ಜಯಪುರ: ಹೋಬಳಿಯ ದೊಡ್ಡಹುಂಡಿ ಗ್ರಾಮದ ಮುರುಡ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ‘ಹಿಟ್ಟಿನ ಪರ’ ನಡೆಯಿತು.

ಯುಗಾದಿ ಹಬ್ಬದ ಬಳಿಕ ಪ್ರತಿ ವರ್ಷವೂ ಗ್ರಾಮಸ್ಥರು ಉತ್ತಮ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿ, ಹಿಟ್ಟಿನ ಪರ ಮಾಡುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೆರೆದಿದ್ದ ಭಕ್ತರಿಗೆ ರಾಗಿ ಹಿಟ್ಟು, ಹಲಸಿನಕಾಯಿ ಅವರೆಕಾಳು ಪಲ್ಯ, ಬೂಂದಿ ಪಾಯಸ ಊಟ ಬಡಿಸಲಾಯಿತು.

ಕೆರೆಹುಂಡಿ, ಡಿ.ಸಾಲುಂಡಿ ಮತ್ತು ದೊಡ್ಡಹುಂಡಿ ಗ್ರಾಮದ ಹರಕೆ ಹೊತ್ತ ಭಕ್ತರು ಸೇರಿ ಹಿಟ್ಟಿನ ಪರವನ್ನು ಮಾಡಿದರು. ಈ ಬಾರಿ 10 ಕ್ವಿಂಟಾಲ್ ರಾಗಿ ಹಿಟ್ಟು, 4 ಕ್ವಿಂಟಲ್ ಅವರೆಕಾಳು, 3 ಕ್ವಿಂಟಾಲ್ ಹಲಸಿನಕಾಯಿ ಬಳಸಿ ಅಡುಗೆ ತಯಾರಿಸಲಾಗಿದೆ ಎಂದು ಗ್ರಾಮದ ಮುಖಂಡರಾದ ಬಸವೇಗೌಡ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-38-1452088747

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.