ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾಗೆ ಇಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಎರಡು ವಾರ್ಡ್‌ ಮೀಸಲು
Last Updated 13 ಮಾರ್ಚ್ 2020, 11:26 IST
ಅಕ್ಷರ ಗಾತ್ರ

ಕೆಜಿಎಫ್‌: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ ಸೋಂಕಿಗೆ ಒಳಗಾದವರನ್ನು ಪರೀಕ್ಷಿಸಲು ರಾಬರ್ಟಸನ್‌ಪೇಟೆಯ ಸಾಂಕ್ರಾಮಿಕ ರೋಗಗಳ (ಇಡಿ) ಆಸ್ಪತ್ರೆಯಲ್ಲಿ ಎರಡು ವಾರ್ಡ್‌ಗಳನ್ನು ಮೀಸಲು ಇಡಲಾಗಿದೆ.

ಸಾಂಕ್ರಾಮಿಕ ರೋಗಗಳ ಕಾಯಿಲೆಯನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷಿಸುತ್ತಿರುವುದರಿಂದ, ಇಡಿ ಆಸ್ಪತ್ರೆಗೆ ರೋಗಿಗಳು ಬರುವುದೇ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಹಿಂಭಾಗದ ಒಂದು ಸಂಕೀರ್ಣವನ್ನು ಮೀಸಲಾಗಿಟ್ಟು ಅದಕ್ಕೆ ‘ಕೋವಿಡ್‌ –19’ ಎಂದು ನಾಮಕರಣ ಮಾಡಲಾಗಿದೆ.

ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವಾರ್ಡ್‌ನಲ್ಲಿ ತಲಾ ನಾಲ್ಕು ಹಾಸಿಗೆಗಳಿವೆ. ವಾರ್ಡ್‌ನ ಆರಂಭದಲ್ಲಿ ಮತ್ತೊಂದು ಹಾಸಿಗೆಯನ್ನು ಹಾಕಲಾಗಿದೆ. ಹಾಸಿಗೆ ಬಿಟ್ಟು ಬೇರೆ ಯಾವುದೇ ಸಲಕರಣೆಗಳನ್ನು ವಾರ್ಡ್‌ನಲ್ಲಿ ಇಟ್ಟಿಲ್ಲ.

ಎರಡೂ ವಾರ್ಡ್‌ನ ರೋಗಿಗಳ ಉಪಯೋಗಕ್ಕಾಗಿ ಒಂದು ಶೌಚಾಲಯ ಇದೆ. ಒಂದು ವಾಷ್ ಬೆಸಿನ್‌ ಇದೆ. ಹಾಸಿಗೆಗೆ ಹೊಸ ಹೊದಿಕೆ ಹಾಕಲಾಗಿದ್ದು, ವಾಷ್ ಬೆಸಿನ್‌ ಕಲೆ ಕಟ್ಟಿ, ನೋಡಲು ಅಸಹ್ಯವಾಗಿದೆ. ಶೌಚಾಲಯದ ನೆಲ ಕೂಡ ಕಪ್ಪು ಕಲೆಗಳಿಂದ ಕೂಡಿದೆ. ಆಸ್ಪತ್ರೆಯ ಸಂಕೀರ್ಣದ ಸುತ್ತಲೂ ಕುರುಚಲು ಗಿಡಗಳು ಯಥೇಚ್ಚವಾಗಿ ಬೆಳೆದಿದ್ದು, ವಾತಾವರಣ ಕಲುಷಿತವಾಗಿದೆ. ವೈದ್ಯಕೀಯ ಸಿಬ್ಬಂದಿಗೆ ಮುಖಗವಸು ಮತ್ತು ಗ್ಲೌಸ್‌ ಬಿಟ್ಟು ಬೇರೆ ಸಾಧನಗಳನ್ನು ಒದಗಿಸಿಲ್ಲ.

ಕೊರೊನಾ ವೈರಸ್‌ ಶಂಕಿತರನ್ನು ಪರಿಶೀಲಿಸಲು ಪ್ರತ್ಯೇಕ ವಾರ್ಡ್‌ಗಳನ್ನು ಸಿದ್ಧಗೊಳಿಸಲಾಗಿದೆ. ದಾಖಲಾಗುವ ರೋಗಿಗಳ ರಕ್ತವನ್ನು ಪರಿಶೀಲನೆಗೆ ಕಳಿಸಲಾಗುವುದು. ನಮ್ಮಲ್ಲಿ ಫಿಸಿಷಿಯನ್‌ ಇಲ್ಲದೆ ಇರುವುದರಿಂದ ಶಂಕಿತ ಎಂದು ಕಂಡು ಬಂದರೆ ಚಿಕಿತ್ಸೆಗಾಗಿ ಬೇರೆಡೆಗೆ ಕಳಿಸಲಾಗುವುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT