ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ, ಪತ್ರಕರ್ತ 'ಕಾಮರೂಪಿ' ನಿಧನ; ಆಸ್ಪತ್ರೆಗೆ ದೇಹ ದಾನ

Last Updated 29 ಡಿಸೆಂಬರ್ 2022, 8:47 IST
ಅಕ್ಷರ ಗಾತ್ರ

ಕೋಲಾರ: ಕಾಮರೂಪಿ ಎಂದೇ ಪ್ರಸಿದ್ಧರಾಗಿದ್ದ ಸಾಹಿತಿ, ಪತ್ರಕರ್ತ ಎಂ.ಎಸ್. ಪ್ರಭಾಕರ (87) ವಯೋಸಹಜ ಕಾರಣ ಗುರುವಾರ ಸ್ವಗೃಹದಲ್ಲಿ ನಿಧನರಾದರು.

ಕೋಲಾರದ ಕಠಾರಿಪಾಳ್ಯ ನಿವಾಸಿ ಆಗಿದ್ದ ಇವರು ಅವಿವಾಹಿತರಾಗಿದ್ದರು. ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶಿಕ್ಷಕರಾಗಿದ್ದ ತಂದೆ .ಎಸ್. ಸೂರಪ್ಪ ಹಾಗೂ ತಾಯಿ ಸುಬ್ಬಮ್ಮ ಅವರ 11 ಮಕ್ಕಳಲ್ಲಿ ಇವರು ಕೊನೆಯವರು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ್ದ ಅವರು ಬಳಿಕ ಗುವಾಹಟಿಯಲ್ಲಿ ಹಿಂದೂ ಪತ್ರಿಕೆ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ನೆಲ್ಸನ್ ಮಂಡೇಲಾ ಅವರನ್ನು ಸಂದರ್ಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT