ಕೆಜಿಎಫ್: ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಜಿಎಂಎಲ್ ಆಡಳಿತ ಕಚೇರಿ ಸುವರ್ಣ ಭವನದಲ್ಲಿ ತ್ರಿಭಾಷಾ ಸೂತ್ರ ಅನುಷ್ಠಾನವಾಗಿದ್ದು, ಎಲ್ಲಾ ವ್ಯವಹಾರದಲ್ಲಿಯೂ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ನಗರದ ಊರಿಗಾಂನಲ್ಲಿರುವ ಸುವರ್ಣಭವನ ಪ್ರವೇಶ ದ್ವಾರದ ಬಳಿ ಇರುವ ಅಧಿಕೃತ ನಾಮಫಲಕದಲ್ಲಿಯೇ ಕನ್ನಡ ಇಲ್ಲ. ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಕಂಪನಿಯ ಹೆಸರು ಬರೆಸಲಾಗಿದೆ. ಪ್ರವೇಶ ದ್ವಾರದ ಬಳಿ ಇರುವ ಎಲ್ಲಾ ಸೂಚನೆಗಳು ಕೂಡ ಇಂಗ್ಲಿಷ್ನಲ್ಲಿವೆ. ಕಚೇರಿಯ ಒಳ ಭಾಗದ ಎಲ್ಲಾ ವಿಭಾಗದಲ್ಲಿ ಕೂಡ ಕನ್ನಡಕ್ಕೆ ಕೋಕ್ ಕೊಡಲಾಗಿದೆ.

ಬಿಜಿಎಂಎಲ್ ಆಗಾಗ್ಗೆ ಹೊರಡಿಸುವ ಕರಪತ್ರಗಳಲ್ಲಿ ಕೂಡ ಕನ್ನಡಕ್ಕೆ ಸ್ಥಾನಮಾನವಿಲ್ಲ. ಬಹುತೇಕ ಕಾರ್ಮಿಕರು ತಮಿಳು ಭಾಷಿಕರಾಗಿದ್ದರಿಂದ ತಮಿಳು ಮತ್ತು ಇಂಗ್ಲಿಷ್ನಲ್ಲಿ ಕರಪತ್ರಗಳನ್ನು ಹೊರಡಿಸಲಾಗುತ್ತಿದೆ. ಇಲ್ಲಿಯೂ ಕೂಡ ಕನ್ನಡ ಅನುಷ್ಠಾನ ಮಾಡಬೇಕೆನ್ನುವ ಇರಾದೆ ಅಧಿಕಾರಿಗಳಿಗೆ ಇಲ್ಲ. ಬಿಜಿಎಂಎಲ್ ಉಸ್ತುವಾರಿ ಅಧಿಕಾರಿ ಕೇರಳ ಮೂಲದವರು. ಮುಖ್ಯ ಭದ್ರತಾ ಅಧಿಕಾರಿ ಉತ್ತರ ಭಾರತದವರು. ಅವರಿಗೆ ಕನ್ನಡ ಭಾಷೆಯ ಪರಿಚಯ ಇಲ್ಲ. ಆದ್ದರಿಂದ ಬಹುತೇಕ ವ್ಯವಹಾರ ಇಂಗ್ಲಿಷ್ ಇಲ್ಲವೇ ಹಿಂದಿಯಲ್ಲಿ ಆಗುತ್ತಿದೆ.

ಕನ್ನಡದಲ್ಲಿ ನಾಮಫಲಕ ಬರೆಸಬಾರದು ಎಂಬ ಧೋರಣೆ ಇಲ್ಲ. ಬರೆಯುವವರು ಇರಲಿಲ್ಲ. ಮುಂದೆ ಬರೆಸಲಾಗುವುದು ಎಂದು ಉಸ್ತುವಾರಿ ಅಧಿಕಾರಿ ಜೋ ಜೋಸೆಫ್ ಹೇಳುತ್ತಾರೆ.

ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಅನುಷ್ಠಾನವಾಗಬೇಕು. ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಜಿಎಂಎಲ್ ಕನ್ನಡವನ್ನು ಕಡೆಗಣಿಸುತ್ತಿದೆ. ನೆಲದ ಭಾಷೆಗೆ ಮನ್ನಣೆಕೊಡಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಸಂಬಂಧ ದೂರು ನೀಡಲಾಗುವುದು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಬಾ.ಹಾ.ಶೇಖರಪ್ಪ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-18-2137612709

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.