ಕೆಜಿಎಫ್: ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಉದ್ಘಾಟನೆಯಾಗಿ ಏಳು ತಿಂಗಳಾದರೂ, ಕಟ್ಟಡವನ್ನು ಇದುವರೆವಿಗೂ ಸಾರಿಗೆ ಇಲಾಖೆ ವಶಕ್ಕೆ ನೀಡಿಲ್ಲ. ಇಲಾಖೆ ಅನಧಿಕೃತವಾಗಿಯೇ ಕೆಲಸ ನಿರ್ವಹಿಸುತ್ತಿದೆ.

ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸ್ವಯಂಚಾಲಿತ ಪರೀಕ್ಷಾ ಚಾಲನಾ ಪಥ ಮತ್ತು ಡಂಪ್ ಯಾರ್ಡ್ ಸೇರಿದಂತೆ ಸುಮಾರು ಐದು ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾದ ಕಟ್ಟಡ ಮೊದಲಿನಿಂದಲೂ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗುತ್ತಲೇ ಬಂದಿದೆ.

ಕಟ್ಟಡ ನಿರ್ಮಾಣಕ್ಕೆ ನಿಗದಿಪಡಿಸಿದ್ದ ಸಮಯ ಮೀರಿದರೂ ಕಟ್ಟಡ ಪೂರ್ಣಗೊಂಡಿರಲಿಲ್ಲ. ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ಹಿನ್ನೆಲೆ, ಕಟ್ಟಡ ಹಸ್ತಾಂತರ ಮಾಡಲು ಅವರು ನಿರಾಕರಿಸಿದ್ದರು. ನಂತರ ಹಿರಿಯ ಅಧಿಕಾರಿಗಳು ಅವರ ಮನವೊಲಿಸಿ, ಅನುದಾನ ಒದಗಿಸುವ ಭರವಸೆ ನೀಡಿದ ನಂತರ ಕಟ್ಟಡವನ್ನು ಪೂರ್ಣಗೊಳಿಸಲಾಯಿತು. ನಂತರ ಚಾಲನಾ ಪಥ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ದೊಡ್ಡ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

ಕೆಜಿಎಫ್, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಆರ್ಟಿಒ ಕಚೇರಿಯೊಳಗೆ ಮೂಲಭೂತ ಸೌಕರ್ಯಗಳ ಕೊರತೆ ಕೂಡ ಎದ್ದು ಕಾಣುತ್ತಿದೆ. ಬಿಜಿಎಂಎಲ್ ಹಳೇ ಕಟ್ಟಡದಲ್ಲಿ ಮೊದಲು ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ನಂತರ ಹೊಸ ಕಚೇರಿಗೆ ಸಾಗಿಸ್ಪಟ್ಟ ಹಳೇ ಕಡತಗಳು, ದಾಖಲೆಗಳನ್ನು ಜೋಡಿಸಲು ರ್ಯಾಕ್, ಕಚೇರಿ ಸಿಬ್ಬಂದಿಗೆ ಬೇಕಾದ ಟೇಬಲ್, ಕುರ್ಚಿ, ಸಾರ್ವಜನಿಕರು ಕುಳಿತುಕೊಳ್ಳಲು ಕುರ್ಚಿ ಮುಂತಾದವು ಯಾವುದೂ ಇಲ್ಲ. 1070ರ ದಶಕದಿಂದ ಕಚೇರಿಯಲ್ಲಿ ಸಂಗ್ರಹವಾಗಿರುವ ಸಾವಿರಾರು ದಾಖಲೆಗಳನ್ನು ಸುರಕ್ಷಿತವಾಗಿ ರಕ್ಷಿಸಲು ಬೇಕಾದ ಸ್ಥಳಾವಕಾಶವೇ ಕಚೇರಿಯಲ್ಲಿ ಇಲ್ಲವಾಗಿದೆ.

ಆಗಸ್ಟ್ ತಿಂಗಳಲ್ಲಿ ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದ್ದ ಕಚೇರಿಗೆ ಅಧಿಕೃತ ವಿದ್ಯುತ್ ಸಂಪರ್ಕ ಕೂಡ ಸುಮಾರು ಆರು ತಿಂಗಳ ಕಾಲ ಸಿಕ್ಕಿರಲಿಲ್ಲ. ಈಚೆಗೆ ಕಾಯಂ ಸಂಪರ್ಕ ಸಿಕ್ಕಿದೆ. ಮೂರು ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸಬೇಕಾದ ಕಚೇರಿಯಲ್ಲಿ ಅಧಿಕಾರಿಗಳನ್ನು ಬಿಟ್ಟರೆ ಕೇವಲ ಮೂವರು ಸಿಬ್ಬಂದಿ ಇದ್ದಾರೆ. ಖಾಲಿ ಹುದ್ದೆಯನ್ನು ಭರ್ತಿ ಮಾಡಿಲ್ಲ. ಕಚೇರಿಯಲ್ಲಿ ಸ್ವಾಗತ ಸಿಬ್ಬಂದಿ ಜಾಗದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಕುಳಿತಿರುತ್ತಾರೆ.

ಸ್ವಯಂಚಾಲಿತ ಚಾಲನಾ ಪಥ ಕೇವಲ ದಾಖಲೆಯಲ್ಲಿದೆ. ಇನ್ನೂ ಮ್ಯಾನುವೆಲ್ ಮುಖಾಂತರವೇ ಪರೀಕ್ಷಾರ್ಥಿಗಳ ಚಾಲನಾ ಪರೀಕ್ಷೆ ಮಾಡಲಾಗುತ್ತಿದೆ. ಅಧಿಕಾರಿಗಳು ವಶಪಡಿಸಿಕೊಂಡ ವಾಹನಗಳನ್ನು ಇಡಲು ಜಾಗವನ್ನು ಗುರುತಿಸಲಾಗಿದೆ. ಆದರೆ, ಇನ್ನೂ ನಿರ್ಮಾಣವಾಗಿಲ್ಲ.

ಕಾಮಗಾರಿ ಪಟ್ಟಿಯಲ್ಲಿದ್ದ ಚಾಲನಾ ಪಥವನ್ನು ನಿರ್ಮಾಣ ಮಾಡಲಾಗಿದೆ. ಸೆನ್ಸಾರ್ ಮತ್ತಿತರರ ಆಧುನಿಕ ಉಪಕರಣಗಳನ್ನು ಸಾರಿಗೆ ಇಲಾಖೆ ಟೆಂಡರ್ ಮೂಲಕ ಪ್ರತ್ಯೇಕವಾಗಿ ಕರೆಯಬೇಕು ಎಂದು ಕಚೇರಿ ನಿರ್ಮಾಣ ಮಾಡಿದ ಕೆಎಸ್ಆರ್ಟಿಸಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಸೋಮಶೇಖರ್ ಹೇಳುತ್ತಾರೆ.

ಕಚೇರಿಯ ಬಹುತೇಕ ಕೆಲಸಗಳು ಮುಗಿದಿದೆ. ಈ ವಾರದಲ್ಲಿ ಕಚೇರಿಯನ್ನು ಹಸ್ತಾಂತರ ಮಾಡಲಾಗುವುದು.
ಸೋಮಶೇಖರ್ ಎಕ್ಸಿಕ್ಯೂಟಿವ್ ಎಂಜಿನಿಯರ್.

ಸಚಿವರಿಗೇ ಅರಿವಿಲ್ಲ ಕಳೆದ ವಾರ ನಗರಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವೇದಿಕೆ ಭಾಷಣದಲ್ಲಿ ಸ್ವಯಂಚಾಲಿತ ಪರೀಕ್ಷಾ ಚಾಲನಾ ಪಥ ನಿರ್ಮಾಣ ಸರ್ಕಾರದ ಸಾಧನೆ ಎಂದು ಹೇಳಿದರು. ನಂತರ ಪಥ ಇನ್ನೂ ಅನುಷ್ಠಾನವೇ ಆಗಿಲ್ಲ ಎಂಬ ಸತ್ಯವನ್ನು ಅವರ ಗಮನಕ್ಕೆ ತಂದಾಗ ಅವರು ಕಸಿವಿಸಿಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.