ದಾವಣಗೆರೆ/ಮೈಸೂರು/ಹೊಸಪೇಟೆ: ರಾಜ್ಯದಲ್ಲಿ ಮೈಸೂರು, ಮಧ್ಯ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಅಸಾಂಡಹಳ್ಳಿಯಲ್ಲಿ ಮನೆ ಚಾವಣಿ ಕುಸಿದು ನಾರಾಯಣಪ್ಪ (60) ಅವರು ಮೃತಪಟ್ಟರು. ಮೈಸೂರು ಜಿಲ್ಲೆಯಲ್ಲಿ ಮನೆಯೊಂದುಕುಸಿದಿದೆ.

ಉಳಿದಂತೆ ದಾವಣಗೆರೆ, ತುಮಕೂರು, ಕೋಲಾರ, ಬಳ್ಳಾರಿ ಜಿಲ್ಲೆಯ ವಿವಿಧೆಡೆಯು ಗುರುವಾರ ರಾತ್ರಿ ಹಾಗೂ ಶುಕ್ರವಾರ ಉತ್ತಮ ಮಳೆಯಾಗಿದೆ.

ದಾವಣಗೆರೆ ವರದಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಿರುಗಾಳಿ, ಗುಡುಗು, ಸಿಡಿಲು ಸಮೇತ ಭಾರಿ ಮಳೆ ಸುರಿಯಿತು. ಬೆಳಗಿನ ಜಾವ 5.30ಕ್ಕೆ ಆರಂಭವಾದ ಮಳೆಯು ಬೆಳಿಗ್ಗೆ 8ರವರೆಗೂ ಸುರಿಯಿತು.

ವರುಣನ ಆರ್ಭಟಕ್ಕೆ ಹಲವು ವಸತಿ ಪ್ರದೇಶಗಳು ಜಲಾವೃತವಾದವು. ವಾಹನ ಸವಾರರು ಪರದಾಡಿದರು. ಒಂದು ವಾರದಿಂದ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಜೀವ ತುಂಬಿದ್ದರೆ, ಹಲವೆಡೆ ತೋಟಗಾರಿಕೆ ಬೆಳೆಗಳ ಹಾನಿಗೂ ಕಾರಣವಾಗಿದೆ.

ದಾವಣಗೆರೆ ತಾಲ್ಲೂಕಿನ ಮಾಗಾನಹಳ್ಳಿ, ಕಡ್ಲೇಬಾಳು, ಕೊಳೇನಹಳ್ಳಿ, ಅರಸಾಪುರ, ಕುಕ್ಕುವಾಡ, ಓಬಜ್ಜಿಹಳ್ಳಿ ಸೇರಿ ಹಲವುಗ್ರಾಮಗಳಲ್ಲಿ ಮಳೆಯಿಂದ ಭತ್ತದ ಬೆಳೆಯು ಚಾಪೆ ಹಾಸಿದೆ. ಭತ್ತ, ಪಪ್ಪಾಯ, ಬಾಳೆ, ಈರುಳ್ಳಿ ಬೆಳೆಗಳು ಹಾಳಾಗಿವೆ.

ದಾವಣಗೆರೆಯಲ್ಲಿ 3.43 ಸೆಂ.ಮೀ., ಜಗಳೂರಿನಲ್ಲಿ 3.87 ಸೆಂ.ಮೀ., ಹರಿಹರದಲ್ಲಿ 2.66 ಸೆಂ.ಮೀ ಮಳೆ ಸುರಿದಿದೆ. ಜಿಲ್ಲೆಯಲ್ಲಿ 2.33 ಸೆಂ.ಮೀ. ಸರಾಸರಿ ಮಳೆಯಾಗಿದೆ. 11 ಮನೆಗಳಿಗೆ ಹಾನಿಯಾಗಿದೆ.

ಚಿತ್ರದುರ್ಗ ವರದಿ: ಚಿತ್ರದುರ್ಗ ನಗರ ಹಿರಿಯೂರು, ಮೊಳಕಾಲ್ಮುರು, ಚಳ್ಳಕೆರೆ, ನಾಯಕನಹಟ್ಟಿಯ ವಿವಿಧೆಡೆ ಉತ್ತಮ ಮಳೆಯಾಗಿದೆ. ತೋಟಗಾರಿಕಾ ಬೆಳೆಗಳಿಗೆ ಜೀವಕಳೆ ಬಂದಿದ್ದು, ಕೆಲವೆಡೆ ಪಪ್ಪಾಯ, ಬಾಳೆ, ಅಡಿಕೆ ತೋಟಗಳಿಗೆ ಹಾನಿಯಾಗಿದ್ದು, ಕೆಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.

ತುಮಕೂರು ವರದಿ: ಕೊರಟಗೆರೆ ತಾಲ್ಲೂಕಿನ ಹೂಳವನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಉರುಳಿವೆ. ಅಡಿಕೆ, ತೆಂಗು, ಬಾಳೆ ಬೆಳೆಗೆ ಹಾನಿಯಾಗಿದೆ. ಶಿರಾ ತಾಲ್ಲೂಕಿನ ಕರೆಮಾದೇನಹಳ್ಳಿಯಲ್ಲಿ ಸಿಡಿಲು ಬಡಿದು ಐದು ಮೇಕೆಗಳು ಮೃತಪಟ್ಟಿವೆ.

ಕೋಲಾರ ವರದಿ: ಮಾಲೂರು ತಾಲ್ಲೂಕಿನ ಅಸಾಂಡಹಳ್ಳಿಯಲ್ಲಿ ಮನೆ ಮೇಲೆ ಮರ ಬಿದ್ದು, ಚಾವಣಿ ಕುಸಿದು ನಾರಾಯಣಪ್ಪ (60) ಮೃತರಾಗಿದ್ದಾರೆ. ಮುಳಬಾಗಿಲು ತಾಲ್ಲೂಕಿನ ಕೀಲಾಗಾಣಿ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಬಾಳೆ ತೋಟ ಸಂಪೂರ್ಣ ನಾಶವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲ್ಲೂಕಿನ ಚಿನ್ನಗಾನಪಲ್ಲಿಯಲ್ಲಿ ತಡರಾತ್ರಿ ಸುರಿದ ಬಿರುಗಾಳಿ ಮಳೆಗೆ ಹಲವಡೆ ಮರ, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಇಡೀ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-519843710

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.