ಕೆಜಿಎಫ್: ಬೆಮಲ್ ಕಾರ್ಖಾನೆಯಲ್ಲಿ ಹಿಂದಿಯಲ್ಲಿ ಸಂವಹನ ಮಾಡಲು ಅನುಕೂಲವಾಗುವಂತೆ ಸ್ಥಳೀಯ ಕಾರ್ಮಿಕರಿಗೆ ಹಿಂದಿ ಕಲಿಯುವಂತೆ ಉತ್ತೇಜಿಸುವ ಯತ್ನವನ್ನು ಆಡಳಿತ ಮಂಡಳಿ ಮಾಡುತ್ತಿದೆ. ಹೀಗಾಗಿ, ಕಾರ್ಖಾನೆಯಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಬೆಮಲ್ಗೆ ನಿರ್ದೇಶಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯ ಬಾ.ಹಾ. ಶೇಖರಪ್ಪ ಅವರು ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಮಾಡಿದರು.

ಡಾ. ಸರೋಜಿನಿ ಮಹಿಷಿ ವರದಿ ಅನ್ವಯ ಸಿ ಮತ್ತು ಡಿ ಹುದ್ದೆಗಳಿಗೆ ಸ್ಥಳೀಯರನ್ನೇ ಆಯ್ಕೆ ಮಾಡಬೇಕು. ಆದರೆ, ಇತ್ತೀಚಿಗೆ ಬೆಮೆಲ್ ಆಡಳಿತ ಮಂಡಳಿಯು ಈ ನಿಯಮ ಉಲ್ಲಂಘಿಸಿ, ಉತ್ತರ ಭಾರತದವರನ್ನು ಆಯ್ಕೆ ಮಾಡಲಾಗುತ್ತಿದೆ. ಹೀಗೆ, ನೇಮಕವಾದವರಿಗೆ ಹಿಂದಿ ಹೊರತುಪಡಿಸಿ, ಅನ್ಯ ಭಾಷೆ ಗೊತ್ತಿಲ್ಲ. ಅವರಿಗೆ ಅನುಕೂಲ ಮಾಡಿಕೊಡುವ ಯತ್ನ ಆಡಳಿತ ಮಂಡಳಿಯಿಂದ ನಡೆಯುತ್ತಿದೆ ಎಂದು ಶೇಖರಪ್ಪ ದೂರಿದರು.

ಇತ್ತೀಚೆಗೆ ಬೆಮಲ್ ಕೆಜಿಎಫ್ ಮಾನವ ಸಂಪನ್ಮೂಲ ಇಲಾಖೆ ಮುಖ್ಯಸ್ಥರು ಕರ್ನಾಟಕದ ಭಾಷಾ ನೀತಿಯಂತೆ ಕನ್ನಡ ಉಳಿಸಿ, ಬೆಳೆಸುವ ಕೆಲಸ ಬಿಟ್ಟು ಹಿಂದಿ ಕಲಿಯಲು ಉತ್ತೇಜಿಸುತ್ತಿದ್ದಾರೆ. ಹಿಂದಿ ಭಾಷೆ ಬಗ್ಗೆ ಕಾರ್ಮಿಕರು ತಿಳಿದುಕೊಂಡಿರುವ ಬಗ್ಗೆ ಮಾಹಿತಿ ನೀಡುವಂತೆ ಕಾರ್ಮಿಕರಿಗೆ ಪತ್ರ ನೀಡಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿ ಹಿಂದಿ ಹೇರಿಕೆಯನ್ನು ತಡೆಗಟ್ಟಿ ಕನ್ನಡೇತರರು ಕನ್ನಡ ಕಲಿಯುವ ಪ್ರಯತ್ನ ಮಾಡಬೇಕು ಎಂದು ಶೇಖರಪ್ಪ ಒತ್ತಾಯಿಸಿದ್ದಾರೆ.

ಬೆಮಲ್ನಲ್ಲಿ ನೇಮಕವಾಗಿರುವ ಹಿಂದಿ ಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡಬೇಕು. ಅವರು ಇಲ್ಲಿನ ಸ್ಥಳೀಯರೊಂದಿಗೆ ವ್ಯವಹರಿಸಲು ಕನ್ನಡಭಾಷೆ ಗೊತ್ತಿರಬೇಕು. ಈ ನಿಟ್ಟಿನಲ್ಲಿ ಬೆಮಲ್ ಸಂಸ್ಥೆ ಪ್ರಯತ್ನ ಮಾಡಬೇಕು ಎಂದು ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನರೆಡ್ಡಿ ಆಗ್ರಹಿಸಿದರು.

ರಾಜ್ಯಭಾಷಾ ನೀತಿಯಂತೆ ವಾರಕ್ಕೆ ಎರಡು ದಿನ ಹಿಂದಿ ತರಬೇತಿಗೆ ಹೋಗಲು ಕಾರ್ಮಿಕರು ಸ್ವತಂತ್ರರಿದ್ದಾರೆ. ಯಾವುದೂ ಕಡ್ಡಾಯ ಮಾಡಿಲ್ಲ ಎಂದು ಬೆಮಲ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಿ ತಿಳಿಸಿದ್ದಾರೆ.

ಬೆಮಲ್ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಯಾಗಿರುವುದರಿಂದ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿದೆ. ಕನ್ನಡಕ್ಕೆ ಎಲ್ಲ ರೀತಿ ಆದ್ಯತೆ ನೀಡಲಾಗುತ್ತಿದೆ. ರಾಜ್ಯೋತ್ಸವ ಸೇರಿದಂತೆ ಎಲ್ಲ ಕನ್ನಡ ಕಾರ್ಯಕ್ರಮಗಳನ್ನು ಕಂಪನಿ ಸಹಕಾರದೊಂದಿಗೆ ಅಯೋಜಿಸಲಾಗುತ್ತಿದೆ. ಹಿಂದಿ ಕಡ್ಡಾಯ ಮಾಡಿಲ್ಲ. ಕಾರ್ಮಿಕರು ಸ್ವಯಂ ಪ್ರೇರಿತರಾಗಿ ಕಲಿಯಲು ಉತ್ತೇಜನ ನೀಡಲಾಗುತ್ತಿದೆ ಎಂದು ಬೆಮಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-18-1689864515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.