ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತ ವೈಭವ ಮರುಕಳಿಸಿದ ಗರುಡೋತ್ಸವ

Last Updated 8 ಮಾರ್ಚ್ 2018, 9:21 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ರಾಜಬೀದಿಗಳಲ್ಲಿ ಬುಧವಾರ ಗರುಡೋತ್ಸವ (ಕಲ್ಯಾಣೋತ್ಸವ) ವಿಜೃಂಭಣೆಯಿಂದ ಜರುಗಿತು.

ಕನಕಾಚಲಪತಿ ರಥೋತ್ಸವದ ನಿಮಿತ್ತ ಗರುಡೋತ್ಸವ ಜರುಗುತ್ತದೆ. ಉತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ದೇವಸ್ಥಾನದ ಪ್ರಾಂಗಣ, ಮನೆ, ಮಾಳಿಗೆ, ರಸ್ತೆಯಲ್ಲಿ ನಿಂತು ಜನರು ಗರಡೋತ್ಸವದ ಮೆರವಣಿಗೆ ವೀಕ್ಷಿಸಿದರು. ದೀವಟಗಿ ಬೆಳಕಿನಲ್ಲಿ ಕಂಗೊಳಿಸಿದ ಉಚ್ಚಾಯಿ ಗತ ಕಾಲದ ವೈಭವವನ್ನು ನೆನಪಿಸಿತು.

ಕನಕಾಚಲಪತಿ ಮತ್ತು ಲಕ್ಷ್ಮೀ ಕಲ್ಯಾಣೋತ್ಸವ ನಸುಕಿನ ಜಾವ ನಡೆಯಿತು. ಭಕ್ತರು ಬೃಹತ್‌ ಹೂವಿನ ಹಾರ ಹಾಕಿ ಭಕ್ತಿ ಸಮರ್ಪಿಸಿದರು.

ಭಕ್ತರು ಹೊಸ ಬಟ್ಟೆ ಧರಿಸಿ ಬರಿಗಾಲಿನಲ್ಲಿ ಉತ್ಸಾಹದಿಂದ ರಾಜಬೀದಿಯಲ್ಲಿ ನಡೆದು ಪ್ರಜ್ವಲ ಮನಸ್ಸಿನಿಂದ ಕರ್ಪೂರ, ಕೊಬ್ಬರಿ ದಹಿಸಿ ಭಕ್ತಿ ಮೆರೆದರು.

ಸೂರ್ಯೋದಯಕ್ಕಿಂತ ಮುಂಚೆ ಹಳದಿ ಬಣ್ಣದ ಗರುಡ ವಾಹನದ ಮೇಲೆ ಲಕ್ಷ್ಮೀ, ನರಸಿಂಹ ದೇವರ ಮೂರ್ತಿಯನ್ನು ಮೆರವಣಿಗೆ ಮಾಡಿದಾಗ ಭಕ್ತರು ಗೋವಿಂದ, ಗೋವಿಂದ ಎಂದು ಸ್ಮರಣೆ ಮಾಡಿದರು.

ಗರುಡ ವಾಹನ ದೇವಸ್ಥಾನದಿಂದ ಎದುರು ಹನುಮಪ್ಪ ದೇಗುಲದವರೆಗೆ ಹೋಗಿ ವಾಪಸ್‌ ಬಂದಾಗ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ವೇದ ಮಂತ್ರಗಳ ಘೋಷಣೆ, ತಾಷ, ಭಕ್ತರ ಘೋಷಣೆಗಳು ಮೆರವಣಿಗೆಗೆ ಕಳೆ ತಂದವು.

ಶಾಸಕ ಶಿವರಾಜ ತಂಗಡಗಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಧಡೇಸೂಗರು, ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ, ಹುಬ್ಬಳ್ಳಿ ರೈಲ್ವೆ ಅಧಿಕಾರಿ (ಐಆರ್‌ಎಸ್‌) ವಿಷ್ಣುಗೌಡ ಪಾಟೀಲ, ಅಬಕಾರಿ ಅಧೀಕ್ಷಕಿ ಲಕ್ಷ್ಮೀ ಮಾರುತಿ, ಜಿ.ಪಂ ಸದಸ್ಯ ಅಮರೇಶ ಗೋನಾಳ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಶೈಲಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT