ಮುಳಬಾಗಿಲು: ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದ ಕನ್ನಡ ರಾಜ್ಯೋತ್ಸವ ‘ಮೂಡಲ ಬಾಗಿಲು ಕನ್ನಡ ಸಂಭ್ರಮ’ಕ್ಕೆ ಶನಿವಾರ ಮಳೆರಾಯ ಅಡ್ಡಿಪಡಿಸಿದ. ಆದರೂ, ಕೆಲ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ವೇದಿಕೆ ಹಾಗೂ ಮೆರವಣಿಗೆ ಕಾರ್ಯಕ್ರಮಗಳನ್ನು ಮಳೆಯ ನಡುವೆಯೇ ಅಚ್ಚುಕಟ್ಟಾಗಿ ನಡೆಸಲಾಯಿತು.

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿಸಿ, ನವೆಂಬರ್ 17ರಂದು ಅದ್ದೂರಿಯಾಗಿ ಆಚರಿಸಲು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕನ್ನಡ ಪರ ಸಂಘಟನೆಗಳ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕಾರಣಾಂತರಗಳಿಂದ ನವೆಂಬರ್ 30, ಶನಿವಾರ ‘ಮೂಡಲ ಬಾಗಿಲು ಕನ್ನಡ ಸಂಭ್ರಮ’ ಕಾರ್ಯಕ್ರಮವನ್ನು ರೂಪಿಸಲಾಯಿತು. ಆದರೆ ಏಕಾಏಕಿ ಜಡಿಮಳೆ ಹಿಡಿದಿದ್ದರಿಂದ ಕೆಲ ಕಾರ್ಯಕ್ರಮಗಳನ್ನು ಕೈಬಿಡಬೇಕಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ವ್ಯತ್ಯಾಸವೇನೂ ಮಾಡಲಿಲ್ಲ. ಮಳೆಯ ನಡುವೆಯೇ ನಾನಾ ಕನ್ನಡಪರ ಸಂಘಟನೆಗಳು ಹಾಗೂ ಪಕ್ಷಾತೀತವಾಗಿ ಮುಖಂಡರು ಭಾಗವಹಿಸಿದ್ದರು. ನಗರದ ಬಹುತೇಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡಾಂಬೆಯ ಬಾವುಟ ಹಿಡಿದು ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಶಾರದಾಂಬೆಯ ಭಾವಚಿತ್ರವನ್ನು ಕುದುರೆ ಸಾರೋಟಿನ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ನಡೆಸಲಾಯಿತು. ಪಲ್ಲಕ್ಕಿಯ ಮುಂದೆ ನೃತ್ಯಗಾರರು ಸಂಗೀತ ವಾದ್ಯಗಳೊಂದಿಗೆ ಹೆಜ್ಜೆ ಹಾಕಿದರು.

ತಮಟೆ ವಾದ್ಯಗಳ ಸಂಗೀತಕ್ಕೆ ಶಾಸಕ ಸಮೃದ್ಧಿ ಮಂಜುನಾಥ್ ಹಾಗೂ ಸಂಸದ ಮಲ್ಲೇಶ್ ಬಾಬು ನೃತ್ಯ ಮಾಡಿದರು. ಜೊತೆಗೆ ಮುಖಂಡರು ಹಾಗೂ ವಿದ್ಯಾರ್ಥಿಗಳು ಸಾಮೂಹಿಕವಾಗಿ ನೃತ್ಯ ಮಾಡಿ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು. ಶಾಲಾ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಪೂರ್ಣ ಕುಂಭ ಕಳಶಗಳನ್ನು ಹಿಡಿದು ಸ್ವಾಗತ ಕೋರಿದರು. ಕೆಲವು ವಿದ್ಯಾರ್ಥಿನಿಯರು ಶಾರದಾಂಬೆಯ ವೇಷ ಧರಿಸಿ ಕೈಯಲ್ಲಿ ಕನ್ನಡ ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಮೃದ್ಧಿ ಮಂಜುನಾಥ್, ಮಳೆಯಿಂದಾಗಿ ಈ ಕಾರ್ಯಕ್ರಮ ನಾವು ಅಂದುಕೊಂಡಂತೆ ನಡೆಯಲಿಲ್ಲ. ಮುಂದಿನ ದಿನಗಳಲ್ಲಿ ಇದೇ ಕಾರ್ಯಕ್ರಮವನ್ನು ‘ಅಪ್ಪು ಮಹೋತ್ಸವ’ ಎನ್ನುವ ಹೆಸರಿನಲ್ಲಿ ಆಚರಿಸಲಾಗುವುದು ಎಂದರು.

ಸಂಸದ ಮಲ್ಲೇಶ್ ಬಾಬು ಮಾತನಾಡಿ, ನೆರೆಯ ಆಂಧ್ರಪ್ರದೇಶದ ಗಡಿಯಲ್ಲಿರುವ ಮುಳಬಾಗಿಲಿನಲ್ಲಿ ಕನ್ನಡದ ಬಾವುಟಗಳನ್ನು ನೋಡುವುದೇ ಖುಷಿ ಎಂದರು.

ತಹಶೀಲ್ದಾರ್ ವಿ.ಗೀತಾ ಮಾತನಾಡಿ, ಏಕೀಕರಣಕ್ಕೂ ಮೊದಲು ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಹಾಗೂ ನುಡಿಯನ್ನು ಅನೇಕ ಮಹಾನುಭಾವರ ಶ್ರಮದ ಫಲವಾಗಿ ಒಗ್ಗೂಡಿಸಿ ಕರ್ನಾಟಕವನ್ನಾಗಿ ಮಾಡಲಾಯಿತು. ಹೀಗಾಗಿ ಈ ನಾಡು ಹಾಗೂ ನುಡಿಯನ್ನು ಎಲ್ಲರೂ ಪ್ರೀತಿಸಿ, ಪೋಷಿಸಿ ಬೆಳೆಸಿ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಜಿ ಸಚಿವ ಎಚ್.ನಾಗೇಶ್, ಕಾಡೇನಹಳ್ಳಿ ಕೆ.ಎನ್.ನಾಗರಾಜ್, ರಘುಪತಿ ರೆಡ್ಡಿ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಸರ್ವೇಶ್, ಬಿಇಒ ಗಂಗರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಡಾ.ಮುನಿವೆಂಕಟಪ್ಪ, ಡಾ.ಪ್ರಕಾಶ್, ಅಮಾನುಲ್ಲಾ, ಎಂ.ಗೊಲ್ಲಹಳ್ಳಿ ಪ್ರಭಾಕರ್, ಎನ್.ಆರ್.ಸತ್ಯಣ್ಣ, ಜಬೀ ಉಲ್ಲಾ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಜಗದೀಶ್, ಶಂಕರ್ ಕೇಸರಿ, ಹರೀಶ್ ಗೌಡ, ಪ್ರಕಾಶ್, ಶಕ್ತಿ ಪ್ರಸಾದ್, ಪೆತ್ತಾಂಡ್ಲಹಳ್ಳಿ ಶಂಕರಪ್ಪ, ಅಶೋಕ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.