ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಹಾಕಿ: ಕುಮ್ಮಂಡ, ಕಲ್ಲೇಂಗಡಕ್ಕೆ ಗೆಲುವು

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮಡಿಕೇರಿ: ಬೇಪಡಿಯಂಡ ತಂಡವು  ನಾಪೋಕ್ಲು ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ‘ಕುಲ್ಲೇಟಿರ ಹಾಕಿ ಉತ್ಸವ’ದಲ್ಲಿ ಶನಿವಾರ ಚೋಕಂಡ ತಂಡವನ್ನು 3– 0 ಅಂತರದಲ್ಲಿ ಸೋಲಿಸಿತು.

ಬೇಪಡಿಯಂಡ ಪರವಾಗಿ ದಿಲನ್, ಪೊನ್ನಣ್ಣ, ಸುಬ್ಬಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಕೂಪದಿರ ತಂಡದ ವಿರುದ್ಧ ಪಾಲೇಂಗಡ ತಂಡವು 3–1 ಅಂತರದಲ್ಲಿ ಗೆದ್ದಿತು. ಪಾಲೇಂಗಡದ ಬೋಪಯ್ಯ ಎರಡು, ಸುನಿಲ್ ಒಂದು ಗೋಲು ಗಳಿಸಿದರು.

ಕುಮ್ಮಂಡ ತಂಡವು ಚೇರಂಡ ತಂಡವನ್ನು 5–0 ಅಂತರದಲ್ಲಿ ಪರಾಭವಗೊಳಿಸಿತು. ಕುಮ್ಮಂಡದ ನಿಖಿಲ್ ಉತ್ತಪ್ಪ, ನಾಗೇಶ್ ನಂಜಪ್ಪ, ದಿಲನ್ ಪೂವಯ್ಯ, ಬೋಸ್ ಚಂಗಪ್ಪ, ಕವನ್ ಕಾರ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು.

ಕಲ್ಲೇಂಗಡ ತಂಡವು ಬೊಳ್ಳಿಮಾಡ ತಂಡವನ್ನು 4–0 ಅಂತರದಲ್ಲಿ ಪರಾಭವಗೊಳಿಸಿತು. ಕಲ್ಲೇಂಗಡ ಆಟಗಾರರಾದ ಚೇತನ್ ಎರಡು, ಮಿರು ಚಿನ್ನಪ್ಪ, ಮಿಥುನ್ ಕುಮಾರ್ ತಲಾ ಒಂದು ಗೋಲು ಗಳಿಸಿದರು. ಮಳಮಂಡದ ವಿರುದ್ಧ ಬೊಳಿಯಾಡಿರ ತಂಡವು 2–0 ಗೋಲಿನಲ್ಲಿ ಗೆದ್ದಿತು. ಚೋಡುಮಾಡ ತಂಡವು ಮಾಳೆಯಂಡ ತಂಡವನ್ನು 1–0 ಅಂತರದಲ್ಲಿ ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT