ಕೆಜಿಎಫ್: ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ಮಹಿಳೆ ತೀವ್ರ ಗಾಯಗೊಂಡಿರುವ ಘಟನೆ ಆಂಡರಸನ್ಪೇಟೆ ಬಳಿ ಭಾನುವಾರ ನಡೆದಿದೆ.

ತಮಿಳುನಾಡಿನ ಗುಡಿಯಾತ್ತಂ ನಿವಾಸಿ ಲಾರೆನ್ಸ್ (60) ಮೃತರು ಎಂದು ಗುರುತಿಸಲಾಗಿದೆ. ಲಾರೆನ್ಸ್ ತಮ್ಮ ಕುಟುಂಬದ ಮಹಿಳೆ ಮತ್ತು ಮಗುವಿನ ಜೊತೆ ಬೈಕ್ನಲ್ಲಿ ಬರುತ್ತಿದ್ದಾಗ, ಅತಿವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಹಾಕಿದ್ದ ಹೆಲ್ಮೆಟ್ ದೂರ ಹೋಗಿ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಮಹಿಳೆಯ ಕಾಲಿಗೆ ಗಾಯಗಳಾಗಿವೆ. ಮಗು ಅಪಾಯದಿಂದ ಪಾರಾಗಿದೆ.

ಕುಟುಂಬದಲ್ಲಿ ನಡೆಯಬೇಕಾಗಿದ್ದ ಹುಟ್ಟುಹಬ್ಬದ ಆಚರಣೆಗೆ ಸಂಬಂಧಿಕರನ್ನು ಕರೆಯಲು ತಮಿಳುನಾಡಿನಿಂದ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಕಾರು ಚಾಲಕ ವಿಜಯಕುಮಾರ್ ಎಂಬಾತನನ್ನು ಆಂಡರಸನ್ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಡರಸನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-18-611242030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.