ಕಡರನಾಯ್ಕನಹಳ್ಳಿ: ಗ್ರಾಮದಲ್ಲಿ ಆಂಜನೇಯ ಸ್ವಾಮಿ ನೂತನ ರಥೋತ್ಸವ ಹಾಗೂ ಧರ್ಮ ಸಭಾ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಏಪ್ರಿಲ್ 3ವರೆಗೆ ನಡೆಯಲಿವೆ.

ಮಂಗಳವಾರ ಸಂಜೆ ಗಂಗಾ ಪೂಜೆ, ಗಣಪತಿ ಪೂಜೆ, ಪಂಚ ಕಲಶ, ನವಗ್ರಹ, ಮೃತ್ಯುಂಜಯ ಕಲಶ ಪೂಜೆಯೊಂದಿಗೆ ಆಂಜನೇಯ ಸ್ವಾಮಿ ಕಂಕಣಧಾರಣೆ ನಡೆಯಿತು.

ಏ. 1ರಂದು ಗಣಪತಿ ಹೋಮ, ವರ್ಣಹೋಮ, ವಾಸ್ತು ಹೋಮ, ಅಘೋರ ಹೋಮ, ರುದ್ರಹೋಮದ ನಂತರ ರಥಕ್ಕೆ ಕಳಸ ಸ್ಥಾಪನೆ ನಡೆಯಲಿದೆ. ಬಳಿಕ ಉಚ್ಚಾಯ ರಥೋತ್ಸವ ನಂತರ 11.30ಕ್ಕೆ ಧಾರ್ಮಿಕ ಮಹಾಸಭೆ ನಡೆಯಲಿದೆ.

ನಂದಿಗುಡಿ ವೃಷಭ ಪುರಿ ಮಹಾಸಂಸ್ಥಾನದ ಸಿದ್ದರಾಮೇಶ್ವರ ಸ್ವಾಮೀಜಿ, ದಿಂಡದಳ್ಳಿ ಮಠದ ಪಶುಪತಿ ಶಿವಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಹರಪೀಠದ ವಚನಾನಂದ ಸ್ವಾಮೀಜಿ, ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ, ಗುರುಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಗುರುವಾರ (ಏ. 2ರಂದು) ಬ್ರಾಹ್ಮಿ ಮುಹೂರ್ತದಲ್ಲಿ ಬ್ರಹ್ಮ ರಥೋತ್ಸವ, ಬೆಳಿಗ್ಗೆ 7.45ರಿಂದ 8.45ವರೆಗೆ ಆಂಜನೇಯ ಸ್ವಾಮಿ ನೂತನ ರಥೋತ್ಸವ, ಸಂಜೆ ಭೂತನ ಸೇವೆ ನಡೆಯಲಿದೆ. ಶುಕ್ರವಾರ ಓಕಳಿಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-43-1590826867

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.