ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ

7

ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ

Published:
Updated:
Deccan Herald

ಕೆಜಿಎಫ್‌: ಕರುಣಾನಿಧಿ ಕರ್ನಾಟಕದಲ್ಲಿಯೂ ತಮ್ಮ ಪಕ್ಷ ಬೆಳೆಸಬೇಕು ಎನ್ನುವ ಹಂಬಲ ಹೊಂದಿದ್ದರು. ಆ ಆಸೆಯಿಂದಲೇ ಇಲ್ಲಿಗೆ ಮೂರು ಬಾರಿ  ಭೇಟಿ ನೀಡಿ ಡಿಎಂಕೆ ಸಂಘಟನೆಗೆ ಒತ್ತು ನೀಡಿದ್ದರು. ಎಂ.ಜಿ.ರಾಮಚಂದ್ರನ್ ಹಾಗೂ ಕರುಣಾನಿಧಿ ಅವರ ಅಪಾರ ಬೆಂಬಲಿಗರು ಇಂದಿಗೂ ನಗರದಲ್ಲಿ ಇದ್ದಾರೆ.

ಡಿಎಂಕೆ ಸ್ಥಳೀಯ ನಾಯಕರ ಕೋರಿಕೆಯ ಮೇರೆಗೆ 1954 ಜುಲೈ 6ರಂದು ನಗರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದರು. 1972ರ ಅ.4ರಂದು ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹೆನ್ರೀಸ್‌ನಲ್ಲಿರುವ ಚಿನ್ನದ ಗಣಿಗೆ ಇಳಿದಿದ್ದರು. ಗಣಿ ಕಾರ್ಮಿಕರೊಬ್ಬರ ಟೋಪಿ ಹಾಕಿಕೊಂಡು ಫೋಟೊ ತೆಗೆಸಿಕೊಂಡಿದ್ದರು. ರಾಬರ್ಟಸನ್‌ಪೇಟೆಯ ಕೃಷ್ಣ ಭವನ್‌ ವಸತಿ ಗೃಹದಲ್ಲಿ ತಂಗಿದ್ದರು ಎಂದು ತಮಿಳು ಸಂಘದ ಹಿರಿಯ ಕಲೈರಸನ್‌ ನೆನಪು ಮಾಡಿಕೊಳ್ಳುವರು.

1984ರಲ್ಲಿ ರಾಬರ್ಟಸನ್‌ಪೇಟೆಯಲ್ಲಿ ನಡೆದ ಡಿಎಂಕೆ ಸಮಾವೇಶಕ್ಕೆ ಬಂದ ಅವರನ್ನು ಬೇತಮಂಗಲದಿಂದ ಅಭಿಮಾನಿಗಳು ಬೈಕ್‌ ರ‍್ಯಾಲಿ ಮೂಲಕ ಕರೆ ತಂದಿದ್ದರು.

‘ನಿಮ್ಮನ್ನು ನೀವು ಈ ಮಣ್ಣಿಗೆ ತಕ್ಕಂತೆ ಬದಲಾಯಿಸಿಕೊಳ್ಳಿ. ಮಾತೃ ಭಾಷೆ ತಮಿಳು ಆಗಿದ್ದರೂ ಅದು ನಿಮ್ಮ ಮನದಲ್ಲಿ ಇರಲಿ ಎಂದಿದ್ದರು’ ಎಂದು ನಿವೃತ್ತ ಕಾರ್ಮಿಕ ಮುನಿರತ್ನಂ ತಿಳಿಸಿದರು.

***

ಇದನ್ನೂ ಓದಿರಿ
ಕರುಣಾನಿಧಿ ಬದುಕಿನ ಹಾದಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !