆ ಎಂದು ಮಣಿಪಾಲ್‍ನ ವೈಟ್‌ಫೀಲ್ಡ್ ಆಸ್ಪತ್ರೆಯ ಇಂಟರವೆನ್ಷನಲ್ ರೇಡಿಯಾಲಜಿ ತಜ್ಞ ಡಾ.ಕೆ.ಎನ್. ನಾಗಭೂಷಣ್ ತಿಳಿಸಿದರು.

ಮಣಿಪಾಲ್ ವೈಟ್‌ಫೀಲ್ಡ್ ಆಸ್ಪತ್ರೆ, ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಫೈಬ್ರಾಯ್ಡ್‌ಗಳು, ಯಕೃತ್‌ (ಲಿವರ್) ಕ್ಯಾನ್ಸರ್ ಮತ್ತು ಅಪಘಾತ ರಕ್ತಸ್ರಾವದ ನಿರ್ವಹಣೆಯಲ್ಲಿ ಇಂಟರ್‌ವೆನ್ಷನಲ್ ರೇಡಿಯಾಲಜಿ ಪಾತ್ರ ಕುರಿತು
ಮಾತನಾಡಿದರು.

‘ಇಂಟರ್‌ವೆನ್ಷನಲ್ ರೇಡಿಯಾಲಜಿ ಚಿಕಿತ್ಸೆಯಲ್ಲಿ ಗರ್ಭಕೋಶವನ್ನು ಉಳಿಸು ವುದಷ್ಟೇ ಅಲ್ಲದೆ; ಅಧಿಕ ರಕ್ತಸ್ರಾವ, ಕೆಳ ಹೊಟ್ಟೆ ಭಾರ ಮುಂತಾದ ಲಕ್ಷಣಗಳಿಂದ ರೋಗಿಯನ್ನು ಗುಣ ಪಡಿಸಬಹುದಾಗಿದೆ. ರೋಗಿ ಬೇಗ ಚೇತರಿಸಿಕೊಳ್ಳುತ್ತಾರೆ’ ಎಂದು ಹೇಳಿದರು.

‘ಯಕೃತ್‌ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇಂಟರ್‌ವೆನ್ಷನಲ್ ರೇಡಿಯಾಲಜಿಯ ಮಹತ್ವ ಹೆಚ್ಚಿದೆ. ದೈಹಿಕವಾಗಿ ಗಾಯವಾದಾಗ ಮತ್ತು ಅಪಘಾತದ ಸಂದರ್ಭದಲ್ಲಿ ಕಿಡ್ನಿ, ಲಿವರ್ ಮುಂತಾದ ಪ್ರಮುಖ ಅಂಗಗಳಿಂದ ರಕ್ತಸ್ರಾವವಾಗುತ್ತಿರುವಾಗ ಈ ಪದ್ಧತಿ ಮೂಲಕ ಪರಿಣಾಮಕಾರಿಯಾಗಿ ನಿಲ್ಲಿಸಬಹುದಾಗಿದೆ’ ಎಂದು
ತಿಳಿಸಿದರು.

ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್. ಗಣೇಶ್, ಮಾಜಿ ಅಧ್ಯಕ್ಷ ವಿ. ಮುನಿರಾಜು, ಡಾ.ಪ್ರಕೃತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು