ಮಂಗಳವಾರ, ಮಾರ್ಚ್ 31, 2020
19 °C

ಜನತಾ ಕರ್ಫ್ಯೂ: ಕೋಲಾರದಲ್ಲಿ ಊಟ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೊರೋನಾ ಸೋಂಕು ತಡೆಗಾಗಿ ಕರೆ ನೀಡಲಾಗಿದ್ದ ಜನತಾ ಕರ್ಫ್ಯೂದಿಂದಾಗಿ ಹೋಟೆಲ್‌ಗಳು ಬಂದ್ ಆಗಿದ್ದು, ಊಟವಿಲ್ಲದೇ ಪರದಾಡುತ್ತಿದ್ದ ಅನಾಥರು, ಅಲೆಮಾರಿಗಳಿಗೆ ‘ಮುಸ್ಸಂಜೆ ಮನೆ’ಯ ಸದಸ್ಯರು ವತಿಯಿಂದ ಊಟ ವಿತರಿಸುವ ಮೂಲಕ ಮಾನವೀಯತೆ ಮೆರೆದರು.

ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ಹಾಗೂ ಮುಸ್ಸಂಜೆ ಮನೆಯ ಮುಖ್ಯಸ್ಥೆ ಶಾಂತಕುಮಾರಿ ಸಾಮಾಜಿಕ ಕಳಕಳಿಯೊಂದಿಗೆ ನಗರಾದ್ಯಂತ ಚಿಂದಿ ಹಾಯುತ್ತಾ ಜೀವನ ಸಾಗಿಸುವ ಅನಾಥರು, ವಸತಿ ಹೀನರನ್ನು ಹುಡುಕಿ ಊಟದ ಪೊಟ್ಟಣಗಳನ್ನು ವಿತರಿಸಿದರು.

ಅಂಗಡಿಮುಗಟ್ಟುಗಳು, ಹೋಟೆಲ್‌ಗಳು ಬಂದ್ ಆಗಿರುವುದರಿಂದ ಚಿಂದಿ ಹಾದು ರಸ್ತೆ ಬದಿಯೇ ಮಲಗಿ ಜೀವನ ನಡೆಸುವ ಅನೇಕರು ಇಂದು ಊಟಕ್ಕೆ ಪರದಾಡುವ ಸ್ಥಿತಿ ಎದುರಾಗಿತ್ತು. ಇದನ್ನು ಮನಗಂಡ ಕೆ.ಆರ್.ಧನರಾಜ್ ಹಾಗೂ ಶಾಂತಕುಮಾರಿ ಅವರು ಸ್ವತಃ ಅಡುಗೆ ಮಾಡಿ ಊಟದ ಪೊಟ್ಟಣಗಳನ್ನು  ಸಿದವರಿಗೆ ವಿತರಿಸಿ ಮಾನವೀಯತೆ ಮೆರೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)